ಅನಿಲ್ ಕುಂಬ್ಳೆಗೆ ಶುಭ ಕೋರಿದ ಸುದೀಪ್, ಸುನಿ, ಒಡೆಯರ್

Recommended Video

Anil Kumble Birthday Special | Oneindia Kannada

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ವಿಶ್ವಕ್ರಿಕೆಟ್ ಕಂಡ ದಿಗ್ಗಜ ಸ್ಪಿನ್ ಬೌಲರ್ ಅನಿಲ್ ಕುಂಬ್ಳೆ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕರ್ನಾಟಕದ ಹೆಮ್ಮೆಯ ಕ್ರಿಕೆಟಿಗನ ಬರ್ತಡೇ ಕನ್ನಡ ನಟ ಕಿಚ್ಚ ಸುದೀಪ್ ಶುಭಕೋರಿದ್ದಾರೆ.

''ಆರೋಗ್ಯ ಮತ್ತು ಸಂತೋಷ ನಿಮಗೆ ಸಿಗಲಿ ಸರ್. ನಿಮ್ಮ ಡೆಡಿಕೇಷನ್, ಫೋಕಸ್ ಗೆ ನಾನು ಅಭಿಮಾನಿ. ಹುಟ್ಟುಹಬ್ಬದ ಶುಭಾಶಯಗಳು ಸರ್'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

ಇನ್ನು ನಿರ್ದೇಶಕ ಪವನ್ ಒಡೆಯರ್ ಕೂಡ ಅನಿಲ್ ಕುಂಬ್ಳೆ ಬರ್ತಡೇಗೆ ಶುಭ ಕೋರಿದ್ದಾರೆ. ''ಹತ್ತು ವಿಕೆಟ್ ಪಡೆದ ಭಾರತದ ಏಕೈಕ ಬೌಲರ್. ಕರ್ನಾಟಕದ ಹೆಮ್ಮೆ ಅನಿಲ್ ಕುಂಬ್ಳೆ ಸರ್ ಅವರಿಗೆ ಹುಟ್ಟುಹಬ್ಬದ ಶುಭಾಶಯ. ಯೂಟ್ಯೂಬ್ ನಲ್ಲಿ ಆ ವಿಡಿಯೋವನ್ನ ಎಷ್ಟು ಸಲ ನೋಡಿದ್ದೀನಿ ಎನ್ನುವುದು ನನಗೆ ಗೊತ್ತಿಲ್ಲ'' ಎಂದಿದ್ದಾರೆ.

Sudeep Wish To Anil Kumble Birthday

''ಎಲ್ಲಾ ಹತ್ತು ವಿಕೆಟ್ ಗಳನ್ನು ಕಬಳಿಸಿದ ವಿಶ್ವದ ಏಕಮಾತ್ರ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ...'' ಎಂದು ನಿರ್ದೇಶಕ ಸುನಿ ಕೂಡ ವಿಶ್ ಮಾಡಿದ್ದಾರೆ.

ಈ ಹಿಂದೆ ಸುದೀಪ್ ಅಭಿನಯದ ಹೆಬ್ಬುಲಿ ಸಿನಿಮಾ ತೆರೆಕಂಡ ವೇಳೆ, ಅನಿಲ್ ಕುಂಬ್ಳೆ ಸಿನಿಮಾ ನೋಡಿದ್ದರು. ಕುಟುಂಬ ಸಮೇತ ಹೆಬ್ಬುಲಿ ನೋಡಿದ್ದ ಕುಂಬ್ಳೆ, ಸುದೀಪ್ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

More from Filmibeat

English summary
Kannada actor Kiccha sudeep taken his twitter account to wish anil kumble for birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X