For Quick Alerts
  ALLOW NOTIFICATIONS  
  For Daily Alerts

  ನಟಿ ರಮ್ಯಾಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಸುದೀಪ್

  |

  ಖ್ಯಾತ ಕನ್ನಡ ನಟಿ ರಮ್ಯಾ ಸಿನಿಮಾರಂಗದಲ್ಲಿ ಬಹುತೇಕ ದೂರವಾಗಿದ್ದಾರೆ. ರಾಜಕಾರಣದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದ ಅವರು, ಅಲ್ಲಿಯೂ ಅಂತರ ಕಾಯ್ದುಕೊಂಡಿದ್ದಾರೆ.

  ಕನ್ನಡದಲ್ಲಿ ಹಲವಾರು ಹಿಟ್ ಸಿನಿಮಾಗಳನ್ನು ನೀಡಿರುವ ನಟಿ ರಮ್ಯಾ ಅವರ ಹುಟ್ಟುಹಬ್ಬವಿಂದು. ರಮ್ಯಾ ರನ್ನು ಕನ್ನಡ ಚಿತ್ರರಂಗ ನಿಧಾನಕ್ಕೆ ಮರೆಯುತ್ತಿರುವ ಸಮಯದಲ್ಲಿ ನಟ ಸುದೀಪ್ ಅವರು ರಮ್ಯಾ ಅವರನ್ನು ನೆನಪಿಸಿಕೊಂಡು ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

  ನಟ ಸುದೀಪ್, ಟ್ವಿಟ್ಟರ್‌ನಲ್ಲಿ ರಮ್ಯಾ ಅವರ ಚಿತ್ರ ಪ್ರಕಟಿಸಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. 'ನಿಮ್ಮೊಂದಿಗೆ ಮಾಡಿದ ಸಿನಿಪಯಣ ನೆನಪುಳಿಯುವಂತಹದ್ದು, ಸದಾ ಸಂತೋಶದಿಂದಿರಿ, ಸಂತೋಶವಾಗಿ ಹುಟ್ಟುಹಬ್ಬ ಆಚರಿಸಿ' ಎಂದು ಸುದೀಪ್ ಶುಭಹಾರೈಸಿದ್ದಾರೆ.

  ನಟ ಸುದೀಪ್ ಹಾಗೂ ರಮ್ಯಾ ನಾಲ್ಕು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ರಂಗ ಎಸ್‌ಎಸ್‌ಎಲ್‌ಸಿ, ಮುಸ್ಸಂಜೆ ಮಾತು, ಜಸ್ಟ್‌ ಮಾತ್ ಮಾತಲ್ಲಿ ಮತ್ತು ಕಿಚ್ಚ-ಹುಚ್ಚ.

  ಸುದೀಪ್ ಮತ್ತು ರಮ್ಯಾ ಒಂದು ಸಮಯದಲ್ಲಿ ಜಗಳವಾಡಿ ಸ್ನೇಹ ಕಡಿದುಕೊಂಡಿದ್ದರು, ಆದರೆ ಆ ನಂತರ ಎಲ್ಲವನ್ನೂ ಮರೆತು ಒಟ್ಟಿಗೆ ಸಿನಿಮಾಗಳಲ್ಲಿ ನಟಿಸಿದರು.

  ಇವರಿಬ್ಬರಲ್ಲಿ Sudeep ಗೆ ಯಾರಾಗಲಿದ್ದಾರೆ ಪರ್ಫೆಕ್ಟ್ ಜೋಡಿ | Filmibeat Kannada

  2016 ರಲ್ಲಿ ನಟಿಸಿದ ನಾಗರಹಾವು, ರಮ್ಯಾ ನಟಿಸಿದ ಕೊನೆಯ ಸಿನಿಮಾ. ಆ ನಂತರ ಅವರು ಬಣ್ಣ ಹಚ್ಚಿಲ್ಲ. ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡುತ್ತಿದ್ದ ರಮ್ಯಾ, ಲೋಕಸಭೆ ಚುನಾವಣೆ ಬಳಿಕ, ಕಾಂಗ್ರೆಸ್‌ನಿಂದಲೂ ತುಸು ಅಂತರ ಕಾಯ್ದುಕೊಂಡಿದ್ದಾರೆ.

  English summary
  Sudeep wishsed his former co actress Ramya. Today is Ramya's birthday. She did not seen in any movie from last 4 years.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X