For Quick Alerts
  ALLOW NOTIFICATIONS  
  For Daily Alerts

  ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವಕ್ಕೆ ಶುಭ ಕೋರಿದ ಸುದೀಪ್

  By Bharath Kumar
  |

  ಸಾಹಸ ಸಿಂಹ, ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಅವರ ಅಭಿಮಾನದ ಕೀರ್ತಿ ಪತಾಕೆಯನ್ನ ರಾಷ್ಟ್ರಮಟ್ಟದಲ್ಲಿ ಹಾರಿಸಲು 'ಡಾ.ವಿಷ್ಣು ಸೇನಾ ಸಮಿತಿ' ಸಿದ್ದವಾಗಿದೆ.

  ಇದೇ ಆಗಸ್ಟ್ 27 ರಂದು ದೆಹಲಿಯಲ್ಲಿ 'ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ' ಹಮ್ಮಿಕೊಳ್ಳಲಾಗಿದ್ದು, ದೇಶ-ವಿದೇಶಗಳಿಂದ ವಿಷ್ಣು ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

  ವಿಷ್ಣು ಸೇನಾ ಸಮಿತಿಯಿಂದ ದೆಹಲಿಯಲ್ಲಿ 'ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ'

  ಡಾ.ವಿಷ್ಣುವರ್ಧನ್ ಅವರ ಆದರ್ಶ, ಕೊಡುಗೆ, ಜೀವನ, ಹೀಗೆ.....ವಿಷ್ಣು ಅವರು ನಡೆದು ಬಂದ ಹಾದಿಯನ್ನ ಈ ಉತ್ಸವದಲ್ಲಿ ಸ್ಮರಿಸಲಾಗುತ್ತಿದೆ. ಇಂತಹ ಕಾರ್ಯಕ್ರಮಕ್ಕೆ ರಾಜಕೀಯ ಗಣ್ಯರು, ಸಿನಿಮಾ ದಿಗ್ಗಜರು ಕೂಡ ಸಾಕ್ಷಿಯಾಗುತ್ತಿದ್ದಾರೆ. ಈ ಕಾರ್ಯಕ್ರಮಕ್ಕೀಗ ನಟ ಸುದೀಪ್ ಶುಭ ಕೋರಿದ್ದಾರೆ.

  ಡಾ.ವಿಷ್ಣುವರ್ಧನ್ 'ರಾಷ್ಟ್ರೀಯ ಉತ್ಸವ'ಕ್ಕೆ ಆಸ್ಟ್ರೇಲಿಯಾದಿಂದ ಅಭಿಮಾನಿಗಳ ಆಗಮನ

  ''ವಿಷ್ಣುವರ್ಧನ್ ನಮ್ಮ ಲೆಜೆಂಡ್ ಮತ್ತು ನನ್ನ ಆದರ್ಶ'' ಎನ್ನುವ ಮೂಲಕ ವಿಷ್ಣುದಾದ ಅವರ ಮೇಲಿನ ಅಭಿಮಾನ ಮೆರೆದಿದ್ದಾರೆ. ಅಷ್ಟೇ ಅಲ್ಲದೇ ದೆಹಲಿಯಲ್ಲಿ ನಡೆಯಲಿರುವ 'ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ' ಯಶಸ್ಸಾಗಲಿ ಎಂದು ಶುಭ ಕೋರಿದ್ದಾರೆ.

  ಆಗಸ್ಟ್ 27 ರಂದು ಭಾನುವಾರ ದೆಹಲಿಯಲ್ಲಿರುವ ಕರ್ನಾಟಕ ಸಂಘದ ಆವರಣದಲ್ಲಿ 'ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ' ನಡೆಯುತ್ತಿದೆ. ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ ಅವರ ನೇತೃತ್ವ ಹಾಗೂ ಕವಿರತ್ನ ವಿ.ನಾಗೇಂದ್ರ ಪ್ರಸಾದ್ ಅವರು ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.

  ಡಾ.ವಿಷ್ಣುವರ್ಧನ್ ಹೆಸರಿನಲ್ಲಿ 'ರಾಷ್ಟ್ರೀಯ ಉತ್ಸವ' ನಡೆಸುವ ಔಚಿತ್ಯವೇನು.?

  English summary
  Kannada Actor Sudeep has taken his twitter account to Wish to dr vishnuvardhan national festival

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X