»   » 22 ವರ್ಷದ ಸುದೀರ್ಘ ಸಿನಿಮಾ ಪ್ರಯಾಣದ ಬಗ್ಗೆ ಕಿಚ್ಚ ಬರೆದ ಪತ್ರ

22 ವರ್ಷದ ಸುದೀರ್ಘ ಸಿನಿಮಾ ಪ್ರಯಾಣದ ಬಗ್ಗೆ ಕಿಚ್ಚ ಬರೆದ ಪತ್ರ

Posted By:
Subscribe to Filmibeat Kannada

ಕಿಚ್ಚ ಸುದೀಪ್. ಕನ್ನಡ ಸಿನಿಮಾರಂಗದಲ್ಲಿ ಮಾತ್ರವಲ್ಲದೆ ಟಾಲಿವುಡ್, ಬಾಲಿವುಡ್ ಹಾಗೂ ಹಾಲಿವುಡ್ ನಲ್ಲೂ ಕನ್ನಡದ ಕೀರ್ತಿ ಪತಾಕೆಯನ್ನ ಹಾರಿಸಿದ ನಟ. ತನ್ನ ಅಭಿನಯದ ಮೂಲಕವೇ ಅಪಾರ ಅಭಿಮಾನಿಗಳನ್ನ ಗಳಿಸಿ ಅವರಿಂದಲೇ ಅಭಿನಯ ಚಕ್ರವರ್ತಿ ಎಂದು ಬಿರುದು ಪಡೆದವರು.

ಕೇವಲ ಅಭಿನಯದಲ್ಲಿ ಮಾತ್ರವಲ್ಲದೆ ಸುದೀಪ್ ತಂತ್ರಜ್ಞನಾಗಿಯೂ ತೆರೆಯ ಹಿಂದೆ ಅಪಾರವಾದ ಕೆಲಸವನ್ನ ಮಾಡಿದ್ದಾರೆ. ಅತ್ಯುತ್ತಮ ನಟ, ಹಾಡುಗಾರ, ಬರಹಗಾರ, ನಿರ್ದೇಶಕ, ನಿರ್ಮಾಪಕ, ಉತ್ತಮ ಮಾತುಗಾರ ಹೀಗೆ ತನ್ನ ಪ್ರತಿಭೆಯ ಮೂಲಕ ಎಲ್ಲಾ ಕ್ಷೇತ್ರದಲ್ಲಿಯೂ ಕಿಚ್ಚ ಹೆಜ್ಜೆ ಗುರುತುಗಳಿವೆ.

ಸಮಾಜಸೇವೆಗೆ ಸ್ಫೂರ್ತಿ ಆದ ಕಿಚ್ಚ ಸುದೀಪ್

ಸುದೀಪ್ ಸಿನಿಮಾದಲ್ಲಿ ಅಭಿನಯಿಸಲು ಮುಖಕ್ಕೆ ಬಣ್ಣ ಹಚ್ಚಿ ಇಂದಿಗೆ 22 ವರ್ಷಗಳು ಕಳೆದಿವೆ. ಹಲವಾರು ಸೋಲು ಗೆಲವುಗಳ ಮೆಟ್ಟಿಲುಗಳನ್ನ ದಾಟಿ ಬಂದಿರುವ ಅಭಿನಯ ಚಕ್ರವರ್ತಿ 22 ವರ್ಷದ ಅನುಭವವನ್ನ ಪತ್ರದ ಮೂಲಕ ಹಂಚಿಕೊಂಡಿದ್ದಾರೆ. ಏನಿದೆ ಕಿಚ್ಚನ ಬರೆದ ಪತ್ರದಲ್ಲಿ? ಯಾವ ವಿಚಾರಗಳನ್ನ ಸುದೀಪ್ ನೆನೆಸಿಕೊಂಡಿದ್ದಾರೆ. ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ

ನೆನಪಿನ ಬುತ್ತಿ ಬಿಚ್ಚಿಟ್ಟ ಕಿಚ್ಚ

ಕಿಚ್ಚ ಸುದೀಪ್ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು 1996ರಲ್ಲಿ, ಬ್ರಹ್ಮ ಸಿನಿಮಾದ ಚಿತ್ರೀಕರಣಕ್ಕಾಗಿ . ಈ ಚಿತ್ರದ ಮೂಲಕ ಸಿನಿಮಾರಂಗದಲ್ಲಿ ಪ್ರಯಾಣವನ್ನ ಶುರು ಮಾಡಿರುವ ಬಗ್ಗೆ ಅನುಭವವನ್ನ ಹಂಚಿಕೊಂಡಿದ್ದಾರೆ.

ಈ ಪಯಣ ಹೀಗೆ ಇರಲಿ

ಸಾಕಷ್ಟು ದಿನಗಳಿಂದ ಆಕ್ಷನ್ ಕಟ್ ಎನ್ನುವ ಶಬ್ಧ ಕಿವಿಗೆ ಬೀಳುತ್ತಲೇ ಇದೆ. ನಾನು ಕೆಲವೊಮ್ಮೆ ತಂದೆಯವರ ಜೊತೆಯಲ್ಲಿ ಅಥವಾ ಸ್ನೇಹಿತರ ಜೊತೆ ಶೂಟಿಂಗ್ ಜಾಗಕ್ಕೆ ಭೇಟಿ ನೀಡುತ್ತಲೇ ಇರುತ್ತೇನೆ. ಆದರೆ ಆಕ್ಷನ್ -ಕಟ್ ಜೊತೆಯಲ್ಲಿ ಭಾಗಿ ಆಗುವ ಅನುಭವ ಮಾತ್ರ ಅದ್ಬುತ ಎಂದಿದ್ದಾರೆ ಸುದೀಪ್.

ಕಿಚ್ಚನ ನೆನಪಿನಂಗಳದಲ್ಲಿ ಅಂಬರೀಶ್

ಮೊದಲ ಸಿನಿಮಾದಲ್ಲೇ ಅಂಬರೀಶ್ ಅವರ ಆಶೀರ್ವಾದ ವನ್ನ ಸ್ವೀಕರಿಸಿರುವ ದೃಶ್ಯದ ಬಗ್ಗೆ ಸುದೀಪ್ ಹೇಳಿಕೊಂಡಿದ್ದಾರೆ. ಮೊದಲ ದಿನದ ಚಿತ್ರೀಕರಣದ ಅನುಭವವನ್ನ ಮತ್ತೆ ನೆನಪು ಮಾಡಿಕೊಂಡಿದ್ದಾರೆ.

ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ ಕಿಚ್ಚ

22 ವರ್ಷದ ಸಿನಿಮಾ ಪ್ರಯಾಣದಲ್ಲಿ ಪಾಲುದಾರರಾದ ಎಲ್ಲರಿಗೂ ಕಿಚ್ಚ ಧನ್ಯವಾದ ತಿಳಿಸಿದ್ದಾರೆ. ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು, ಸಹ ಕಲಾವಿದರು, ಮಾಧ್ಯಮಗಳು, ವಿತರಕರು, ಪ್ರದರ್ಶಕರು ಸೇರಿದಂತೆ ಅವರ ಜೊತೆ ಕೆಲಸ ಮಾಡುವ ಕಾರ್ಮಿಕರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಮನೆಯವರಿಗೆ ಧನ್ಯವಾದ ತಿಳಿಸಿದ ಸುದೀಪ್

"ಸಿನಿಮಾ ಅನ್ನುವುದು ತುಂಬ ಸುಂದರವಾದ ವಿಚಾರ ಅದು ನನ್ನ ಜೀವನದಲ್ಲಿ ಸಿನಿಮಾ ಒಂದು ಭಾಗವಾಗಿರುವುದಕ್ಕೆ ಖುಷಿ ಪಡುತ್ತೇನೆ. ನನ್ನ ಈ ಬೆಳವಣಿಗೆ ಕಾರಣವಾದ ನನ್ನ ಕುಟುಂಬ ಹಾಗೂ ಅಭಿಮಾನಿಗಳಿಗೆ ನಾನು ಸದಾ ಋಣಿ ಆಗಿರುತ್ತೇನೆ".- ಕಿಚ್ಚ ಸುದೀಪ್

22ರ ಸಂಭ್ರಮದಲ್ಲಿ ಕಿಚ್ಚ ಸುದೀಪ್

22ವರ್ಷದ ಅನುಭವವನ್ನ ಕಿಚ್ಚದಾಗಿ ಚೊಕ್ಕದಾಗಿ ಸುದೀಪ್ ಬರೆದಿದ್ದಾರೆ. ಈ ಸಿನಿಮಾ ಪ್ರಯಾಣ ಹೀಗೆ ಮುಂದುವರೆಯಲಿದೆ ಎಂದಿದ್ದಾರೆ. ಸದ್ಯ ಬಿಗ್ ಬಾಸ್ ಮುಗಿಸಿರುವ ಕಿಚ್ಚ ಇನ್ನು ಕೆಲವೇ ದಿನಗಳಲ್ಲಿ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾದಲ್ಲಿ ಭಾಗಿ ಆಗಲಿದ್ದಾರೆ.

English summary
Kannada actor Kiccha Sudheep's has completed 22 years in Kannada film industry. He has expressed his opinion on the social networking site .

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X