»   » ಗಣೇಶ್ 'ಮುಗುಳುನಗೆ' ಸಿನಿಮಾಗೆ ಶುಭ ಕೋರಿದ ಕಿಚ್ಚ ಸುದೀಪ್

ಗಣೇಶ್ 'ಮುಗುಳುನಗೆ' ಸಿನಿಮಾಗೆ ಶುಭ ಕೋರಿದ ಕಿಚ್ಚ ಸುದೀಪ್

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಮುಗುಳುನಗೆ' ಇಂದು ಭರ್ಜರಿಯಾಗಿ ಬಿಡುಗಡೆಯಾಗಿದೆ. ಗಣೇಶ್ ಮತ್ತು ಯೋಗರಾಜ್ ಭಟ್ ನಿರ್ದೇಶನದ ಈ ಸಿನಿಮಾಗೆ ನಟ ಕಿಚ್ಚ ಸುದೀಪ್ ಕೂಡ ಶುಭ ಹಾರೈಸಿದ್ದಾರೆ.

ವಿಮರ್ಶೆ: ಕಣ್ಣಾಲಿಯ ಜಲಪಾತ ಬಂಧಿಸುವ 'ಮುಗುಳುನಗೆ'

''ಮುಗುಳುನಗೆ' ನಿಮ್ಮ ಮುಂದೆ ಬರ್ತಾ ಇದೆ. ಆ 'ಮುಗುಳುನಗೆ' ಪ್ರತಿಯೊಬ್ಬರ ಮುಖದಲ್ಲಿ ಮತ್ತು ಮನಸ್ಸಿನಲ್ಲಿ ಇರಲಿ. ಯೋಗರಾಜ್ ಭಟ್ ಮತ್ತು ಇಡೀ ತಂಡಕ್ಕೆ ಆಲ್ ದಿ ಬೆಸ್ಟ್.'' ಎಂದು ಹೇಳಿ ಕಿಚ್ಚ ಸುದೀಪ್ ವಿಶ್ ಮಾಡಿದ್ದಾರೆ.

Sudeep wishes to Ganesh's 'Mugulu Nage'

ಅಂದಹಾಗೆ, ಇಂದು ಬಿಡುಗಡೆಯಾಗಿರುವ 'ಮುಗುಳು ನಗೆ' ಚಿತ್ರಕ್ಕೆ ದೊಡ್ಡ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾ ನೋಡಿದವರು ''ಗಣೇಶ್ ಅಭಿಮಾನಿಗಳಿಗೆ ಈ ಚಿತ್ರ ರಸದೌತಣ ನೀಡುವುದರಲ್ಲಿ ಡೌಟ್ ಇಲ್ಲ, ಇದು ಕಣ್ಣಾಲಿಯ ಜಲಪಾತ ಬಂಧಿಸುವ 'ಮುಗುಳುನಗೆ'' ಎಂದು ವರ್ಣಿಸಿದ್ದಾರೆ. ಇನ್ನು ನೀವು ಕೂಡ 'ಮುಗುಳುನಗೆ' ಸಿನಿಮಾ ನೋಡಿದ್ದರೆ ಹೇಗನಿಸಿತು ಎಂದು ಕೆಳಗಿನ ಕಾಮೆಂಟ್ ಬಾಕ್ಸ್ ಮೂಲಕ ತಿಳಿಸಿ.

English summary
Kannada Actor Sudeep wishes for Golden Star Ganesh starrer 'Mugulu Nage' The movie is in theatres now.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada