'ಕರ್ನಾಟಕ ಬುಲ್ಡೋಜರ್ಸ್' ತಂಡದ ಹೊಸ ಕ್ಯಾಪ್ಟನ್ ಗೆ ಶುಭ ಕೋರಿದ ಸುದೀಪ್

Recommended Video

CCL cricket 2019: ಕರ್ನಾಟಕ ಬುಲ್ಡೋಜರ್ಸ್' ತಂಡದ ಹೊಸ ಕ್ಯಾಪ್ಟನ್ ಗೆ ಶುಭ ಕೋರಿದ ಸುದೀಪ್ | FILMIBEAT KANNADA

ಕರ್ನಾಟಕ ಬುಲ್ಡೋಜರ್ಸ್ ತಂಡದ ನೂತನ ನಾಯಕನಾಗಿ ಆಯ್ಕೆಯಾಗಿರುವ ಪ್ರದೀಪ್ ಅವರಿಗೆ ಕಿಚ್ಚ ಸುದೀಪ್ ಶುಭ ಕೋರಿದ್ದಾರೆ. ಫೆಬ್ರವರಿ 27ರಿಂದ ಆರಂಭವಾಗಲಿರುವ ಸಿಸಿಎಲ್ ಟಿ 10 ಕ್ರಿಕೆಟ್ ಲೀಗ್ ನಲ್ಲಿ ಭಾಗವಹಿಸಲು ಕರ್ನಾಟಕ ತಂಡ ಚಂಡೀಗಢಗೆ ನಿನ್ನೆ ಪ್ರಯಾಣ ಮಾಡಿದೆ.

ನೂತನ ನಾಯಕ ಪ್ರದೀಪ್, ನಿರೂಪ್ ಭಂಡಾರಿ, ಪೆಟ್ರೋಲ್ ಪ್ರಸನ್ನ, ಮದರಂಗಿ ಕೃಷ್ಣ, ರವಿಶಂಕರ್ ಗೌಡ, ಜೆಕೆ ಸೇರಿದಂತೆ ಹಲವು ಈಗಾಗಲೇ ಚಂಡಿಗಢ ಸೇರಿಕೊಂಡಿದ್ದಾರೆ. ಈ ಫೋಟೋವನ್ನ ನೂತನ ಕ್ಯಾಪ್ಟನ್ ಪ್ರದೀಪ್ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದರು.

ಈ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಸುದೀಪ್ ''ಹೊಸ ಕ್ಯಾಪ್ಟನ್ ಜೊತೆಯಲ್ಲಿ ನಾನು ಆಡಲು ಉತ್ಸುಕನಾಗಿದ್ದೇನೆ. ಆದಷ್ಟೂ ಬೇಗ ತಂಡ ಸೇರಿಕೊಳ್ಳಲಿದ್ದೇನೆ. ಜೈ ಕನ್ನಡ....ಜೈ ಕರ್ನಾಟಕ ಬುಲ್ಡೋಜರ್ಸ್'' ಎಂದು ಟ್ವೀಟ್ ಮಾಡಿದ್ದಾರೆ.

ಕಳೆದ ಕೆಲ ತಿಂಗಳಿನಿಂದ ಸುದೀಪ್ ಸಿಸಿಎಲ್ ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕನ ಸ್ಥಾನವನ್ನ ಬಿಟ್ಟುಕೊಟ್ಟಿದ್ದಾರೆ ಎಂಬ ಸುದ್ದಿ ಇತ್ತು. ಆದ್ರೀಗ, ಅದು ಅಧಿಕೃತವಾಗಿದೆ. ಈಗ ಸುದೀಪ್ ಕೇವಲ ಹಿರಿಯ ಆಟಗಾರನಾಗಿ ತಂಡದಲ್ಲಿ ಆಡಲಿದ್ದಾರೆ.

ಇನ್ನು ಫೆಬ್ರವರಿ 27, 28 ಹಾಗೂ ಮಾರ್ಚ್ 1 ಮತ್ತು 2 ರಂದು ಸಿಸಿಎಲ್ ಟಿ 10 ಟೂರ್ನಿ ನಡೆಯಲಿದ್ದು, ಒಟ್ಟು ಆರು ಇಂಡಸ್ಟ್ರಿಯ ಸಿನಿಮಾ ಕಲಾವಿದರು ಪಾಲ್ಗೊಳ್ಳಲಿದ್ದಾರೆ.

Sudeep wish to new captain pradeep

ಕರ್ನಾಟಕ ಬುಲ್ಡೋಜರ್ಸ್, ಮುಂಬೈ ಹೀರೋಸ್, ತೆಲುಗು ವಾರಿಯರ್ಸ್, ಬೆಂಗಾಲ್ ಟೈಗರ್ಸ್, ಪಂಜಾಬ್ ದಿ ಶೇರ್, ಬೋಜ್ ಫುರಿ ದಬಾಂಗ್ಸ್ ತಂಡಗಳು ಭಾಗಿಯಾಗಲಿದೆ. ಒಟ್ಟು 200 ಸ್ಟಾರ್ ಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದು, 13 ಪಂದ್ಯಗಳು ನಡೆಯಲಿದೆ. ಚಂಡಿಘಡ್ ನ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯಲಿದೆ.

More from Filmibeat

English summary
The celebrity T20 tournament between the various Indian film industries is currently underway in Chandigarh. The Kannada film team, which includes names like Madarangi Krishna, Nirup Bhandari, J Karthik and Prathap Narayan, has a new captain.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X