»   » ಸಮಾಜಸೇವೆಗೆ ಸ್ಫೂರ್ತಿ ಆದ ಕಿಚ್ಚ ಸುದೀಪ್

ಸಮಾಜಸೇವೆಗೆ ಸ್ಫೂರ್ತಿ ಆದ ಕಿಚ್ಚ ಸುದೀಪ್

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅವರಂತೆಯೇ ಅವರ ಅಭಿಮಾನಿಗಳು ಕೂಡ ಸಹಾಯ ಮಾಡುವುದರಲ್ಲಿ ಎಂದಿಗೂ ಮುಂದಿರುತ್ತಾರೆ. ಈಗಾಗಲೇ ಅಖಿಲ ಕರ್ನಾಟಕ ಕಿಚ್ಚ ಸುದೀಪ್ ಅಭಿಮಾನಿಗಳ ಸಂಘದ ಮೂಲಕ ಕಿಚ್ಚ ಸುದೀಪ್ ಅನೇಕರಿಗೆ ಉಪಯುಕ್ತವಾಗುವಂತಹ ಕೆಲಸಗಳನ್ನ ಮಾಡಿದ್ದಾರೆ. ಚಿತ್ರ ಕಲಾವಿದರು ಸೇರಿದಂತೆ ಅನೇಕರಿಗೆ ಹಣ ಸಹಾಯವನ್ನೂ ಮಾಡಿದ್ದಾರೆ.

ಕಿಚ್ಚನನ್ನೇ ಮಾದರಿಯನ್ನಾಗಿಸಿಕೊಂಡಿರುವ ಸುದೀಪ್ ಅವರ ಮಹಿಳಾ ಅಭಿಮಾನಿಗಳು ಅನೇಕರಿಗೆ ಉಪಯುಕ್ತವಾಗಲಿ ಎಂದು ಕಿಚ್ಚಾಭಿವೃದ್ದಿ ಎನ್ನುವ ಸಂಘವನ್ನ ಕಟ್ಟಿಕೊಂಡಿದ್ದಾರೆ.

ಈ ಸಂಘಟನೆ ಮೂಲಕ ಬೀದಿ ಬದಿಯಲ್ಲಿರುವ ಅನಾಥರಿಗೆ ಹೊದಿಕೆ ನೀಡುವುದು, ಅನಾಥರಿಗೆ ಆಶ್ರಯ ಒದಗಿಸುವುದು, ಸ್ಲಂ ನಲ್ಲಿ ವಾಸವಿರುವ ಮಕ್ಕಳಿಗೆ ಆಟಿಕೆಗಳನ್ನ ನೀಡುವುದು ಹೀಗೆ ಇನ್ನೂ ಅನೇಕ ಕೆಲಸಗಳನ್ನ ಮಾಡುತ್ತಾ ಬಂದಿದ್ದಾರೆ.

Sudeep's fans have teamed up with 'Kicchabhiruddi'

ಕಿಚ್ಚಾಭಿವೃದ್ದಿ ಸಂಘಟನೆಯ ಮುಖ್ಯ ಉದ್ದೇಶ ನಿರುದ್ಯೋಗಿಗಳಿಗೆ ಕೆಲಸ ಕೊಡಿಸುವುದು. ಮೊದಲಿಗೆ ಹೆಬ್ಬುಲಿ ಹುಡ್ಗಿರು ಎಂದು ತಂಡವನ್ನ ಕಟ್ಟಿಕೊಂಡಿದ ಸುದೀಪ್ ಅವರ ಅಭಿಮಾನಿ ಉಷಾ ಇಂಥದೊಂದು ಸಂಘಟನೆಯನ್ನ ಯಾಕೆ ಕಟ್ಟಬಾರದು ಎಂದು ಆಲೋಚನೆ ಮಾಡಿದ್ದಾರೆ. ಇವರುಗಳಿಗೆ ಅಖಿಲ ಕರ್ನಾಟಕ ಕಿಚ್ಚ ಸುದೀಪ್ ಅಭಿಮಾನಿಗಳ ಸಂಘದ ಸಹಾಯ ಕೂಡ ಸಿಕ್ಕಿದೆ.

ಪ್ರಾರಂಭ ಮಾಡಿದ ಮೂರೇ ತಿಂಗಳಲ್ಲಿ ಉತ್ತಮ ಕೆಲಸಗಳನ್ನ ಮಾಡಿರುವ ಈ ತಂಡದ ಕೆಲಸಕ್ಕೆ ಕಿಚ್ಚ ಸುದೀಪ್ ಅಭಿನಂದನೆಯನ್ನ ತಿಳಿಸಿದ್ದಾರೆ. ಒಬ್ಬ ನಟನ ಹೆಸರಿನಲ್ಲಿ ಮಹಿಳಾ ಅಭಿಮಾನಿಗಳಿಂದ ಸಂಘಟನೆ ಪ್ರಾರಂಭವಾಗಿರುವುದು ವಿಶೇಷ.

English summary
Kannada actor Sudeep's fans have teamed up with 'Kicchabhiruddi', They are doing social work through the organization.Sudeep admires this team work.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X