For Quick Alerts
  ALLOW NOTIFICATIONS  
  For Daily Alerts

  ರಜನಿಕಾಂತ್ ಹುಟ್ಟುಹಬ್ಬಕ್ಕೆ ಶುಭಕೋರಿದ ಸುದೀಪ್, ಪವನ್ ಒಡೆಯರ್

  |

  ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ 70ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ತಲೈವಾ ಬರ್ತಡೇ ದೇಶಾದ್ಯಂತ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ.

  ಸ್ಯಾಂಡಲ್‌ವುಡ್‌ನಿಂದಲೂ ಹಲವು ಕಲಾವಿದರು ರಜನಿ ಬರ್ತಡೇಗೆ ವಿಶ್ ಮಾಡಿದ್ದಾರೆ. ಜಗ್ಗೇಶ್, ಸುಮಲತಾ ಟ್ವಿಟ್ಟರ್ ಮೂಲಕ ಶುಭಾಶಯ ಕೋರಿದ್ದಾರೆ. ಇದೀಗ, ಸುದೀಪ್ ಮತ್ತು ನಿರ್ದೇಶಕ ಪವನ್ ಒಡೆಯರ್ ಸಹ ಸೂಪರ್ ಸ್ಟಾರ್‌ಗೆ ವಿಶ್ ಮಾಡಿದ್ದಾರೆ.

  'ರಜನಿ-ಅಂಬಿ ಸ್ನೇಹದಲ್ಲಿ ನನ್ನದೂ ಚಿಕ್ಕ ಪಾಲಿದೆ': ತಲೈವಾಗೆ ಶುಭಕೋರಿದ ಸುಮಲತಾ'ರಜನಿ-ಅಂಬಿ ಸ್ನೇಹದಲ್ಲಿ ನನ್ನದೂ ಚಿಕ್ಕ ಪಾಲಿದೆ': ತಲೈವಾಗೆ ಶುಭಕೋರಿದ ಸುಮಲತಾ

  ''ಕ್ಲಾಸ್‌ ಹಾಗೂ ಮಾಸ್‌ ಎರಡಲ್ಲೂ ಲೆಜೆಂಡ್, ಅಸಾಧ್ಯವೆನಿಸಿದ್ದನ್ನು ಸಾಧಿಸಬಲ್ಲ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಹಾಗೂ ನಿಮ್ಮ ರಾಜಕೀಯ ಜರ್ನಿಗೂ ಆಲ್ ದಿ ಬೆಸ್ಟ್'' ಎಂದು ನಟ ಕಿಚ್ಚ ಸುದೀಪ್ ಶುಭಕೋರಿದ್ದಾರೆ.

  ''ಹುಟ್ಟುಹಬ್ಬದ ಶುಭಾಶಯಗಳು ಸೂಪರ್ ಸ್ಟಾರ್ ರಜನಿ ಸರ್. ನಾನು ನಿಮ್ಮ ದೊಡ್ಡ ಅಭಿಮಾನಿ. ಇದು ರಣವಿಕ್ರಮ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಸಮಯದಲ್ಲಿ ಕ್ಲಿಕ್ಕಿಸಿದ ಫೋಟೋ. ಈ ಚಿತ್ರದ ಒಂದು ಹಾಡನ್ನು ಕೇಳಿ ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದರು'' ಎಂದು ಪವನ್ ಒಡೆಯರ್ ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದಾರೆ.

  ಯಾವ ನಾಡಿನಲ್ಲಿ ಧ್ವಜ ಹಾರಿಸಿ ಗೆದ್ದರು ಕನ್ನಡದ ಸಂಜಾತನಲ್ಲವೇ; ರಜನಿಕಾಂತ್ ಗೆ ಜಗ್ಗೇಶ್ ವಿಶ್ಯಾವ ನಾಡಿನಲ್ಲಿ ಧ್ವಜ ಹಾರಿಸಿ ಗೆದ್ದರು ಕನ್ನಡದ ಸಂಜಾತನಲ್ಲವೇ; ರಜನಿಕಾಂತ್ ಗೆ ಜಗ್ಗೇಶ್ ವಿಶ್

  ಸದ್ಯ, ಸನ್ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಅಣ್ಣಾತ್ತೆ ಸಿನಿಮಾದಲ್ಲಿ ರಜನಿಕಾಂತ್ ನಟಿಸುತ್ತಿದ್ದಾರೆ. ಸಿರುತೈ ಶಿವ ಈ ಚಿತ್ರ ನಿರ್ದೇಶಿಸುತ್ತಿದ್ದು, ಕೀರ್ತಿ ಸುರೇಶ್, ನಯನತಾರ, ಮೀನಾ, ಖುಷ್ಬೂ ಸೇರಿದಂತೆ ಹಲವರು ಕಾಣಿಸಿಕೊಳ್ಳುತ್ತಿದ್ದಾರೆ.

  Sanjanaಗೆ ಹ್ಯಾಪಿ ನ್ಯೂಸ್ ಕೊಟ್ಟ ಹೈ ಕೋರ್ಟ್ | Filmibeat Kannada

  ಇನ್ನು ಡಿಸೆಂಬರ್ 31 ರಂದು ತಮ್ಮ ರಾಜಕೀಯ ಪಕ್ಷವನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ. ಈ ಕುರಿತು ರಜನಿ ಖಚಿತಪಡಿಸಿದ್ದು, ಅಣ್ಣಾತ್ತೆ ಸಿನಿಮಾ ಮುಗಿಸಿ ಸಂಪೂರ್ಣವಾಗಿ ರಾಜಕೀಯವಾಗಿ ತೊಡಗಿಕೊಳ್ಳಲಿದ್ದಾರೆ.

  English summary
  Kiccha Sudeep and Director Pavan wadeyar Wishes Rajinikanth on his Birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X