ಗಣೇಶ್ ಜನ್ಮದಿನ ಮರೆತು ಮುಂಚಿತವಾಗಿ ವಿಶ್ ಮಾಡಿದ ಸುದೀಪ್: ಗೋಲ್ಡನ್ ಸ್ಟಾರ್ ಹೇಳಿದ್ದೇನು?

By ಫಿಲ್ಮ್ ಡೆಸ್ಕ್

ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬ ಹತ್ತಿರವಾಗುತ್ತಿದೆ. ಇನ್ನೇರಡು ದಿನಗಳು ಮಾತ್ರ ಬಾಕಿ ಇದೆ. 42ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಗಣೇಶ್ ಈ ಬಾರಿ ಅದ್ದೂರಿ ಸಂಭ್ರಮ, ಆಚರಣೆ ಬೇಡ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಗಣೇಶ್ ಹುಟ್ಟುಹಬ್ಬಕ್ಕೆ ಇನ್ನೂ ಎರಡು ದಿನ ಇರುವಾಗಲೆ ಕಿಚ್ಚ ಸುದೀಪ್ ಶುಭಕೋರಿದ್ದಾರೆ.

Recommended Video

Amir Khan's staff tested corona positive:ಅಮೀರ್ ಖಾನ್ ಸಿಬ್ಬಂದಿಯಲ್ಲಿ ಕೊರೊನಾ ವೈರಸ್ ಪಾಸಿಟಿವ್

ಗಣೇಶ್ ಜನ್ಮ ದಿನ ಇವತ್ತೆ ಎಂದು ಭಾವಿಸಿ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸಿದ್ದಾರೆ. ಆದರೆ ಗಣೇಶ್ ಹುಟ್ಟುಹಬ್ಬ ವಿರುವುದು ಜುಲೈ 2ಕ್ಕೆ. ಗಣೇಶ್ ಅಭಿಮಾನಿಗಳು ಈಗಾಗಲೆ ಸಾಮಾಜಿಕ ಜಾಲತಾಣದಲ್ಲಿ ಜನ್ಮದಿನದ ಟ್ರೆಂಟ್ ಮಾಡುತ್ತಿದ್ದಾರೆ. ಇದನ್ನು ನೋಡಿ ಸುದೀಪ್ ಇಂದೇ ಹುಟ್ಟುಹಬ್ಬ ಎಂದು ಭಾವಿಸಿ ವಿಶ್ ಮಾಡಿದ್ದಾರೆ. ಮುಂದೆ ಓದಿ..

ಗಣೇಶ್ ಗೆ ಸುದೀಪ್ ವಿಶ್

ಗಣೇಶ್ ಗೆ ಸುದೀಪ್ ವಿಶ್

ಗಣೇಶ್ ಹುಟ್ಟುಹಬ್ಬ ಸುದೀಪ್ ಜೂನ್ 30ಕ್ಕೆ ಎಂದು ಭಾವಿಸಿ ವಿಶ್ ಮಾಡಿದ್ದಾರೆ. "ನನ್ನ ಗೆಳೆಯ ಗಣೇಶ್ ಸಂತೋಷ ಮತ್ತು ಆರೋಗ್ಯವಾಗಿರಿ. ಒಳ್ಳೆಯದಾಗಲಿ. ತೆರೆದ ಬಾಯಿ ಮತ್ತು ತಣ್ಣನೆಯ ಬೆವರಿನೊಂದಿಗೆ ನಗುತ್ತಿರುವ ಮುಖ, ಗಡ್ಡವು ಕ್ವಾರಂಟೈನ್ ನಲ್ಲಿ ಹೊಸ ಸಿಕ್ಸ ಪ್ಯಾಕ್ ಆಗಿದೆ. ನಿಮಗೆ ಹೆಚ್ಚಿನ ಶಕ್ತಿ ಮತ್ತು ಯಶಸ್ಸು ಸಿಗಲಿ" ಎಂದು ಶುಭಹಾರೈಸಿದ್ದಾರೆ.

ಅಭಿಮಾನಿಗಳಲ್ಲಿ ಅಚ್ಚರಿ

ಅಭಿಮಾನಿಗಳಲ್ಲಿ ಅಚ್ಚರಿ

ಸುದೀಪ್ ವಿಶ್ ಮಾಡುತ್ತಿದ್ದಂತೆ ಅಭಿಮಾನಿಗಳು ಒಮ್ಮೆ ಗೊಂದಲಕ್ಕೆ ಒಳಗಾಗಿದ್ದಾರೆ. ಗಣೇಶ ಹುಟ್ಟುಹಬ್ಬ ಇರುವುದು ಜುಲೈ ಆದರೆ ಕಿಚ್ಚ ಯಾಕೆ ಮುಂಚಿತವಾಗಿ ವಿಶ್ ಮಾಡಿದ್ದಾರೆ ಎಂದು ಅಚ್ಚರಿ ಪಟ್ಟುಕೊಂಡಿದ್ದಾರೆ. ನಂತರ ಗಣೇಶ್ ಹುಟ್ಟುಹಬ್ಬ ಇಂದು ಅಲ್ಲ ಎಂದು ಗೊತ್ತಾಗುತ್ತಿದ್ದಂತೆ ಮತ್ತೆ ಟ್ವೀಟ್ ಮಾಡಿದ್ದಾರೆ. ಅಡ್ವಾನ್ಸ್ ವಿಶ್ ಎಂದು ಪರಿಗಣಿಸಿ ಎಂದು ಹೇಳಿದ್ದಾರೆ.

'ದಿನಾಂಕವನ್ನು ತಪ್ಪಾಗಿ ಪಡೆದಿದ್ದೆ'

'ದಿನಾಂಕವನ್ನು ತಪ್ಪಾಗಿ ಪಡೆದಿದ್ದೆ'

"ಮುಂಚಿತವಾದ ವಿಶ್ ಎಂದು ಪರಿಗಣಿಸಿ. ನಾನು ದಿನಾಂಕವನ್ನು ತಪ್ಪಾಗಿ ಪಡೆದುಕೊಂಡಿದ್ದೇನೆ. ಎಲ್ಲರೂ ಹೇಳಿದರು ಹಾಗಾಗಿ ಇಂದು ಶುಭಹಾರೈಸಿದೆ. ಸರಳವಾಗಿ ಆಚರಣೆ ಮಾಡುವ ನಿರ್ಧಾರ ಒಳ್ಳೆಯದು" ಎಂದು ಸುದೀಪ್ ಮತ್ತೆ ಟ್ವೀಟ್ ಮಾಡಿದ್ದಾರೆ.

ಗಣೇಶ್ ಪ್ರತಿಕ್ರಿಯೆ ಹೀಗಿದೆ

ಗಣೇಶ್ ಪ್ರತಿಕ್ರಿಯೆ ಹೀಗಿದೆ

ಮುಂಚಿತವಾಗಿಯೆ ಶುಭಹಾರೈಸಿದ ಸುದೀಪ್ ಗೆ ಗಣೇಶ್ ಪ್ರತಿಕ್ರಿಯೆ ನೀಡಿದ್ದಾರೆ. "ನನ್ನ ಹುಟ್ಟುಹಬ್ಬಕ್ಕೆ ಮೊದಲು ವಿಶ್ ಮಾಡಿರುವುದು ನೀವು. ತುಂಬಾ ಧನ್ಯವಾದಗಳು ಸರ್" ಹೇಳಿದ್ದಾರೆ.

More from Filmibeat

English summary
Actor Sudeep birthday wishes to ganesh 2 days in Advance. Sudeep says I got the date wrong Consider this an Advance wish.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X