ಕಿಚ್ಚನ ಮಾತು ಕೇಳಿದ ಅಭಿಮಾನಿ : ಮನೆಗೆ ಮರಳಿದ ಮಗ
ಕಳೆದ ಒಂದು ತಿಂಗಳ ಹಿಂದೆ ಪೋಷಕರ ಮೇಲಿನ ಕೋಪಕ್ಕೆ ಮನೆ ಬಿಟ್ಟು ಹೋಗಿದ್ದ ಕಿಚ್ಚನ ಅಭಿಮಾನಿ ಮನೆ ಸೇರಿಕೊಂಡಿದ್ದಾನೆ. ಮಣಿಕಂಠ ಎನ್ನುವ ಪುಟ್ಟ ಅಭಿಮಾನಿ ತಂದೆ-ತಾಯಿಯ ಮೇಲೆ ಕೋಪ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದರು.
ಇದನ್ನು ತಿಳಿದ ಸುದೀಪ್ ಅಭಿಮಾನಿಗಾಗಿ ಒಂದು ವಿಡಿಯೋ ಮಾಡಿ ಮನೆಗೆ ಬರುವಂತೆ ಮನವಿಯನ್ನು ಮಾಡಿದ್ದರು. ಸುದೀಪ್ ಅಭಿಮಾನಿಗಳು ಮಣಿಕಂಠನನ್ನು ಪತ್ತೆ ಹಚ್ಚಲು ಸುದೀಪ್ ಮನವಿ ಮಾಡಿದ್ದ ವಿಡಿಯೋವನ್ನು ಎಲ್ಲೆಡೆ ವೈರಲ್ ಮಾಡಿದ್ದರು. ಸದ್ಯ ಒಂದು ತಿಂಗಳ ನಂತರ ಮಣಿಕಂಠ ಮನೆ ಸೇರಿದ್ದಾನೆ.
ಈ ವಿಚಾರವನ್ನು ಕಿಚ್ಚನ ಅಭಿಮಾನಿಗಳು ಸ್ಪಷ್ಟ ಪಡಿಸಿದ್ದು ಮಣಿಕಂಠನ ಪೋಷಕರು ಕೂಡ ಮಗ ಸಿಕ್ಕಿರುವ ಖುಷಿಯ ವಿಚಾರವನ್ನು ಸುದೀಪ್ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಸುದೀಪ್ ಕೂಡ ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. "ಮಿಸ್ಸಿಂಗ್ ಬಾಯ್ ಮಣಿಕಂಠ ಮನೆಗೆ ಬಂದಿದ್ದಾರೆ ಎಂದು ವಿಚಾರ ಗೊತ್ತಾಯಿತು. ಇದು ನಿಜವೇ ಯಾರಾದರೂ ತಿಳಿಸಿ. ಅವರು ಮನೆಗೆ ಬಂದರೆ ನಮಗೆ ತುಂಬಾ ಖುಷಿ ಆಗುತ್ತದೆ ಎಂದಿದ್ದಾರೆ". ಒಟ್ಟಾರೆ ತಿಂಗಳ ನಂತರ ಕಿಚ್ಚನ ಪುಟ್ಟ ಅಭಿಮಾನಿ ಪೋಷಕರ ಮಡಿಲು ಸೇರಿರುವುದು ಎಲ್ಲರಿಗೆ ಖುಷಿ ಕೊಟ್ಟಿದೆ.


Click it and Unblock the Notifications











