ಆ ಅಪರೂಪದ ಜೋಡಿಗೆ ಸುದೀಪ್ ವಿಶ್ ಮಾಡಿದ್ದೇಕೆ.?
Recommended Video

ಸ್ಯಾಂಡಲ್ ವುಡ್ ನಟ, ಕಿಚ್ಚ ಸುದೀಪ್ ಕನ್ನಡದ ಇಬ್ಬರು ಅಪರೂಪದ ವ್ಯಕ್ತಿಗಳಿಗೆ ಶುಭ ಕೋರಿದ್ದಾರೆ. ಯಾಕಂದ್ರೆ, ಇವರಿಬ್ಬರು ಸೇರಿ ಹೊಸ ಆಡಿಯೋ ಕಂಪನಿ ಸ್ಥಾಪಿಸಿದ್ದಾರೆ.
ಹೌದು, ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಮತ್ತು ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಜೋಡಿ 'ಡಿಜೆಕೆ' ಎಂಬ ಹೆಸರಿನಲ್ಲಿ ಹೊಸ ಆಡಿಯೋ ಸಂಸ್ಥೆ ಹುಟ್ಟುಹಾಕಿದ್ದು, ಈ ಆಡಿಯೋ ಕಂಪನಿಯಲ್ಲಿ ಚಿರಂಜೀವಿ ಸರ್ಜಾ ಅಭಿನಯದ 'ಅಮ್ಮ ಐ ಲವ್ ಯೂ' ಚಿತ್ರದ ಹಾಡುಗಳನ್ನ ಮೊದಲ ಬಾರಿಗೆ ಬಿಡುಗಡೆ ಮಾಡಿದ್ದಾರೆ.
ಈ ಸಮಾರಂಭಕ್ಕೆ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಧ್ರುವ ಸರ್ಜಾ ಸೇರಿದಂತೆ ಕನ್ನಡದ ಹಲವು ಸ್ಟಾರ್ ನಟರು ಭಾಗಿಯಾಗಿದ್ದರು. ಆದ್ರೆ, ಸುದೀಪ್ ಇರಲಿಲ್ಲ. ಇದೀಗ, ವಿಡಿಯೋ ಸಂದೇಶ ಕಳುಹಿಸುವ ಮೂಲಕ ಆತ್ಮೀಯ ವ್ಯಕ್ತಿಗಳಿಗೆ ವಿಶ್ ಮಾಡಿದ್ದಾರೆ.

''ಬೇರೆ ಕಾರಣಾಂತರಗಳಿಂದ ನಾನು ಭಾಗಿಯಾಗಲು ಸಾಧ್ಯವಾಗಿಲ್ಲ. ಆದ್ರೆ, ನನ್ನ ಶುಭಾಶಯ ನಿಮ್ಮ ಜೊತೆ ಇದ್ದೇ ಇರುತ್ತೆ. ನನಗೆ ತುಂಬ ಆತ್ಮೀಯರಾದ ದ್ವಾರಕೀಶ್ ಮತ್ತು ಗುರುಕಿರಣ್ ಜೋಡಿಯಿಂದ 'ಡಿಜೆಕೆ' ಆಡಿಯೋ ಕಂಪನಿ ಆರಂಭವಾಗಿದೆ. ಇಬ್ಬರಿಗೂ ಮತ್ತು ಈ ಆಡಿಯೋ ಕಂಪನಿಗೂ ಒಳ್ಳೆಯದಾಗಲಿ ಎಂದು ವಿಶ್ ಮಾಡಿದ್ದಾರೆ.
ಇನ್ನು ಇದೇ ವೇಳೆ ಮಾತನಾಡಿದ ಸುದೀಪ್ '''ಡಿಜೆಕೆ' ಆಡಿಯೋ ಕಂಪನಿ ಮೂಲಕ 'ಅಮ್ಮ ಐ ಲವ್ ಯೂ' ಸಿನಿಮಾದ ಹಾಡುಗಳು ಬಿಡುಗಡೆಯಾಗುತ್ತಿದೆ. ಚಿರು ಸರ್ಜಾ ಅವರಿಗೂ ನನ್ನ ಬೆಸ್ಟ್ ವಿಶಸ್. ಈಗಷ್ಟೆ ಮದುವೆ ಆಗಿದ್ದೀರಾ. ಖಂಡಿತಾ ನಿಮ್ಮ ಪತ್ನಿಯಿಂದ ಮತ್ತಷ್ಟು ಅದೃಷ್ಟ ನಿಮ್ಮದಾಗಲಿ'' ಎಂದು ಮನಪೂರ್ವಕವಾಗಿ ಶುಭಕೋರಿದ್ದಾರೆ.

ಇನ್ನುಳಿದಂತೆ 'ಅಮ್ಮ ಐ ಲವ್ ಯೂ' ಜೂನ್ 15 ರಂದು ತೆರೆಗೆ ಬರ್ತಿದೆ. ಕೆ.ಎಂ ಚೈತನ್ಯ ನಿರ್ದೇಶನ ಈ ಚಿತ್ರಕ್ಕೆ ಚಿರಂಜೀವಿ ಸರ್ಜಾ ನಾಯಕನಾಗಿದ್ದು, ಹಿರಿಯ ನಟಿ ಸಿತಾರ ತಾಯಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಾಯಕಿಯಾಗಿ ನಿಶ್ವಿಕಾ ನಾಯ್ಡು ಕಾಣಿಸಿಕೊಂಡಿದ್ದಾರೆ.


Click it and Unblock the Notifications











