ರಕ್ಷಿತಾ ಪ್ರೇಮ್ ಗೆ ಕಿಚ್ಚ ಸುದೀಪ್ ಶುಭಾಶಯ
ನಟಿ ರಕ್ಷಿತಾ ಪ್ರೇಮ್ ಇಂದು ತಮ್ಮ ಬರ್ತ್ ಡೇ ಆಚರಿಸಿಕೊಳ್ಳುತ್ತಿದ್ದಾರೆ. ರಕ್ಷಿತಾ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳು ಸೇರಿದಂತೆ ಚಿತ್ರರಂಗದ ಗೆಳೆಯ, ಗೆಳೆತಿಯರು ವಿಶ್ ಮಾಡುತ್ತಿದ್ದಾರೆ.
ನಟ ಸುದೀಪ್ ಟ್ವಿಟ್ಟರ್ ಖಾತೆಯ ಮೂಲಕ ರಕ್ಷಿತಾಗೆ ವಿಶ್ ಮಾಡಿದ್ದಾರೆ. ''ಹುಟ್ಟುಹಬ್ಬದ ಶುಭಾಶಯಗಳು ರಕ್ಷಿತಾ ಪ್ರೇಮ್ ಅದ್ಬುತ ವರ್ಷಗಳು ನಿಮ್ಮದಾಗಲಿ. ನಿಮ್ಮ ಮುಂದಿನ ಯೋಜನೆಗೆ ನಮ್ಮ ಶುಭ ಹಾರೈಕೆ. ನಿಮ್ಮ ಆರೋಗ್ಯ ಮತ್ತು ನಿಮ್ಮ ಖುಷಿಗೆ ಹಾರೈಸುತ್ತಾನೆ.'' ಎಂದು ವಿಶ್ ಮಾಡಿದ್ದಾರೆ.
ಸುದೀಪ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ರಕ್ಷಿತಾ ''ನಿಮ್ಮ ಪ್ರೋತ್ಸಾಹ ನನ್ನ ಬದುಕಿನ ಶಕ್ತಿ.. ಲವ್ ಯೂ ಕೆ (ಕಿಚ್ಚ)'' ಎಂದು ಧನ್ಯವಾದ ತಿಳಿಸಿದ್ದಾರೆ.

ಸುದೀಪ್ ಹಾಗೂ ರಕ್ಷಿತಾ ತುಂಬ ಒಳ್ಳೆಯ ಸ್ನೇಹ ಹೊಂದಿದ್ದಾರೆ. ಈ ಜೋಡಿ ಒಟ್ಟಿಗೆ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಧಮ್', 'ಕಾಶೀ' ಹಾಗೂ 'ಹುಬ್ಬಳ್ಳಿ' ಸಿನಿಮಾಗಳಲ್ಲಿ ಸುದೀಪ್ ಹಾಗೂ ರಕ್ಷಿತಾ ಒಟ್ಟಿಗೆ ನಟಿಸಿದ್ದಾರೆ. ಮತ್ತೊಂದು ವಿಶೇಷ ಅಂದರೆ, ಸುದೀಪ್ ಹುಟ್ಟುಹಬ್ಬದ ದಿನವೇ ರಕ್ಷಿತಾ ತಮ್ಮ ಟ್ವಿಟ್ಟರ್ ಖಾತೆ ಪ್ರಾರಂಭ ಮಾಡಿದ್ದರು.
ರಕ್ಷಿತಾ ಜೊತೆಗೆ ಮಾತ್ರವಲ್ಲದೆ ಪ್ರೇಮ್ ನಿರ್ದೇಶನದ ಸಿನಿಮಾದಲ್ಲಿಯೂ ಸುದೀಪ್ ನಟಿಸಿದ್ದಾರೆ. 'ದಿ ವಿಲನ್' ಸಿನಿಮಾದಲ್ಲಿ ಶಿವಣ್ಣ ಹಾಗೂ ಸುದೀಪ್ ಕಾಣಿಸಿಕೊಂಡಿದ್ದರು.


Click it and Unblock the Notifications











