For Quick Alerts
  ALLOW NOTIFICATIONS  
  For Daily Alerts

  'ಕರಿಯ'ನಿಗೆ ವಿಶ್ ಮಾಡಿದ ಕಿಚ್ಚ ಸುದೀಪ್

  By Bharath Kumar
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಂತರ 'ಅಭಿನಯ ಚಕ್ರವರ್ತಿ' ಕಿಚ್ಚ ಸುದೀಪ್ 'ಕರಿಯ-2' ಚಿತ್ರಕ್ಕೆ ಬೆಂಬಲ ನೀಡಿದ್ದಾರೆ. 'ಗಣಪ' ಖ್ಯಾತಿಯ ಸಂತೋಷ್ ಅಭಿನಯದ 'ಕರಿಯ-2' ಸಿನಿಮಾ ಈ ವಾರವಷ್ಟೇ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಗೆ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

  ಇದೀಗ, ಸಂತೋಷ್ ಅಭಿನಯದ 'ಕರಿಯ-2' ಚಿತ್ರಕ್ಕೆ ಸುದೀಪ್ ವಿಶ್ ಮಾಡಿದ್ದು, ತಮ್ಮ ಟ್ವಿಟ್ಟರ್ ನಲ್ಲಿ ನಾಯಕ ಸಂತೋಷ್ ಮತ್ತು ನಾಯಕಿ ಮಯೂರಿಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.

  ಇನ್ನು ಚಿತ್ರದ ಆರಂಭದಿಂದಲೂ ನಟ ದರ್ಶನ್ 'ಕರಿಯ-2' ಚಿತ್ರಕ್ಕೆ ಸಪೋರ್ಟ್ ಮಾಡುತ್ತಾ ಬಂದಿದ್ದಾರೆ. ಚಿತ್ರ ಟ್ರೈಲರ್ ಮತ್ತು ಹಾಡುಗಳನ್ನ ಕೂಡ ದರ್ಶನ್ ಬಿಡುಗಡೆಗೊಳಿಸಿದ್ದರು.

  ಪ್ರಭು ಶ್ರೀನಿವಾಸ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಆನೇಕಲ್ ಬಾಲರಾಜ್ ಅವರು ನಿರ್ಮಾಣ ಮಾಡಿದ್ದಾರೆ. ನಟಿ ಮಯೂರಿ ಈ ಚಿತ್ರದ ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ.

  English summary
  Kannada Actor, Kiccha Sudeep has taken his twitter account to wish Kariya 2 Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X