For Quick Alerts
  ALLOW NOTIFICATIONS  
  For Daily Alerts

  ರಕ್ಷಿತಾ ತಮ್ಮ 'ರಾಣಾ'ಗೆ ಸುದೀಪ್ ಸ್ವಾಗತ

  |
  ಮತ್ತೆ ಸುದ್ದಿಯಲ್ಲಿದ್ದಾರೆ ಪ್ರೇಮ್..! | FILMIBEAT KANNADA

  ನಟಿ ರಕ್ಷಿತಾ ಪ್ರೇಮ್ ಸಹೋದರ ರಾಣಾ ಹೆಸರಿನಲ್ಲಿ ಕನ್ನಡ ಚಿತ್ರರಂಗದ ಮೂಲಕ ತನ್ನ ಸಿನಿ ಕೆರಿಯರ್ ಶುರು ಮಾಡಿದ್ದಾರೆ. ಸಿನಿಮಾಗಾಗಿ ಅಭಿಷೇಕ್ ಎಂಬ ಹೆಸರನ್ನು ರಾಣಾ ಎಂದು ಬದಲು ಮಾಡಲಾಗಿದೆ.

  ಚಿತ್ರರಂಗಕ್ಕೆ ರಾಣಾ ಎಂಟ್ರಿ ನಿನ್ನೆಯ ಅದ್ಧೂರಿ ಕಾರ್ಯಕ್ರಮದ ಮೂಲಕ ಆಗಿದೆ. ಹೊಸ ನಾಯಕನಿಗೆ ಟ್ವಿಟರ್ ಖಾತೆಯಿಂದ ಕಿಚ್ಚ ಸುದೀಪ್ ಸ್ವಾಗತ ಮಾಡಿದ್ದಾರೆ.

  ಪ್ರೇಮ್ ಹೊಸ ಚಿತ್ರದಲ್ಲಿ ಇಬ್ಬರು ನಟಿಯರು : ಕನ್ನಡಕ್ಕೆ ಸಾಯಿ ಪಲ್ಲವಿ, ಕೀರ್ತಿ ಸುರೇಶ್ ಪ್ರೇಮ್ ಹೊಸ ಚಿತ್ರದಲ್ಲಿ ಇಬ್ಬರು ನಟಿಯರು : ಕನ್ನಡಕ್ಕೆ ಸಾಯಿ ಪಲ್ಲವಿ, ಕೀರ್ತಿ ಸುರೇಶ್

  "ರಾಣಾಗೆ ನಿನಗೆ ನನ್ನ ಪ್ರೀತಿಯ ಶುಭಾಶಯಗಳು‌. ನನಗೆ ತಿಳಿದಿದೆ ನೀನು ರಾಕ್ ಮಾಡುವೆ. ಚಿತ್ರದ ಟೈಟಲ್ ಹಾಗೂ ಫೋಟೋ ಚೆನ್ನಾಗಿದೆ. ಪ್ರೇಮ್ ನಿಮಗೆ ಶುಭವಾಗಲಿ. ರಕ್ಷಿತಾ ಮತ್ತೆ ನೀವು ನಿಮ್ಮ ಪ್ರೊಡಕ್ಷನ್ಸ್ ನಲ್ಲಿ ಸಿನಿಮಾ ಮಾಡುತ್ತಿರುವುದಕ್ಕೆ ಖುಷಿ ಆಗುತ್ತಿದೆ.'' ಎಂದು ಟ್ವೀಟ್ ಮಾಡಿ ವಿಶ್ ಮಾಡಿದ್ದಾರೆ.

  ರಕ್ಷಿತಾ ಹಾಗೂ ಪ್ರೇಮ್ ಜೊತೆಗೆ ಸುದೀಪ್ ಒಳ್ಳೆಯ ಗೆಳೆತನ ಹೊಂದಿದ್ದಾರೆ. ಇಬ್ಬರ ಜೊತೆ ಸಿನಿಮಾ ಸಹ ಮಾಡಿದ್ದಾರೆ.

  ಅಂದಹಾಗೆ, ಪ್ರೇಮ್ ತಮ್ಮ ಹೊಸ ಸಿನಿಮಾಗೆ 'ಏಕ್ ಲವ್ ಯಾ' ಎಂದು ಹೆಸರಿಟ್ಟಿದ್ದಾರೆ. ರಕ್ಷಿತಾ ಫಿಲ್ಮ್ ಫ್ಯಾಕ್ಟರಿ ಮೂಲಕ ಚಿತ್ರ ನಿರ್ಮಾಣ ಆಗುತ್ತಿದೆ. ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ.

  English summary
  Kannada actress Rakshita Prem brother Raanaa. Raanaa making his debut from Ek Love Ya movie. The movie is directing by Prem .

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X