ಒಟ್ಟಿಗೆ ಸೇರೋಣ.. ಒಟ್ಟಿಗೆ ಕೆಲಸ ಮಾಡೋಣ : ಅಭಿಗೆ ಕಿಚ್ಚನ ವಿಶ್
Recommended Video
ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಆಗಮನ ಅದ್ದೂರಿಯಾಗಿ ಆಗಿದೆ. ಅವರ ಚೊಚ್ಚಲ ಸಿನಿಮಾ 'ಅಮರ್' ನಿನ್ನೆ (ಶುಕ್ರವಾರ) ರಾಜ್ಯಾದಂತ್ಯ ಬಿಡುಗಡೆಯಾಗಿದೆ.
ಈ ಸಿನಿಮಾಗೆ ದಕ್ಷಿಣ ಭಾರತದ ಖ್ಯಾತ ನಟರು ಶುಭ ಹಾರೈಸಿದ್ದಾರೆ. ಈಗ ಕನ್ನಡದ ನಟ ಕಿಚ್ಚ ಸುದೀಪ್ ಸಹ ಅಭಿಷೇಕ್ ಗೆ ವಿಶ್ ಮಾಡಿದ್ದಾರೆ. ಟ್ವಿಟ್ಟರ್ ನಲ್ಲಿ ವಿಡಿಯೋ ಮೂಲಕ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ.
''ಅಮರ್' ಇಡೀ ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್. ಅಭಿ ಎರಡು ಒತ್ತಡವನ್ನು ಹೇಗೆ ನೀವು ನಿಭಾಯಿಸುತ್ತಿದ್ದೀರಿ. ಮೊದಲ ಸಿನಿಮಾ ಹಾಗೂ ಅಂಬರೀಶ್ ಮಗ ಎನ್ನುವ ಒತ್ತಡ ನಿಮ್ಮ ಮೇಲೆ ಇದೆ. ಅಂಬರೀಶ್ ಮಗ ಏನು ಮಾಡುತ್ತಾರೆ ಎನ್ನುವುದನ್ನು ಕೇಳಿ ಕೇಳಿ ನಿಮಗೂ ಬೋರ್ ಆಗಿರುತ್ತದೆ. ಅದನೆಲ್ಲ ಬಿಟ್ಟು ಸಿನಿಮಾವನ್ನು ಎಂಜಾಯ್ ಮಾಡಿ.'' ಎಂಬ ಸಲಹೆಯನ್ನು ಸುದೀಪ್ ನೀಡಿದ್ದಾರೆ.

''ಚಿತ್ರರಂಗದ ಪರವಾಗಿ ನಿಮಗೆ ಸ್ವಾಗತ ಹೇಳುತ್ತಿದ್ದೇನೆ. ಚಿತ್ರರಂಗಕ್ಕೆ ಬಂದಿದ್ದೀರಿ. ಬನ್ನಿ ಒಟ್ಟಿಗೆ ಸೇರೋಣ.. ಒಟ್ಟಿಗೆ ನಡೆಯೋಣ..ಒಟ್ಟಿಗೆ ಕೆಲಸ ಮಾಡೋಣ. ಆಲ್ ದಿ ಬೆಸ್ಟ್. ನಿಮ್ಮ ಸಿನಿಮಾ ನೋಡಲು ನನಗೆ ಹೆಮ್ಮೆ ಆಗುತ್ತದೆ.'' ಎಂದು ಸುದೀಪ್ ಶುಭಾಶಯ ತಿಳಿಸಿದ್ದಾರೆ.
ನಟ ರಜನಿಕಾಂತ್, ಚಿರಂಜೀವಿ, ಪುನೀತ್ ರಾಜ್ ಕುಮಾರ್, ದರ್ಶನ್, ಯಶ್, ನಾನಿ, ರವಿಶಂಕರ್, ಶ್ರೀಮುರಳಿ, ಪ್ರಿಯಾಂಕ ಉಪೇಂದ್ರ, ಭಾರತ ಕ್ರಿಕೆಟ್ ತಂಡದ ಆಟಗಾರ ಕೆ ಎಲ್ ರಾಹುಲ್ ಹೀಗೆ ಸಾಕಷ್ಟು ಜನರು ಅಭಿಷೇಕ್ ಗೆ ವಿಶ್ ಮಾಡಿದ್ದಾರೆ.


Click it and Unblock the Notifications











