ಪುನೀತ್ ಕಡೆಯಿಂದ ಬಂದ ಸುದ್ದಿ ಕೇಳಿ ದೀಪಾವಳಿ ಆಚರಿಸ್ತಾರಂತೆ ಸುದೀಪ್
Recommended Video

ಕನ್ನಡದಲ್ಲಿ ಸದ್ಯ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗ್ತಿದೆ. ಕೆಲವು ಚಿತ್ರಗಳು ಶೂಟಿಂಗ್ ಕೊನೆಯ ಹಂತದಲ್ಲಿದ್ರೆ, ಮತ್ತೆ ಕೆಲವು ರಿಲೀಸ್ ಡೇಟ್ ಅನೌನ್ಸ್ ಮಾಡಿವೆ. ಹಾಗ್ನೋಡಿದ್ರೆ, ಯಶ್ ಅಭಿನಯದ ಕೆಜಿಎಫ್ ಸಿನಿಮಾ ಡಿಸೆಂಬರ್ 21 ರಂದು ಬಿಡುಗಡೆಯಾಗುತ್ತಿದೆ.
ಅದಾದ ಬಳಿಕ ದರ್ಶನ್, ಸುದೀಪ್, ಪುನೀತ್ ರಾಜ್ ಕುಮಾರ್ ಅವರ ಮೆಗಾ ಸಿನಿಮಾಗಳು ತೆರೆಗೆ ಬರಬೇಕಿದೆ. ಇದೀಗ, ಪುನೀತ್ ಅಭಿನಯಿಸುತ್ತಿರುವ 'ನಟಸಾರ್ವಭೌಮ' ಚಿತ್ರದ ಅಡ್ಡದಿಂದ ಸಿಹಿ ಸುದ್ದಿಯೊಂದು ಹೊರಬಿದ್ದಿದೆ.
ಸದ್ಯ ಕಂಪ್ಲೀಟ್ ಶೂಟಿಂಗ್ ಮುಗಿಸಿರುವ 'ನಟಸಾರ್ವಭೌಮ' ಈಗ ಪೋಸ್ಟ್ ಪ್ರೊಡಕ್ಷನ್ ನಲ್ಲಿ ತೊಡಗಿಕೊಂಡಿದೆ. ಈ ಮಧ್ಯೆ ಪುನೀತ್ ಅಡ್ಡದಿಂದ ಒಳ್ಳೆಯ ಸುದ್ದಿಯಿಂದ ಹೊರಬಿದ್ದಿದ್ದು, ಈ ಸುದ್ದಿ ಕೇಳಿ ಸುದೀಪ್ ದೀಪಾವಳಿ ಆಚರಿಸಲು ತಯಾರಾಗ್ತಿದ್ದಾರೆ. ಅಷ್ಟಕ್ಕೂ, ಏನದು ಗುಡ್ ನ್ಯೂಸ್.? ಮುಂದೆ ಓದಿ....

ಜನವರಿಯಲ್ಲಿ 'ನಟಸಾರ್ವಭೌಮ'
ಬಹುಶಃ ಇದೇ ವರ್ಷದಲ್ಲಿ ಪುನೀತ್ ರಾಜ್ ಕುಮಾರ್ ಅವರ ನಟಸಾರ್ವಭೌಮ ಸಿನಿಮಾ ಬಿಡುಗಡೆಯಾಗಲಿದೆ ಎಂಬ ನಿರೀಕ್ಷೆ ಇತ್ತು. ಆದ್ರೆ, ಈ ವರ್ಷಾಂತ್ಯಕ್ಕೆ ಈ ಸಿನಿಮಾ ಬರೋದು ಅನುಮಾನವಾಗಿದ್ದು, ಸದ್ಯದ ಮಾಹಿತಿ ಪ್ರಕಾರ ಜನವರಿಯ 2ನೇ ವಾರದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.

ದೀಪಾವಳಿ ಆಚರಿಸ್ತಾರಂತೆ ಸುದೀಪ್
ದೀಪಾವಳಿ ಹಬ್ಬ ಈಗಾಗಲೇ ಮುಗಿದು ಹೋಗಿದೆ. ಆದ್ರೆ, ನಿಜವಾದ ದೀಪಾವಳಿ ಹಬ್ಬ ಮುಂದಿನ ತಿಂಗಳು ಬರಲಿದೆ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ. ''ಡಿಸೆಂಬರ್ ನಲ್ಲಿ ಕೆಜಿಎಫ್, ಜನವರಿಯಲ್ಲಿ ನಟಸಾರ್ವಭೌಮ....ಇದೇ ದೀಪಾವಳಿ'' ಎಂದು ಶುಭಕೋರಿದ್ದಾರೆ.

ಡಬ್ಬಿಂಗ್ ಮುಗಿಸಿದ ನಟಸಾರ್ವಭೌಮ
ಡಬ್ಬಿಂಗ್ ನಲ್ಲಿ ಭಾಗಿಯಾಗಿದ್ದ ಪುನೀತ್ ರಾಜ್ ಕುಮಾರ್ ಈಗ ಡಬ್ಬಿಂಗ್ ಪೂರ್ಣಗೊಳಿಸಿದ್ದಾರೆ. ಖುದ್ದು ಪುನೀತ್ ಅವರೇ ಈ ವಿಷ್ಯವನ್ನ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಟೀಸರ್ ಇದೇ ತಿಂಗಳು
ಈಗಾಗಲೇ ಫಸ್ಟ್ ಲುಕ್ ಟೀಸರ್ ಮೂಲಕ ಗಮನ ಸೆಳೆದಿದ್ದ 'ನಟಸಾರ್ವಭೌಮ' ನಂತರ ಪೋಸ್ಟರ್ ಗಳ ಮೂಲಕ ಸದ್ದು ಮಾಡಿತ್ತು. ಇದೀಗ, ಈ ತಿಂಗಳ ಅಂತ್ಯಕ್ಕೆ ಇನ್ನೊಂದು ಟೀಸರ್ ರಿಲೀಸ್ ಮಾಡುವ ಸಾಧ್ಯತೆ ಇದೆಯಂತೆ. ಇನ್ನುಳಿದಂತೆ ಸಾಂಗ್ ಶೂಟಿಂಗ್ ಮಾತ್ರ ಬಾಕಿಯಿದ್ದು, ಜನವರಿಯಲ್ಲಿ ಸ್ಕ್ರೀನ್ ಮೇಲೆ ಬರಲಿದೆ.


Click it and Unblock the Notifications











