ಡೈರೆಕ್ಟರ್ ಆದ ದುನಿಯಾ ವಿಜಯ್ ಗೆ ಸುದೀಪ್ ಸಲಹೆ

Recommended Video

ದುನಿಯಾ ವಿಜಯ್ ಗೆ ಸುದೀಪ್ ಹೇಳಿದ್ದೇನು ಗೊತ್ತಾ..? | FILMIBEAT KANNADA

ಕನ್ನಡದ ಸಾಕಷ್ಟು ನಟರು ಈಗಾಗಲೇ ಡೈರೆಕ್ಟರ್ ಆಗಿದ್ದಾರೆ. ಈಗ ನಟ ದುನಿಯಾ ವಿಜಯ್ ಕೂಡ ಒಂದು ಹೆಜ್ಜೆ ಮುಂದೆ ಹೋಗಿ ನಿರ್ದೇಶಕರಾಗಿದ್ದಾರೆ. 'ಸಲಗ' ಸಿನಿಮಾದ ಮೂಲಕ ನಟ ದುನಿಯಾ ವಿಜಯ್ ಡೈರೆಕ್ಟರ್ ಆಗುತ್ತಿದ್ದಾರೆ.

ನಿರ್ದೇಶಕನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ದುನಿಯಾ ವಿಜಯ್ ಗೆ ನಟ ಸುದೀಪ್ ಶುಭಾಶಯವನ್ನು ತಿಳಿಸಿದ್ದಾರೆ. ಟ್ವಿಟ್ಟರ್ ಖಾತೆಯ ಮೂಲಕ ಕೆಲವು ಸಲಹೆ ನೀಡಿದ್ದಾರೆ.

''ಯಾರಾದರೂ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗುತ್ತಿದ್ದಾರೆ ಎನ್ನುವುದು ಒಳ್ಳೆಯ ವಿಷಯ. ಈ ರೀತಿ ಕೆಲವು ಬಾರಿ ನಮ್ಮನ್ನು ಹುಡುಕಲು ಹೋದರೆ, ಕೆಲವು ಬಾರಿ ಪ್ರಯೋಗ ಮಾಡಲು ಹೋಗಬೇಕಾಗುತ್ತದೆ. ಒಬ್ಬ ನಟ ನಿರ್ದೇಶಕ ಆಗುವುದು ಒಳ್ಳೆಯ ಬೆಳವಣಿಗೆ. ಜೊತೆಗೆ ಇದು ಒಂದು ದೊಡ್ಡ ಒತ್ತಡ ಕೂಡ. ವಿಜಯ್ ಅವರಿಗೆ ನನ್ನ ಶುಭಾಶಯಗಳು. ನಿರ್ದೇಶನದ ಸಮಯವನ್ನು ಖುಷಿ ಪಡಿ.'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

sudeep wishes for duniya vijays salaga kannada movie

ನಟ ಸುದೀಪ್ ಸಹ ನಟನಾಗಿ ನಂತರ ನಿರ್ದೇಶಕನಾದರು. 'ಮೈ ಆಟ್ರೋಗ್ರಾಫ್' ಅವರ ಮೊದಲ ನಿರ್ದೇಶನದ ಸಿನಿಮಾವಾಗಿತ್ತು. ಆ ಬಳಿಕ 'ಶಾಂತಿ ನಿವಾಸ', 'ಜಸ್ಟ್ ಮಾತ್ ಮಾತಲ್ಲಿ' 'ಕೆಂಪೇಗೌಡ, 'ಮಾಣಿಕ್ಯ' ಚಿತ್ರಗಳಿಗೆ ಕಿಚ್ಚ ಆಕ್ಷನ್ ಕಟ್ ಹೇಳಿದ್ದರು.

'ಸಲಗ' ದುನಿಯಾ ವಿಜಯ್ ನಟನೆ ಹಾಗೂ ನಿರ್ದೇಶನದಲ್ಲಿ ಸಿದ್ಧವಾಗುತ್ತಿದ್ದು, ನಟ ಧನಂಜಯ್ ಹಾಗೂ 'ಟಗರು' ಟೀಮ್ ಚಿತ್ರಕ್ಕೆ ಸಾಥ್ ನೀಡಿದೆ.

More from Filmibeat

English summary
Actor Sudeep wishes for Duniya Vijay's 'Salaga' kannada movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X