For Quick Alerts
  ALLOW NOTIFICATIONS  
  For Daily Alerts

  ತಮಿಳು ನಟ ಅಜಿತ್ ಗೆ ವಿಶ್ ಮಾಡಿದ ಕಿಚ್ಚ ಸುದೀಪ್

  By Bharath Kumar
  |

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ಪರಭಾಷೆಯಲ್ಲಿ ದೊಡ್ಡ ಅಭಿಮಾನಿ ಬಳಗವಿದೆ. ಅದೇ ರೀತಿ ಪರಭಾಷೆ ನಟರ ಜೊತೆಯೂ ಸುದೀಪ್ ಸ್ನೇಹ ಉತ್ತಮವಾಗಿದೆ. ಇದೀಗ, ತಮಿಳು ನಟ ಅಜಿತ್ ಕುಮಾರ್ ಗೆ ಸುದೀಪ್ ಶುಭಾಶಯ ಕೋರಿದ್ದಾರೆ.

  ಹೌದು, ತಮಿಳು ಸೂಪರ್ ಸ್ಟಾರ್ ಅಜಿತ್ ಕುಮಾರ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅಜಿತ್ ಫ್ಯಾನ್ಸ್ ತಮ್ಮ ನೆಚ್ಚಿನ ನಟನ ಜನುಮದಿನವನ್ನ ಆಚರಿಸುತ್ತಿದ್ದಾರೆ. ಅಜಿತ್ ಅಭಿಮಾನಿಗಳ ಜೊತೆ ಕಿಚ್ಚನ ಅಭಿಮಾನಿಗಳು ಕೂಡ ಅಜಿತ್ ಬರ್ತಡೇಗೆ ವಿಶ್ ಮಾಡಿದ್ದಾರೆ.

  ಇನ್ನು ಅಜಿತ್ ಗೆ ಟ್ವಿಟ್ಟರ್ ಮೂಲಕ ವಿಶ್ ಮಾಡಿರುವ ಸುದೀಪ್ '' ಒಬ್ಬ ಅತ್ಯುತ್ತಮ ವ್ಯಕ್ತಿ ಅಜಿತ್, ನಡೆದಾಡಿ, ಓಡಿ, ಜಾರಿ, ಕುಸಿದು ಬಿದ್ದು, ನಂತರ ಎದ್ದು ನಿಂತು ಎಲ್ಲವನ್ನ ಪಡೆದುಕೊಂಡ ನಟ. ಹ್ಯಾಪಿ ಬರ್ತಡೇ ಅಜಿತ್ ಸರ್'' ಎಂದು ಮನಸಾರೆ ಶುಭಕೋರಿದ್ದಾರೆ.

  ಕಳೆದ ವರ್ಷ ತೆರೆಕಂಡಿದ್ದ 'ವೀವೆಗಂ' ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಗೆಲವು ಕಂಡಿತ್ತು. ಸದ್ಯ, 'ವಿಶ್ವಾಸಂ' ಎಂಬ ಹೊಸ ಚಿತ್ರದಲ್ಲಿ ಅಜಿತ್ ಅಭಿನಯಿಸುತ್ತಿದ್ದಾರೆ.

  ಇನ್ನು ಮತ್ತೊಂದೆಡೆ ಸುದೀಪ್ ಕೂಡ ಕನ್ನಡ ಸೇರಿದಂತೆ ಬೇರೆ ಭಾಷೆಯ ಪ್ರಾಜೆಕ್ಟ್ ಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ಚಿರಂಜೀವಿ ಅಭಿನಯದ 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಕಿಚ್ಚ, ಅದಾದ ಬಳಿಕ ರಾಮ್ ಚರಣ್ ಚಿತ್ರವೊಂದರಲ್ಲೂ ಅಭಿನಯಿಸಲಿದ್ದಾರಂತೆ.

  English summary
  Tamil superstar Ajith Kumar also known as Ajith or Thala to his fans, has turned a year older today. Kannada Actor sudeep wish to ajith kumar for birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X