ರಾಜಮೌಳಿ 'ಬಾಹುಬಲಿ' ಚಿತ್ರದಲ್ಲಿ ಸುದೀಪ್

By Rajendra
<ul id="pagination-digg"><li class="previous"><a href="/news/actor-sudeep-interview-073252.html">« Previous</a>

ಇನ್ನೊಮ್ಮೆ ರಾಜಮೌಳಿ ಜೊತೆ ಮಾಡ್ತೀರಾ?
ಸದ್ಯಕ್ಕೆ 'ಬಾಹುಬಲಿ' ಚಿತ್ರದಲ್ಲಿ ಸಣ್ಣ ಪಾತ್ರ ಪೋಷಿಸುತ್ತಿದ್ದೇನೆ. ಪ್ರಭಾಸ್ ನಾಯಕ ನಟ. ಸೆಂಟಿಮೆಂಟೋ ಏನೋ ಗೊತ್ತಿಲ್ಲ. ಈ ಪಾತ್ರ ನೀವು ಮಾಡಬೇಕು. ನಮ್ಮ ಚಿತ್ರದಲ್ಲಿ ಭಾಗಿಯಾಗಬೇಕು ಎಂದರು. ಹಾಗಾಗಿ ಅಭಿನಯಿಸುತ್ತಿದ್ದೇನೆ.

ಬಚ್ಚನ್ ಚಿತ್ರವನ್ನು ಒಪ್ಪಿಕೊಳ್ಳಲು ಕಾರಣ?
ತೆಲುಗಿನ 'ಈಗ' ಚಿತ್ರದಲ್ಲಿ ನನಗೆ ವಿಲನ್ ಪಾತ್ರ ಮಾಡಲು ಕರೆಬಂದಾಗ. ಅದೂ ಯಃಕಶ್ಚಿತ್ ನೊಣದ ವಿರುದ್ಧ ಹೋರಾಡುವ ಪಾತ್ರಕ್ಕೆ ಆಹ್ವಾನಿಸಿದಾಗ. ಅದರ ಬಗ್ಗೆಯೇ ನಾನು ಯೋಚಿಸಲಿಲ್ಲ. ಇನ್ನು ಇದರ ಬಗ್ಗೆ ಯಾಕೆ ಯೋಚಿಸಲಿ. ಶಶಾಂಕ್ ಬಂದು ಒನ್ ಲೈನ್ ಸ್ಟೋರಿ ಹೇಳಿದರು. ನನಗಿಷ್ಟವಾಗಲಿಲ್ಲ. ನನ್ನ ಮೇಲೆ ನಂಬಿಕೆ ಇಡು ಎಂದರು.

ನನಗೆ ನಿರ್ದೇಶಕರ ಬಗ್ಗೆ ನಂಬಿಕೆ ಇದೆ. ಅಲ್ಲಿ ರಾಜಮೌಳಿ ಇರಬಹುದು, ಇಲ್ಲಿ ಶಶಾಂಕ್ ಆಗಿರಬಹುದು. 'ಬಚ್ಚನ್' ಕಥೆ ಕಟ್ಟಿಕೊಂಡು ನನಗೇನು ಆಗಬೇಕಾಗಿರಲಿಲ್ಲ. ನನ್ನ ಕೆಲಸ ನಾನು ಅಚ್ಚುಕಟ್ಟಾಗಿ ನಿರ್ವಹಿಸುತ್ತೇನೆ. ನೀವೇನು ಮಾಡ್ಬೇಕು ಅಂತಿದ್ದೀರೋ ಅದನ್ನು ಮಾಡಿ ಎಂದೆ.

Kannada Film Bachchan

ಸುದೀಪ್ ಸಿನಿಮಾ ಅಂದ್ರೆ ಫೈಟ್ ಇರುತ್ತದೆ ಡಾನ್ಸ್ ಇರುತ್ತದೆ ಎಂದು ಕೊಂಡು ಯಾರು ಬರಲ್ಲ. ನಾನೊಬ್ಬ ಗ್ರೇಟ್ ಡಾನ್ಸರ್ ಅಲ್ಲ. ಹಾಗೆಯೇ ಗ್ರೇಟ್ ಫೈಟರ್ ಕೂಡ ಅಲ್ಲ. ಆದರೆ ನಾನು ಮ್ಯಾನೇಜ್ ಮಾಡ್ತೀನಿ.

ಶಶಾಂಕ್ ಅವರು ಸ್ಮೈಲಿಂಗ್ ದೇಸಾಯಿ ಇದ್ದಂತೆ. ಅವರು ಏನಕ್ಕೂ ಕಾಂಪ್ರಮೈಸ್ ಆಗಲ್ಲ. ಒಬ್ಬ ದೇಸಾಯಿ ಕೋಪದಿಂದ ಇರುತ್ತಾರೆ. ಆದ್ರೆ ಶಶಾಂಕ್ ನಗುನಗುತ್ತಾ ಇರುತ್ತಾರೆ. ಬಚ್ಚನ್ ಚಿತ್ರದ ಎಲ್ಲಾ ಕ್ರೆಡಿಡ್ ಶಶಾಂಕ್ ಅವರಿಗೆ ಸಲ್ಲಬೇಕು.

ಬಚ್ಚನ್ ಚಿತ್ರಕ್ಕೆ ರೆಸ್ಪಾನ್ಸ್ ಹೇಗಿದೆ?
ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಶಿವಮೊಗ್ಗ, ಹಾಸನ, ದಾವಣಗೆರೆ ಕೇಂದ್ರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕೆಂಪೇಗೌಡ ಚಿತ್ರಕ್ಕೆ ಹೋಲಿಸಿದರೆ 'ಬಚ್ಚನ್'ಗೆ ಪ್ರೇಕ್ಷಕರು ಡಬಲ್ ಆಗಿದ್ದಾರೆ. ಚಿತ್ರಕ್ಕೆ ಕೊಟ್ಟಂತಹ ವಿಭಿನ್ನ ಪ್ರಚಾರವೂ ಒಂದು ಅರ್ಥದಲ್ಲಿ ಸಹಕಾರಿಯಾಯಿತು. ಪ್ರೇಕ್ಷಕರನ್ನು ಸೆಳೆಯುವಲ್ಲಿ ಅದೂ ಒಂದು ಕಾರಣ.

ಹೊರ ರಾಜ್ಯಗಳಲ್ಲೂ ಬಚ್ಚನ್ ಬಿಡುಗಡೆಯಾಗುತ್ತಿದೆಯೇ?
ಏಪ್ರಿಲ್ 18, 19 ಹಾಗೂ 20ರಂದು ಚಿತ್ರವನ್ನು ದುಬೈ, ಅಬುಧಾಬಿ, ಶಾರ್ಜಾದಲ್ಲಿ ಬಿಡುಗಡೆಯಾಗುತ್ತಿದೆ. ಹಾಗೆಯೇ ಚೆನ್ನೈ, ಹೈದರಾಬಾದ್, ಗೋವಾ ಹಾಗೂ ಮುಂಬೈನಲ್ಲೂ ತೆರೆಕಾಣುತ್ತಿದೆ. ಯುಎಸ್ ಹಾಗೂ ಆಸ್ಟ್ರೇಲಿಯಾದಲ್ಲೂ ಚಿತ್ರವನ್ನು ಬಿಡುಗಡೆ ಮಾಡುವ ಬಗ್ಗೆ ಪ್ಲಾನ್ ಮಾಡಿದ್ದೇವೆ.

<ul id="pagination-digg"><li class="previous"><a href="/news/actor-sudeep-interview-073252.html">« Previous</a>

More from Filmibeat

English summary
Kiccha Sudeep is on cloud nine with his latest film Bachchan getting positive response from various quarters. The superstar, visited Oneindia and talked about the film, his experience, CCL and more. Here are the excerpts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X