ಕಿಚ್ಚ ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ಟ್ರೈಲರ್ ವೀವ್ಸ್, ಲೈಕ್ಸ್ ಎಲ್ಲಾ ಫೇಕಾ?

ವಿಜಯ್ ಕಾರ್ತಿಕೇಯನ್ ನಿರ್ದೇಶನದ 'ಮಾರ್ಕ್' ಸಿನಿಮಾ ಟ್ರೈಲರ್ ರಿಲೀಸ್ ಆಗಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಕಿಚ್ಚನ ಮಾಸ್ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಕೆಲವೇ ಗಂಟೆಗಳಲ್ಲಿ ಸಿನಿಮಾ ಟ್ರೈಲರ್ ಬರೀ ಕನ್ನಡದಲ್ಲೇ 1 ಕೋಟಿಗೂ ಹೆಚ್ಚು ವೀವ್ಸ್ ಸಾಧಿಸಿದೆ. ಬ್ಲಾಕ್‌ಬಸ್ಟರ್ ಹಿಟ್ 'ಮ್ಯಾಕ್ಸ್' ಕಾಂಬಿನೇಷನ್‌ನಲ್ಲೇ ಬರ್ತಿರೋ 'ಮಾರ್ಕ್' ಸಖತ್ ಹೈಪ್ ಕ್ರಿಯೇಟ್ ಮಾಡಿದೆ.

ಡಿಸೆಂಬರ್ 25ಕ್ಕೆ 'ಮಾರ್ಕ್' ಸಿನಿಮಾ ಗ್ರ್ಯಾಂಡ್ ರಿಲೀಸ್ ಆಗ್ತಿದೆ. ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಕೂಡ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. 3 ದಿನಗಳ 'ಡೆವಿಲ್' ಟ್ರೈಲರ್ ದಾಖಲೆಯನ್ನು 'ಮಾರ್ಕ್' ಕೇವಲ 10 ಗಂಟೆಗಳಲ್ಲಿ ಮುರಿದಿದೆ. 'KGF- 2' ಟ್ರೈಲರ್ ಬಳಿಕ 24 ಗಂಟೆಗಳಲ್ಲಿ ಅತಿಹೆಚ್ಚು ವೀವ್ಸ್ ಗಳಿಸಿದ ಟ್ರೈಲರ್ ಇದಾಗಿದೆ. ಬರೀ ಕನ್ನಡದಲ್ಲಿ ಮಾತ್ರ 24 ಗಂಟೆಗಳಲ್ಲಿ 1 ಕೋಟಿ 40 ಲಕ್ಷ ವೀವ್ಸ್ ಹಾಗೂ 3 ಲಕ್ಷದ 88 ಸಾವಿರ ಲೈಕ್ಸ್ ಪಡೆದುಕೊಂಡಿದೆ.

Sudeep s Mark Trailer Breaks Records Amid Trolls Questioning Sudden Spike in Views

ಚಿತ್ರಮಂದಿರಗಳಲ್ಲಿ ಕೂಡ 'ಮಾರ್ಕ್' ಸಿನಿಮಾ ಟ್ರೈಲರ್ ಪ್ರಸಾರ ಮಾಡಿದ್ದರು. ಕೆಲ ಅಭಿಮಾನಿಗಳು ದೊಡ್ಡ ಪರದೆಯಲ್ಲಿ ಕಿಚ್ಚನ ಮಾಸ್ ದರ್ಬಾರ್ ಕಣ್ತುಂಬಿಕೊಂಡಿದ್ದಾರೆ. ಟ್ರೈಲರ್ ಸೂಪರ್ ಹಿಟ್ ಆಗಿದ್ದು ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಇದೆಲ್ಲದರ ನಡುವೆ 'ಮಾರ್ಕ್' ಟ್ರೈಲರ್ ವೀವ್ಸ್ ಹಾಗೂ ಲೈಕ್ಸ್ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೀತಿದೆ. ಇದಕ್ಕೆ ಒಂದಷ್ಟು ಸಾಕ್ಷ್ಯಗಳನ್ನು ಮುಂದಿಡುತ್ತಿದ್ದಾರೆ.

ಹೇಳಿಕೇಳಿ 'ಮಾರ್ಕ್' ರೆಗ್ಯುಲರ್ ಕಮರ್ಷಿಯಲ್ ಸಿನಿಮಾ. ಹೇಳಿದ್ದ ಸಮಯಕ್ಕಿಂತ ಕೊಂಚ ನಿಧಾನವಾಗಿ ಟ್ರೈಲರ್ ರಿಲೀಸ್ ಆಗಿತ್ತು. ಆರಂಭದಲ್ಲಿ ಅಂತಹ ರೆಸ್ಪಾನ್ಸ್ ಇರಲಿಲ್ಲ. ಆದರೆ ದಿಢೀರನೆ ವೀವ್ಸ್, ಲೈಕ್ಸ್ ಜಾಸ್ತಿ ಆಗಿದ್ದು ಹೇಗೆ? ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ. ಟ್ರೈಲರ್ ಚೆನ್ನಾಗಿದೆ ನಿಜ. ಕಿಚ್ಚನ ಪರ್ಫಾರ್ಮನ್ಸ್, ವಿಜಯ್ ಕಾರ್ತಿಕೇಯನ್ ಟೇಕಿಂಗ್, ಆಕ್ಷನ್ ಸೀಕ್ವೆನ್ಸ್, ಡೈಲಾಗ್ಸ್ ಎಲ್ಲವೂ ಸೂಪರ್. ಆದರೂ ವೀವ್ಸ್ ಹಾಗೂ ಲೈಕ್ಸ್ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಹೀಗೆ ದೊಡ್ಡ ಸಿನಿಮಾಗಳ ಟ್ರೈಲರ್‌ಗಳು ದಿಢೀರನೆ ಅಚ್ಚರಿ ಎನ್ನುವಂತೆ ವೀವ್ಸ್, ಲೈಕ್ಸ್ ಸಾಧಿಸಿದಾಗ ಟ್ರೋಲ್ ಮಾಡುವುದನ್ನು ನೋಡಿದ್ದೇವೆ. ಅದೇ ಈಗ 'ಮಾರ್ಕ್' ಟ್ರೈಲರ್ ವಿಚಾರದಲ್ಲೂ ನಡೀತಿದೆ.

Sudeep s Mark Trailer Breaks Records Amid Trolls Questioning Sudden Spike in Views

'ಮಾರ್ಕ್' ಟ್ರೈಲರ್ ಬಿಡುಗಡೆಯಾದ ಮೊದಲ 7 ಗಂಟೆಗಳಲ್ಲಿ 1 ಕೋಟಿ 30 ಲಕ್ಷ ವೀವ್ಸ್ ಸಾಧಿಸಿತ್ತು. ಆದರೆ ಬಳಿಕ ಮೊದಲ 24 ಗಂಟೆಗಳಲ್ಲಿ 1 ಕೋಟಿ 40 ಲಕ್ಷ ವೀವ್ಸ್ ಸಾಧಿಸಿದ ದಾಖಲೆ ಮಾಡಿದೆ. ಅಂದರೆ ಇನ್ನುಳಿದ 18 ಗಂಟೆಗಳಲ್ಲಿ ಕೇವಲ 10 ಲಕ್ಷ ವೀವ್ಸ್ ಮಾತ್ರ ಸಾಧಿಸಿತ್ತಾ? ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಸುದೀಪ್ ಅಭಿಮಾನಿಗಳು ಮಾತ್ರ ಇದಕ್ಕೆಲ್ಲಾ ತಿರುಗೇಟು ಕೊಡುತ್ತಿದ್ದಾರೆ.

'ಮ್ಯಾಕ್ಸ್' ಚಿತ್ರ ಕಟ್ಟಿಕೊಟ್ಟಿದ್ದ ತಂಡವೇ 'ಮಾರ್ಕ್' ಚಿತ್ರಕ್ಕೂ ಜೊತೆಯಾಗಿದೆ. ಟ್ರೈಲರ್ ಕೂಡ ಚೆನ್ನಾಗಿ ಕಟ್ ಮಾಡಿದ್ದಾರೆ. ಅಜನೀಶ್ ಬಿಜಿಎಂ ಸಖತ್ ಕಿಕ್ ಕೊಡ್ತಿದೆ. ಅದೇ ಕಾರಣಕ್ಕೆ ಅಭಿಮಾನಿಗಳು ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ. ಹಾಗಾಗಿ ವೀವ್ಸ್, ಲೈಕ್ಸ್ ಬಂದಿದೆ, ಸುದೀಪ್ ಸರ್ ಚಿತ್ರಕ್ಕೆ ಪೇಯ್ಡ್ ವೀವ್ಸ್, ಲೈಕ್ಸ್ ಯಾಕೆ ಬೇಕು ಎನ್ನುವವರು ಇದ್ದಾರೆ. ಯಾವುದೇ ಸಿನಿಮಾ ಟ್ರೈಲರ್ ಬಂದಾಗ ಸೋಶಿಯಲ್ ಮೀಡಿಯಾದಲ್ಲಿ ಇಂತಹ ಚರ್ಚೆ ಸರ್ವೇ ಸಾಮಾನ್ಯ ಎನ್ನುವಂತಾಗಿಬಿಟ್ಟಿದೆ.

ಸತ್ಯಜ್ಯೋತಿ ಫಿಲ್ಮ್ಸ್ ಹಾಗೂ ಕಿಚ್ಚ ಕ್ರಿಯೇಷನ್ಸ್ ಜಂಟಿಯಾಗಿ 'ಮಾರ್ಕ್' ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಚಿತ್ರ ವಿತರಣೆಗೆ ಮಾಡುತ್ತಿದೆ. ವರ್ಷದ ಕೊನೆಗೆ ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಖಡಕ್ ಪೊಲೀಸ್ ಆಫೀಶರ್ ಅಜಯ್ ಮಾರ್ಕಂಡೆಯ ಅವತಾರದಲ್ಲಿ ಸುದೀಪ್ ಅಬ್ಬರಿಸೋಕೆ ಬರ್ತಿದ್ದಾರೆ. ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಕಾಯ್ತಿದೆ.

More from Filmibeat

Read more about: sudeep devil
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X