»   » ಬಾಲಿವುಡ್ ನಟ ಅಕ್ಷಯ್ ಕುಮಾರ್ ಗೆ ಸುದೀಪ್ ವಿಶ್ ಮಾಡಿದ್ದೇಕೆ?

ಬಾಲಿವುಡ್ ನಟ ಅಕ್ಷಯ್ ಕುಮಾರ್ ಗೆ ಸುದೀಪ್ ವಿಶ್ ಮಾಡಿದ್ದೇಕೆ?

Posted By:
Subscribe to Filmibeat Kannada

ಕನ್ನಡದ ಕಿಚ್ಚ ಸುದೀಪ್ ಬಾಲಿವುಡ್ ನಟ ಅಕ್ಷಯ್ ಕುಮಾರ್ ಗೆ ತಮ್ಮ ಟ್ವಿಟ್ಟರ್ ಮೂಲಕ ಶುಭಕೋರಿದ್ದಾರೆ. ಸುದೀಪ್, ಬರಿ ಕನ್ನಡ ನಟ-ನಟಿಯರ ಜೊತೆ ಮಾತ್ರವಲ್ಲದೇ, ತಮಿಳು, ತೆಲುಗು, ಹಿಂದಿ ಚಿತ್ರರಂಗದ ಕಲಾವಿದರ ಜೊತೆಯಲ್ಲಿ ಸ್ನೇಹ ಬೆಳಸಿಕೊಂಡಿರುವ ಕಲಾವಿದ.

ಸುದೀಪ್ ಹುಟ್ಟುಹಬ್ಬಕ್ಕೆ ಸುನೀಲ್ ಶೆಟ್ಟಿ, ರಿತೇಶ್ ದೇಶ್ ಮುಖ್ ಸೇರಿದಂತೆ ಹಲವು ಬಾಲಿವುಡ್ ನಟರು ವಿಶ್ ಮಾಡಿದ್ದರು. ಈಗ ಅದೇ ರೀತಿಯಲ್ಲಿ ಬಾಲಿವುಡ್ ನಟನ ಹುಟ್ಟುಹಬ್ಬಕ್ಕೆ ಸುದೀಪ್ ಶುಭ ಕೋರಿದ್ದಾರೆ.

8 ದಿನದಲ್ಲಿ 1 ಮಿಲಿಯನ್ ವೀಕ್ಷಕರು ನೋಡಿದ ಸುದೀಪ್ ಟೀಸರ್ ಯಾವುದು?

Sudeep wish to Bollywood Actor akshay kumar

ಹೌದು, ಇಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಜನುಮದಿನ. ಹೀಗಾಗಿ, ಕಿಚ್ಚ ಸುದೀಪ್ ಅವರು ಅಕ್ಷಯ್ ಗೆ ವಿಶ್ ಮಾಡಿದ್ದಾರೆ. ಅಕ್ಷಯ್ ಕುಮಾರ್ ತಮ್ಮ 50 ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುತ್ತಿದ್ದು, ಬಾಲಿವುಡ್ ನಟ-ನಟಿಯರಲ್ಲ ಅಕ್ಕಿಗೆ ಬರ್ತ್ ಡೇ ವಿಶ್ ಮಾಡಿದ್ದಾರೆ. ಸ್ಯಾಂಡಲ್ ವುಡ್ ಪೈಕಿ ಸುದೀಪ್ ಶುಭಕೋರಿದ್ದಾರೆ.

'ವಿಷ್ಣುವರ್ಧನ್ ಅವರ ಸ್ಥಾನ ತುಂಬಿದ ನಟ ಸುದೀಪ್' ಅಂದಿದ್ದು ಯಾರು?

Sudeep wish to Bollywood Actor akshay kumar

ಸದ್ಯ, ಅಕ್ಷಯ್ ಕುಮಾರ್ '2.0' (ರೋಬೋ-2) ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಕ್ಷಯ್ ಹುಟ್ಟುಹಬ್ಬದ ಪ್ರಯುಕ್ತ 'ಗೋಲ್ಡ್' ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಇದರ ಜೊತೆಯಲ್ಲಿ 'ಮೊಘಲ್' ಚಿತ್ರದಲ್ಲೂ ಅಕ್ಷಯ್ ಅಭಿನಯಿಸುತ್ತಿದ್ದಾರೆ.

English summary
Kannada Actor, Kiccha Sudeep wish to Bollywood Actor akshay kumar. akshay kumar is celebrating his 50 birthday today (september9)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada