ಅಭಿಮಾನಿಗಳ ಈ ಕೆಲಸದ ಹಿಂದೆ ಇದ್ದಾರೆ ಕಿಚ್ಚ ಸುದೀಪ್

By Pavithra

ಚಿತ್ರರಂಗದ ಕಲಾವಿದರು ಇತ್ತೀಚಿನ ದಿನಗಳಲ್ಲಿ ನಾವು ಸ್ಟಾರ್ ಗಳಾದರೇ ಮಾತ್ರ ಸಾಲದು ಸ್ಟಾರ್ ಪಟ್ಟಕ್ಕೆ ತಕ್ಕಂತ ಕೆಲಸಗಳನ್ನೂ ಮಾಡಬೇಕು ಅನ್ನುವುದನ್ನ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ.

ಚಂದನವನದಲ್ಲಿ ಪ್ರೇಕ್ಷಕರ ಮಧ್ಯೆ ಗುರುತಿಸಿಕೊಂಡಿರುವ ಬಹುತೇಕ ಸ್ಟಾರ್ ಗಳು ಅಭಿನಯಿಸುವುದರ ಜೊತೆಯಲ್ಲಿ ಸಮಾಜಸೇವೆಗಳನ್ನೂ ಮಾಡುತ್ತಾ ಬಂದಿದ್ದಾರೆ. ಸದಾ ಕಾಲ ಚಿತ್ರೀಕರಣದಲ್ಲಿ ಬ್ಯುಸಿ ಆಗಿರು ಸ್ಟಾರ್ ಕಲಾವಿದರಿಗೆ ಸಮಾಜಸೇವೆ ಮಾಡಲು ಎಲ್ಲಿ ಸಮಯವಿರುತ್ತದೆ ಎನ್ನುವ ಮಾತುಗಳ ನಡುವೆಯೂ ಅಭಿಮಾನಿಗಳಿಂದ ಸಮಾಜಕ್ಕೆ ಒಳಿತಾಗುವ ಕೆಲಸಗಳನ್ನ ಮಾಡಿಸುತ್ತಿದ್ದಾರೆ.

ಚಿತ್ರರಂಗದಲ್ಲಿ 22 ವರ್ಷಗಳಿಂದ ಕಲಾದೇವಿಗೆ ಸೇವೆ ಸಲ್ಲಿಸುತ್ತಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೆಸರಿನಲ್ಲಿ 'ಅಖಿಲ ಕರ್ನಾಟಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೇನಾ ಸಮಿತಿ' ಎಂದು ಪ್ರಾರಂಭವಾಗಿ ಸಾಕಷ್ಟು ದಿನಗಳಾಗಿವೆ. ಇದು ಹೆಸರಿಗೆ ಮಾತ್ರ ಸುದೀಪ್ ಅಭಿಮಾನಿಗಳ ಸಂಘ. ಆದರೆ ಈ ಸಂಘದ ಅಡಿಯಲ್ಲಿ ಸಾಕಷ್ಟು ಸಮಾಜಮುಖಿ ಕಾರ್ಯಗಳು ನಡೆಯುತ್ತಿದೆ. ಇಷ್ಟು ದಿನ ಜೀವನಕ್ಕಾಗಿ, ಆರೋಗ್ಯಕ್ಕಾಗಿ ಸಹಾಯ ಮಾಡಿದ ಅಭಿಮಾನಿಗಳು ಈಗ ಮಕ್ಕಳ ಶಿಕ್ಷಣಕ್ಕಾಗಿ ಸಹಾಯ ಹಸ್ತ ಚಾಚಿದ್ದಾರೆ. ಹಾಗಾದ್ರೆ ಈ ಅಭಿಮಾನಿಗಳು ಮಾಡಿದ ಕೆಲಸವೇನು? ಮುಂದೆ ಓದಿ

ಅಂಧರಿಗೆ ನೆರವಾದ ಕಿಚ್ಚನ ಅಭಿಮಾನಿಗಳು

ಅಂಧರಿಗೆ ನೆರವಾದ ಕಿಚ್ಚನ ಅಭಿಮಾನಿಗಳು

ತುಮಕೂರಿನ "ರಾಷ್ಟ್ರೀಯ ಅಂಧರ ಕ್ಷೇಮಾಭಿವೃದ್ಧಿ ಸಂಸ್ಥೆ" ವಾರ್ಷಿಕೋತ್ಸವದಲ್ಲಿ 'ಅಖಿಲ ಕರ್ನಾಟಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೇನಾ ಸಮಿತಿ' ತಂಡದವರು ಭಾಗಿ ಆಗಿದ್ದರು. ಕಾರ್ಯಕ್ರಮದಲ್ಲಿ ಕೇವಲ ಕಾಣಿಸಿಕೊಳ್ಳುವುದು ಮಾತ್ರವಲ್ಲದೆ ಅಂಧ ಮಕ್ಕಳ ಶಿಕ್ಷಣಕ್ಕಾಗಿ ಕಂಪ್ಯೂಟರ್ ಗಳನ್ನ ನೀಡಿದ್ದಾರೆ.

ಕಂಪ್ಯೂಟರ್ ನೀಡಿ ಶಿಕ್ಷಣಕ್ಕೆ ಸಾಥ್

ಕಂಪ್ಯೂಟರ್ ನೀಡಿ ಶಿಕ್ಷಣಕ್ಕೆ ಸಾಥ್

ಅಖಿಲ ಕರ್ನಾಟಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೇನಾ ಸಮಿತಿಯನ್ನ ನವೀನ್ ಗೌಡ ಹಾಗೂ ಜಗದೀಶ್ ನಡೆಸಿಕೊಂಡು ಹೋಗುತ್ತಿದ್ದಾರೆ. ಈಗಾಗಲೇ ಈ ಸಂಘಟನೆ ಮೂಲಕ ಸಾಕಷ್ಟು ಸಮಾಜಮುಖಿ ಕೆಲಸ ಮಾಡಿದ್ದು ಈ ವರ್ಷದ ಮೊದಲ ಕೆಲಸ ಅಂಧ ಮಕ್ಕಳ ಸಂಸ್ಥೆಗೆ ಉಚಿತವಾಗಿ ಕಂಪ್ಯೂಟರ್ ಗಳನ್ನ ನೀಡಿರುವುದು.

ವರ್ಷ ಪೂರ್ತಿ ಒಳ್ಳೆ ಕೆಲಸದ ಉದ್ದೇಶ

ವರ್ಷ ಪೂರ್ತಿ ಒಳ್ಳೆ ಕೆಲಸದ ಉದ್ದೇಶ

ಕಿಚ್ಚ ಸುದೀಪ್ ಅವರ ಹೆಸರಿನಲ್ಲಿ ನಡೆಯುತ್ತಿದುವ ಈ ಸಂಘಟನೆ ವರ್ಷ ಪೂರ್ತಿ ಇಂತಹ ಕೆಲಸ ಮಾಡುವಲ್ಲಿ ತೊಡಗಿಸಿಕೊಂಡಿದೆ. ಸ್ಟಾರ್ ಗಳ ಹುಟ್ಟುಹಬ್ಬದಂದು ಮಾತ್ರ ಸಮಾಜಮುಖಿ ಕೆಲಸಗಳನ್ನ ಮಾಡುವುದಕ್ಕೆ ಬ್ರೇಕ್ ಹಾಕಿ ವರ್ಷಪೂರ್ತಿ ಒಳ್ಳೆ ಕೆಲಸಗಳನ್ನ ಮಾಡುವುದು ಇವರ ಮುಖ್ಯ ಉದ್ದೇಶ.

ಉತ್ತಮ ಕೆಲಸದ ಹಿಂದೆ ಕಿಚ್ಚನ ಕಾಣದ ಕೈ

ಉತ್ತಮ ಕೆಲಸದ ಹಿಂದೆ ಕಿಚ್ಚನ ಕಾಣದ ಕೈ

ನವೀನ್ ಗೌಡ ಹಾಗೂ ಜಗದೀಶ್ ನಡೆಸುತ್ತಿರುವ ಅಖಿಲ ಕರ್ನಾಟಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೇನಾ ಸಮಿತಿಯ ಪ್ರತಿ ಕೆಲಸಗಳ ಹಿಂದೆ ಕಿಚ್ಚ ಸುದೀಪ್ ಅವರು ಇದ್ದಾರೆ. ಹಿರಿಯ ಕಲಾವಿದರು ಸಂಕಷ್ಟದಲ್ಲಿ ಇದ್ದಾಗ, ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದಾಗ, ಅಭಿಮಾನಿಗಳಿಗೆ ಸಮಸ್ಯೆ ಆದಾಗ ಹೀಗೆ ಸಾಕಷ್ಟು ಸಮಯದಲ್ಲಿ ಕಿಚ್ಚ ಸುದೀಪ್ ಅವರೇ ನಿಂತು ಧನ ಸಹಾಯ ಮಾಡಿದ್ದಾರೆ.

More from Filmibeat

English summary
Kannada actor Sudeep's fans have given four computers to Tumkur's blind school, This work has been done by Akhil Karnataka Abhinaya Chakravarthi Kichha Sudeep Sena Samithi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X