ಡಾ.ರಾಜ್ ಹುಟ್ಟುಹಬ್ಬಕ್ಕೆ ಕಿಚ್ಚ ಸುದೀಪ್ ಶುಭಕೋರಿದ್ದು ಹೀಗೆ

Recommended Video

ರಾಜ್ ಕುಮಾರ್ ಬಗ್ಗೆ ಕಿಚ್ಚ ಸುದೀಪ್ ಏನಂದ್ರು ಗೊತ್ತಾ? | FILMIBEAT KANNADA

ಏಪ್ರಿಲ್ ತಿಂಗಳು ಅಂದ್ರೆ ಡಾ ರಾಜ್ ಕುಮಾರ್ ತಿಂಗಳು ಅಂತಾನೆ ಕರೆಯಲಾಗುತ್ತೆ. ಅದರಲ್ಲೂ ಏಪ್ರಿಲ್ 24 ರಾಜ್ ಅಭಿಮಾನಿಗಳಿಗೆ ದೊಡ್ಡ ಹಬ್ಬ. ಕನ್ನಡದ ಮೇರು ನಟ, ಪದ್ಮಭೂಷಣ ಡಾ.ರಾಜ್ ಕುಮಾರ್ ಅವರು ಹುಟ್ಟಿದ ದಿನ. ಇಂದು ಅಭಿಮಾನಿಗಳು ರಾಜ್ಯದಾದ್ಯಂತ ರಾಜ್ ಕುಮಾರ್ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ.

ಡಾ.ರಾಜ್ ಕುಮಾರ್ ಅವರ 91ನೇ ವರ್ಷದ ಹುಟ್ಟುಹಬ್ಬಕ್ಕೆ ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೆ ಹರಿದು ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ರಾಜ್ ಅಭಿಮಾನಿಗಳ ದೊಡ್ಡ ಜಾತ್ರೆಯೆ ನಡೆಯುತ್ತಿದೆ. ಕನ್ನಡದ ಮೇರು ನಟನಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಶುಭಕೋರಿದ್ದಾರೆ.

sudeep wished dr.raj kumar a happy birthday

"ಇಂದು ಕನ್ನಡದ ಶ್ರೇಷ್ಠ ಲೆಜೆಂಡ್ ಹುಟ್ಟಿದ ದಿನ. ತನ್ನ ಕೆಲಸದ ಮೂಲಕವೇ ಅಭಿಮಾನಿಗಳ ಮನದಲ್ಲಿ ಇನ್ನೂ ಜೀವಂತವಾಗಿದ್ದಾರೆ ಡಾ.ರಾಜ್ ಕುಮಾರ್. ಖಂಡಿತವಾಗಿ ಇಂದು ಅವರ ಎಲ್ಲಾ ಅಭಿಮಾನಿಗಳಿಗೆ ಮತ್ತು ಕುಟುಂಬದವರಿಗೆ ದೊಡ್ಡ ಹಬ್ಬ. ಎಲ್ಲರಿಗೂ ಏಪ್ರಿಲ್ 24ರ ಶುಭಾಶಯಗಳು" ಎಂದು ಸುದೀಪ್ ಟ್ವೀಟ್ ಮಾಡುವ ಮೂಲಕ ಡಾ ರಾಜ್ ಕುಮಾರ್ ಅವರಿಗೆ ಶುಭಾಶಯ ತಿಳಿಸಿದ್ದಾರೆ.

ಈಗಾಗಲೆ ಅಪಾರ ಸಂಖ್ಯೆಯ ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬದ ಪ್ರಯುಕ್ತ ಕಂಠೀರವ ಸ್ಟುಡಿಯೋದಲ್ಲಿರುವ ಡಾ.ರಾಜ್ ಸ್ಮಾರಕದ ಬಳಿ ಜಮಾಯಿಸಿದ್ದಾರೆ. ಇನ್ನು ರಾಜ್ ಕುಮಾರ್ ಮಕ್ಕಳು ಮೊಮ್ಮಕ್ಕಳು ಸೇರಿದಂತೆ ಇಡೀ ರಾಜ್ ಕುಟುಂಬ ಕಂಠೀರವ ಸ್ಟುಡಿಯೋಗೆ ಆಗಮಿಸಿ ರಾಜ್ ಸ್ಮಾರಕಕ್ಕೆ ಪೂಜೆ ಸಲ್ಲಿಸಲಿದ್ದಾರೆ. ನೆಚ್ಚಿನ ನಟನ ಹುಟ್ಟುಹಬ್ಬದ ಪ್ರಯುಕ್ತ ಅನ್ನ ಸಂತರ್ಪಣೆ, ರಕ್ತದಾನ, ನೇತ್ರದಾನ ಶಿಬಿರಗಳನ್ನು ಆಯೋಜಿಸಲಾಗಿದೆ.

More from Filmibeat

English summary
kannada actor abhinaya chakravarthi kiccha sudeep wished the legend dr.raj kumar a happy birthday through his twitter page. Today dr.raj kumar 90th birth anniversery.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X