ಕನ್ನಡಿಗ ಕಾಂತರಾಜ್‌ಗೆ ಶುಭಕೋರಿದ ಕಿಚ್ಚ ಸುದೀಪ್

ಬಹುನಿರೀಕ್ಷೆಯ 'ಒನ್ ಚಾಂಪಿಯನ್‌ಷಿಪ್'ನಲ್ಲಿ ಭಾರತದ ಕಾಂತರಾಜ್ ಅಗಸ ಚೊಚ್ಚಲ ಪಂದ್ಯವನ್ನಾಡಲಿದ್ದಾರೆ. ಏಷ್ಯಾದ ಖ್ಯಾತ ಚಾಂಪಿಯನ್‌ಷಿಪ್‌ನಲ್ಲಿ ಕನ್ನಡಿಗ ಕಾಂತರಾಜ್ ಪಾಲ್ಗೊಂಡಿರುವುದಕ್ಕೆ ಕನ್ನಡ ಚಲನಚಿತ್ರ ನಟ ಕಿಚ್ಚ ಸುದೀಪ್ ಶುಭಾಶಯ ಕೋರಿದರು.

ಟ್ವಿಟ್ಟರ್‌ನಲ್ಲಿ ಕಾಂತರಾಜ್‌ಗೆ ಆಲ್ ದಿ ಬೆಸ್ಟ್ ಹೇಳಿರುವ ಸುದೀಪ್ ''ಸ್ಥಳೀಯ ಪ್ರತಿಭೆ ಕಾಂತರಾಜ್ ಸಿಂಗಾಪುರದ ಎಂಎಂಎ ಚಾಂಪಿಯನ್‌ಷಿಪ್‌ನಲ್ಲಿ ಚೀನಾದ ಕ್ಸಿ-ವೈ ವಿರುದ್ಧ ಸೆಣಸಾಡಲಿದ್ದಾರೆ. ಅವರಿಗೆ ನಮ್ಮ ಶುಭಾಶಯ. ಮೇ 28ಕ್ಕೆ ನಾನು ಎದುರು ನೋಡುತ್ತಿದ್ದೇನೆ'' ಎಂದರು.

ಸುದೀಪ್ ಟ್ವೀಟ್‌ಗೆ ಪ್ರತಿಕ್ರಿಯಿಸಿ ಕಾಂತರಾಜ್ ''ತುಂಬಾ ಧನ್ಯವಾದಗಳು ಸರ್, ನಿಮ್ಮ ಪ್ರೋತ್ಸಹ ಮತ್ತು ಪ್ರೀತಿ ಸದಾ ಹೀಗೆ ಇರಲಿ ಎಂದು ಆಶಿಸುತ್ತೇನೆ'' ಎಂದು ಸಂತಸ ವ್ಯಕ್ತಪಡಿಸಿದರು.

Sudeep Wishes to Kantharaj Agasa For Making One championship debut

ಬೆಂಗಳೂರಿನ ಇಂಡಿಯನ್ ಕಾಂಬ್ಯಾಟ್ ಸ್ಪೋರ್ಟ್ಸ್ ಅಕಾಡೆಮಿಯಿಂದ ತರಬೇತಿ ಪಡೆದುಕೊಂಡಿರುವ ಕನ್ನಡಿಗ ಕಾಂತರಾಜ್ ಕ್ಸಿ-ವೇ ವಿರುದ್ಧದ ಚೊಚ್ಚಲ ಪಂದ್ಯ ಆಡುತ್ತಿದ್ದಾರೆ.

ಸಿಂಗಾಪುರದ ಮೂಲದ ಎಂಎಂಎ ಒನ್ ಚಾಂಪಿಯನ್‌ಷಿಪ್‌ನಲ್ಲಿ ಮುಯ್‌ಥಾಯ್, ಕಿಕ್ ಬಾಕ್ಸಿಂಗ್ ಸೇರಿದಂತೆ ಸಮರ ಕಲೆಗಳ ಪರಿಣಿತಿ ಹೊಂದಿರುವ ಕ್ರೀಡಾಪಟುಗಳು ಭಾಗಿಯಾಗಲಿದ್ದಾರೆ. ಇದರಲ್ಲಿ ಭಾರತದ ಪರವಾಗಿ ಕನ್ನಡಿಗ ಕಾಂತರಾಜ್ ಅಗಸ ಪಾಲ್ಗೊಂಡಿದ್ದಾರೆ.

Recommended Video

Shahrukh Khan ಕಷ್ಟದ ದಿನಗಳನ್ನು ಕಣ್ಣಾರೆ ನೋಡಿದ್ದೇನೆ ಎಂದ Manoj Bajpai | Filmibeat Kannada

More from Filmibeat

English summary
Indian MMA Star Kantharaj Shankar Agasa to make One championship debut against China's Xie Wei on May 28. Kannada Actor Sudeep wishes to him.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X