ನಟ ಪ್ರದೀಪ್ ಹಾಗೂ ಪತ್ನಿ ಬಗ್ಗೆ ಸುದೀಪ್ ದಂಪತಿ ಟ್ವೀಟ್

ನಟ ಪ್ರದೀಪ್ ಹಾಗೂ ಅವರ ಪತ್ನಿ ಇಂಚರ ಇಂದು ತಮ್ಮ ವಿವಾಹ ವಾರ್ಷಿಕೋತ್ಸವದ ಸಂತಸದಲ್ಲಿ ಇದ್ದಾರೆ. ಈ ಖುಷಿಯ ಕ್ಷಣದಲ್ಲಿ ಸುದೀಪ್ ಹಾಗೂ ಪತ್ನಿ ಪ್ರಿಯಾ ಸುದೀಪ್ ಶುಭಾಶಯ ತಿಳಿಸಿದ್ದಾರೆ.

ಪ್ರದೀಪ್ ದಂಪತಿಗೆ ಟ್ವಿಟ್ಟರ್ ನಲ್ಲಿ ಸುದೀಪ್ ಹಾಗೂ ಪ್ರಿಯಾ ಸುದೀಪ್ ವಿಶ್ ಮಾಡಿದ್ದಾರೆ. ''ಹೋ.... ಆಗಲೇ ಐದು ವರ್ಷ ಆಯ್ತೇ.. ಚೆರ್ಸ್ ಲವ್ ಬರ್ಡ್..'' ಎಂದು ಕಿಚ್ಚ ಟ್ವೀಟ್ ಮಾಡಿದ್ದಾರೆ. ಪ್ರಿಯಾ ಸುದೀಪ್ ''ಪ್ರೀತಿಯ ಪ್ರೇಮ ಪಕ್ಷಿಗಳಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಎಂದು ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಸುದೀಪ್ ಹಾಗೂ ಪ್ರಿಯಾ ಸುದೀಪ್ ಇಬ್ಬರಿಗೆ ಪ್ರದೀಪ್ ತುಂಬ ಆಪ್ತರು. ಅವರ ಕುಟುಂಬದ ಒಬ್ಬ ಸದಸ್ಯನಂತೆ ಪ್ರದೀಪ್ ರನ್ನ ಸುದೀಪ್ ನೋಡುತ್ತಾರೆ. ಸಿನಿಮಾ ಮಾತ್ರವಲ್ಲದೆ ಸುದೀಪ್ ಗೆ ಸಿಸಿಎಲ್ ನಲ್ಲಿಯೂ ಪ್ರದೀಪ್ ಜೊತೆಯಾಗಿದ್ದಾರೆ.

sudeep wishes for actor pradeep wedding anniversary

'ಜಾಲಿಡೇಸ್', 'ಟೈಗರ್' 'ರಂಗಿನ್ ಸ್ಟೈಲ್' ಸೇರಿದಂತೆ ಕೆಲ ಸಿನಿಮಾಗಳಲ್ಲಿ ಪ್ರದೀಪ್ ನಟಿಸಿದ್ದಾರೆ. ಇನ್ನು ಪ್ರದೀಪ್ ಪತ್ನಿ ಇಂಚರ ಅವರು ನಟ ಶಿವರಾಮ್ ಅವರ ಪುತ್ರಿ.

ವಿವಾಹ ವಾರ್ಷಿಕೋತ್ಸವದ ದಿನ ಪತ್ನಿ ಇಂಚರ ಜೊತೆಗಿನ ಮುದ್ದಾದ ಫೋಟೋವನ್ನು ಪ್ರದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿ ಸಂಭ್ರಮ ಪಟ್ಟಿದ್ದಾರೆ. ಅಭಿಮಾನಿಗಳೂ ಅವರಿಗೆ ಶುಭ ಹಾರೈಸುತ್ತಿದ್ದಾರೆ.

More from Filmibeat

English summary
Sudeep and Priya Sudeep wishes for actor pradeep wedding anniversary.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X