ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಯಲ್ಲಿ ಯಶ್, ಸುದೀಪ್ ಸುಮಲತಾ; ಫೋಟೋ ವೈರಲ್

ಚಂದನವನದ ಖ್ಯಾತ ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ಡಿಸೆಂಬರ್ 28 ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿಹಾರಿಕಾ ಬಹುಕಾಲದ ಗೆಳೆಯ ಅಕ್ಷಯ್ ಜೊತೆ ಹಸೆಮಣೆ ಏರಿದ್ದಾರೆ. ಕುಟುಂಬದವರು ಮತ್ತು ತೀರ ಆಪ್ತರ ಸಮ್ಮುಖದಲ್ಲಿ ನಿಹಾರಿಕಾ ಮತ್ತು ಅಕ್ಷಯ್ ಮದುವೆ ನೆರವೇರಿದೆ.

ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ಸರಳವಾಗಿ ಮದುವೆ ನೆರವೇರಿದೆ. ಕುಟುಂಬದವರು, ಸ್ನೇಹಿತರು ಮತ್ತು ಚಿತ್ರರಂಗದ ಕೆಲವು ಗಣ್ಯರು ಭಾಗಿಯಾಗಿ, ನವ ಜೋಡಿಗೆ ಶುಭಕೋರಿದ್ದರು. ಇದೀಗ ಅದ್ದೂರಿ ಆರತಕ್ಷತೆ ಕಾರ್ಯಕ್ರಮ ನಡೆಯುತ್ತಿದೆ.

ಆರತಕ್ಷತೆಯಲ್ಲಿ ಸುದೀಪ್, ಯಶ್, ಸುಮಲತಾ

ಆರತಕ್ಷತೆಯಲ್ಲಿ ಸುದೀಪ್, ಯಶ್, ಸುಮಲತಾ

ನಿಹಾರಿಕಾ-ಅಕ್ಷಯ್ ಆರತಕ್ಷತೆ ಸಮಾರಂಭದಲ್ಲಿ ಚಿತ್ರರಂಗದ ಗಣ್ಯರು ಮತ್ತು ರಾಜಕೀಯ ಗಣ್ಯರು ಭಾಗಿಯಾಗಿದ್ದಾರೆೆ. ಚಿತ್ರರಂಗದಿಂದ ಕಿಚ್ಚ ಸುದೀಪ್, ಯಶ್ ದಂಪತಿ ಮತ್ತು ಸುಮಲತಾ ಅಂಬರೀಶ್ ಭಾಗಿಯಾಗಿರುವ ಫೋಟೋ ಹರಿದಾಡುತ್ತಿದೆ.ರಮೇಶ್ ಅರವಿಂದ್ ಜೊತ ಮೂರು ಜನ ಒಟ್ಟಿಗೆ ಕ್ಯಾಮರಾಗೆ ಪೋಸ್ ಗೆ ನೀಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 ಒಂದೇ ಫ್ರೇಮಿನಲ್ಲಿ ಸೆರೆಯಾದ ಕನ್ನಡದ ಸ್ಟಾರ್ಸ್

ಒಂದೇ ಫ್ರೇಮಿನಲ್ಲಿ ಸೆರೆಯಾದ ಕನ್ನಡದ ಸ್ಟಾರ್ಸ್

ವಿಶೇಷ ಎಂದರೆ ಸುದೀಪ್, ಯಶ್ ಮತ್ತು ಸುಮಲತಾ ಅಂಬರೀಶ್ ಸಹ ಒಂದೇ ಸಮಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಒಂದೇ ಫ್ರೇಮಿನಲ್ಲಿ ಸೆರೆಯಾಗಿರುವ ಮೂವರ ಫೋಟೋ ವೈರಲ್ ಆಗಿದೆ. ಅನೇಕ ಸಮಯದ ಬಳಿಕ ಸುದೀಪ್ ಮತ್ತು ಸುಮಲತಾ ಅಂಬರೀಶ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಗೋವಾದಿಂದ ವಾಪಸ್ ಆಗಿರುವ ಕಿಚ್ಚ

ಗೋವಾದಿಂದ ವಾಪಸ್ ಆಗಿರುವ ಕಿಚ್ಚ

ಕಿಚ್ಚ ಸುದೀಪ್ ಗೋವಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದರು. ಗೋವಾದಿಂದ ವಾಪಸ್ ಆಗಿರುವ ಸುದೀಪ್, ರಮೇಶ್ ಅರವಿಂದ್ ಮಗಳ ಮದುವೆಯಲ್ಲಿ ಭಾಗಿಯಾಗಿ ನವಜೋಡಿಗೆ ಶುಭೋರಿದ್ದಾರೆ.

ರಾಜಕೀಯ ಗಣ್ಯರು ಭಾಗಿ

ರಾಜಕೀಯ ಗಣ್ಯರು ಭಾಗಿ

ಚಿತ್ರರಂಗದ ಗಣ್ಯರ ಜೊತೆ ರಾಜಕೀಯ ಗಣ್ಯರಿಗೂ ಆಮಂತ್ರಣ ನೀಡಿದ್ದಾರೆ. ಸಿಎಂ ಯಡಿಯೂರಪ್ಪ ಸೇರಿದಂತೆ ಅನೇಕರಿಗೆ ಆಮಂತ್ರಣ ನೀಡಿದ್ದಾರೆ. ಇಂದು ನಡೆಯುತ್ತಿರುವ ಆರತಕ್ಷತೆ ಕಾರ್ಯಕ್ರಮದಲ್ಲಿ ರಾಜಕೀಯ ಗಣ್ಯರು ಸಹ ಭಾಗಿಯಾಗಿ ನವ ಜೋಡಿಗೆ ಆಶೀರ್ವಾದ ಮಾಡುವ ಸಾಧ್ಯತೆ ಇದೆ.

More from Filmibeat

English summary
Sudeep, Yash and Sumalatha Ambareesh visit ramesh aravind daughter reception.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X