'ಅರ್ಜುನ'ನಿಗೆ ಕೃಷ್ಣನ ದಾರಿ : ಜನ್ಯಗೆ ಜೀವ ನೀಡಿದ್ದ ಸುದೀಪ್

Recommended Video

ಅರ್ಜುನ'ನಿಗೆ ಕೃಷ್ಣನ ದಾರಿ : ಜನ್ಯಗೆ ಜೀವ ನೀಡಿದ್ದ ಸುದೀಪ್ |FILMIBEAT KANNADA

ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಈಗ ಸೆಂಚುರಿ ಬಾರಿಸುವ ಸನಿಹದಲ್ಲಿದ್ದಾರೆ. ಇನ್ನ ಒಂದು ರನ್ ಹೊಡೆದರೆ ಅವರು ಬ್ಯಾಟ್ ಎತ್ತಿ ವಿಜಯೋತ್ಸವನ್ನು ಆಚರಿಸಬಹುದಾಗಿದೆ.

ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಈಗ 100 ಸಿನಿಮಾಗಳನ್ನು ಪೂರೈಸುತ್ತಿದ್ದಾರೆ. ಗಣೇಶ್ ನಟನೆಯ '99' ಸಿನಿಮಾ ಜನ್ಯ ಪಾಲಿಗೆ ನೂರನೇ ಸಿನಿಮಾವಾಗಲಿದೆ. ತಮ್ಮ ಸಿನಿ ಪಯಣದಲ್ಲಿ ಸಾಕಷ್ಟು ಸೂಪರ್ ಹಿಟ್ ಗೀತೆಗಳನ್ನು ನೀಡಿರುವ ಜನ್ಯ ಕನ್ನಡದ ನಂಬರ್ 1 ಮ್ಯೂಸಿಕ್ ಡೈರೆಕ್ಟರ್ ಆಗಿದ್ದಾರೆ.

ಜನ್ಯ ನೂರರ ಸಂಭ್ರಮದ ಬಗ್ಗೆ 'ಫಿಲ್ಮಿಬೀಟ್ ಕನ್ನಡ' ನಿನ್ನೆ ಲೇಖನವೊಂದನ್ನ ಪ್ರಕಟ ಮಾಡಿತ್ತು. ಈ ಲೇಖನವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಜನ್ಯ ಸಂತಸ ವ್ಯಕ್ತಪಡಿಸಿದ್ದರು.

ಇದೀಗ ಅರ್ಜುನ್ ಜನ್ಯಗೆ ನಟ ಸುದೀಪ್ ಸಹ ಶುಭಾಶಯ ತಿಳಿಸಿದ್ದಾರೆ. ಅರ್ಜುನನಿಗೆ ಕೃಷ್ಣ ಮನಸಾರೆ ಹರಸಿದ್ದಾರೆ. ಮುಂದೆ ಓದಿ...

'ಕೆಂಪೇಗೌಡ' ಎಂಬ ಮರುಹುಟ್ಟು

'ಕೆಂಪೇಗೌಡ' ಎಂಬ ಮರುಹುಟ್ಟು

ಸುದೀಪ್ ಅವರ 'ಕೆಂಪೇಗೌಡ' ಸಿನಿಮಾ ಅರ್ಜುನ್ ಜನ್ಯ ಪಾಲಿಗೆ ಮರುಹುಟ್ಟು ನೀಡಿದ್ದ ಸಿನಿಮಾವಾಗಿದೆ. ಆ ಸಮಯಕ್ಕೆ ಜನ್ಯ ಅಷ್ಟೊಂದು ಜನಪ್ರಿಯತೆ ಹೊಂದಿರಲಿಲ್ಲ. ಅವರು ಸಂಗೀತ ನೀಡಿದ್ದ ಸಿನಿಮಾಗಳು ಸೋಲುತ್ತವೆ ಎಂಬ ಮಾತೂ ಇತ್ತು. ಆದರೆ, ಅಂತಹ ವೇಳೆ ಸುದೀಪ್ ತಮ್ಮ 'ಕೆಂಪೇಗೌಡ' ಚಿತ್ರಕ್ಕೆ ಅರ್ಜುನ್ ಅವರನ್ನು ಆಯ್ಕೆ ಮಾಡಿಕೊಂಡರು.

'ಅರ್ಜುನ'ನಿಗೆ ದಾರಿ ತೋರಿದ 'ಕೃಷ್ಣ'

'ಅರ್ಜುನ'ನಿಗೆ ದಾರಿ ತೋರಿದ 'ಕೃಷ್ಣ'

'ಕೆಂಪೇಗೌಡ' ಸಿನಿಮಾದ ನಿರ್ದೇಶನವನ್ನ ಮಾಡಿದ್ದ ಸುದೀಪ್ ಜನ್ಯಗೆ ಜೀವ ನೀಡಿದ್ದರು. 'ಮುಕುಂದ ಮುರಾರಿ' ಸಿನಿಮಾದಲ್ಲಿ ಕೃಷ್ಣನ ಪಾತ್ರ ಮಾಡಿದ್ದ ಸುದೀಪ್ ಅದಕ್ಕೂ ಹಿಂದೆಯೇ ಅರ್ಜುನನಿಗೆ ಕೃಷ್ಣನಾಗಿ 'ಕೆಂಪೇಗೌಡ' ಚಿತ್ರದ ಮೂಲಕ ದಾರಿ ತೋರಿಸಿದ್ದರು. 'ಕೆಂಪೇಗೌಡ' ಚಿತ್ರದಿಂದ ಇಲ್ಲಿಯವರೆಗೆ ಜನ್ಯ ನಾನ್ ಸ್ಟಾಪ್ ಆಗಿ ಓಡುತ್ತಿದ್ದಾರೆ.

ಸುದೀಪ್ ಟ್ವೀಟ್

ಅರ್ಜುನ್ ಜನ್ಯ ಈಗ ನೂರು ಸಿನಿಮಾಗಳನ್ನು ಪೂರೈಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್ ''ನಿಮ್ಮ ನೂರನೇ ಸಿನಿಮಾಗೆ ಶುಭವಾಗಲಿ. ಈ ಯಶಸ್ಸಿಗೆ ನೀವು ಅರ್ಹವಾದ ವ್ಯಕ್ತಿ. ಒಂದು ಅದ್ಭುತ ಜರ್ನಿಯನ್ನು ಸಾಧನೆ ಮಾಡಿದ್ದೀಯಾ. ನನ್ನ ಸಿನಿಮಾ ಪಯಣದಲ್ಲಿ ನೀವು ನನ್ನ ಭಾಗ ಆಗಿರುವುದು ಖುಷಿ. ನೀವು ಒಬ್ಬ ಮ್ಯೂಸಿಜಿಯನ್ ಮಾತ್ರವಲ್ಲದೆ ಒಬ್ಬ ಮನುಷ್ಯನಾಗಿ ಕೂಡ ಪ್ರಬುದ್ಧರು. ಇದೇ ರೀತಿ ನಮಗೆ ಮನರಂಜನೆ ನೀಡುತ್ತಿರಿ.'' ಎಂದು ಸುದೀಪ್ ಶುಭಾಶಯ ತಿಳಿಸಿದ್ದಾರೆ.

ನೀವು ನನ್ನ ಗಾಢ್ ಫಾದರ್

ಸುದೀಪ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಅರ್ಜುನ್ ಜನ್ಯ ''ನಿಮ್ಮ ಪ್ರೋತ್ಸಾಹ ಇಲ್ಲದಿದ್ದರೆ ನಾನು ಏನು ಅಲ್ಲ. ನೀವು ಯಾವಾಗಲೂ ನನ್ನ ಗಾಡ್ ಫಾದರ್. ನಿಮ್ಮ ಸಾಧನೆಗೆ ಹೋಲಿಸಿದರೆ ನನ್ನ ಸಾಧನೆ ತುಂಬ ಚಿಕ್ಕದು.'' ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

ಸುದೀಪ್ - ಅರ್ಜುನ್ ಸಿನಿಮಾಗಳು

ಸುದೀಪ್ - ಅರ್ಜುನ್ ಸಿನಿಮಾಗಳು

'ಕೆಂಪೇಗೌಡ' ದಿಂದ ಶುರುವಾದ ಅರ್ಜುನ್ ಜನ್ಯ - ಸುದೀಪ್ ಕಾಂಬಿನೇಶನ್ ಸಾಕಷ್ಟು ಹಿಟ್ ಹಾಡುಗಳಿಗೆ ಸಾಕ್ಷಿಯಾಗಿದೆ. 'ಮಾಣಿಕ್ಯ', 'ಮುಕುಂದ ಮುರಾರಿ' 'ಹೆಬ್ಬುಲಿ', 'ಅಂಬಿ ನಿಂಗೆ ವಯಸ್ಸಾಯ್ತೋ', 'ದಿ ವಿಲನ್' ಚಿತ್ರಗಳಲ್ಲಿ ಜನ್ಯ ಸಂಗೀತ ಸುದೆ ಹರಿಸಿದ್ದಾರೆ. ಜೊತೆಗೆ, ಇದೀಗ 'ಪೈಲ್ವಾನ್' ಹಾಗೂ 'ಕೋಟಿಗೊಬ್ಬ 3' ಚಿತ್ರಗಳಲ್ಲಿಯೂ ಜನ್ಯ ಕೆಲಸ ಮಾಡುತ್ತಿದ್ದಾರೆ.

More from Filmibeat

English summary
Kannada actor Sudeep wishes for music director Arjun Janya 100th movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X