ಕಿಚ್ಚ ಸುದೀಪ್ Vs ಗಣೇಶ್, ಸಂಬಂಧಿಗಳ ನಡುವೆಯೇ ಪೈಪೋಟಿನಾ?

ಈ ವರ್ಷ ದೊಡ್ಡ ಸಿನಿಮಾಗಳು ಚಿತ್ರಮಂದಿರಕ್ಕೆ ಬಾರದೇ ಸಂಕಷ್ಟ ಎದುರಿಸುವಂತಾಗಿದೆ. ಕಳೆದ 6 ತಿಂಗಳಲ್ಲಿ ಸ್ಯಾಂಡಲ್‌ವುಡ್ ಸಾಧನೆ ಕೇಳಿಕೊಳ್ಳುವಂತಿಲ್ಲ. ಮುಂದಿನ 6 ತಿಂಗಳಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ತೆರೆಗೆ ಬರಬೇಕಿದೆ. ಆದರೆ ಇಷ್ಟು ದಿನ ಚಿತ್ರಮಂದಿರಕ್ಕೆ ಬರಲು ಹಿಂದೇಟು ಹಾಕಿದವರು ಈಗ ಒಟ್ಟೊಟ್ಟಿಗೆ ಬರುವಂತಾಗಿದೆ.

ನಿಯಮಿತವಾಗಿ ದೊಡ್ಡ ಸಿನಿಮಾಗಳು ಚಿತ್ರಮಂದಿರಕ್ಕೆ ಬರದೇ ಇರುವುದು ತಪ್ಪಾಗುತ್ತದೆ. ಅದೇ ರೀತಿ ಒಟ್ಟೊಟ್ಟಿಗೆ ಸ್ಟಾರ್ ನಟರ ಸಿನಿಮಾಗಳು ತೆರೆಗಪ್ಪಳಿಸಿದರೂ ಸಮಸ್ಯೆನೇ. ಸದ್ಯ ಸುದೀಪ್ ನಟನೆಯ 'ಮ್ಯಾಕ್ಸ್' ಹಾಗೂ ಗಣೇಶ್ ಹೀರೊ ಆಗಿರುವ 'ಕೃಷ್ಣಂ ಪ್ರಣಯ ಸಖಿ' ಸಿನಿಮಾಗಳು ಒಂದೇ ದಿನ ತೆರೆಗೆ ಬರುತ್ತದೆ ಎನ್ನುವ ಗುಸುಗುಸು ಶುರುವಾಗಿದೆ.

Sudeep s MAX and Ganesh s Krishnam Pranaya Sakhi to clash at the box office in august

ಈಗಾಗಲೇ ಗಣೇಶ್ ನಟನೆಯ 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ರಿಲೀಸ್ ಡೇಟ್ ಘೋಷಣೆ ಆಗಿದೆ. ಆಗಸ್ಟ್ 15ಕ್ಕೆ ಸಿನಿಮಾ ತೆರೆಗೆ ಬರೋದು ಪಕ್ಕಾ ಆಗಿದೆ. ಆದರೆ ಅದೇ ದಿನ 'ಮ್ಯಾಕ್ಸ್' ಸಿನಿಮಾ ಬಿಡುಗಡೆಗೆ ಚಿತ್ರತಂಡ ಮುಂದಾಗಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ವಿಜಯ್ ಕಾರ್ತಿಕೇಯನ್ ನಿರ್ದೇಶನದ 'ಮ್ಯಾಕ್ಸ್' ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗಪ್ಪಳಿಸಲಿದೆ.

ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ 4 ದಿನಗಳ ಲಾಂಗ್ ವೀಕೆಂಡ್ ಸಿಗಲಿದೆ. ಹಾಗಾಗಿ ಇದೇ ವೀಕೆಂಡ್ ಟಾರ್ಗೆಟ್ ಮಾಡುವ ಪ್ರಯತ್ನ ಫಿಲ್ಮ್ ಮೇಕರ್ಸ್ ಮಾಡುತ್ತಿದ್ದಾರೆ. ತೆಲುಗಿನ 'ಪುಷ್ಪ'-2 ಹಾಗೂ ಕನ್ನಡದ 'ಭೈರತಿ ರಣಗಲ್' ಸಿನಿಮಾಗಳು ಆಗಸ್ಟ್ 15ಕ್ಕೆ ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಎರಡೂ ಸಿನಿಮಾಗಳ ರಿಲೀಸ್ ಮುಂದಕ್ಕೆ ಹೋಗಿದೆ. ಹಾಗಾಗಿ ಬೇರೆ ಸಿನಿಮಾಗಳು ಆ ವೀಕೆಂಡ್ ಮೇಲೆ ಕಣ್ಣಿಟ್ಟಿವೆ.

ಬಿಗ್‌ ಬಜೆಟ್ ಸಿನಿಮಾಗಳ ಬಿಡುಗಡೆಗೆ ಲಾಂಗ್ ವೀಕೆಂಡ್ ಅವಶ್ಯಕತೆಯಿದೆ. ಹಾಗಾಗಿ ಪ್ರತಿವರ್ಷ ಕ್ಯಾಲೆಂಡರ್‌ನಲ್ಲಿ ಲಾಂಗ್ ವೀಕೆಂಡ್‌ಗಳ ಹುಡುಕಾಟ ನಡೆಯುತ್ತದೆ. ಶ್ರೀನಿವಾಸ್ ರಾಜು ನಿರ್ದೇಶನದ 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ. ಈಗಾಗಲೇ ಚಿತ್ರದ ಒಂದೊಂದೇ ಸಾಂಗ್ ರಿಲೀಸ್ ಆಗಿ ಗಮನ ಸೆಳೆಯುತ್ತಿದೆ. ಗಣಿ ಒಂದೊಳ್ಳೆ ಬ್ರೇಕ್‌ಗಾಗಿ ಕಾಯುತ್ತಿದ್ದಾರೆ.

Sudeep s MAX and Ganesh s Krishnam Pranaya Sakhi to clash at the box office in august

ಇನ್ನು ಸುದೀಪ್ ನಟನೆಯ ಸಿನಿಮಾ ಬಿಡುಗಡೆಯಾಗಿ 2 ವರ್ಷವಾಗುತ್ತಾ ಬಂತು. 'ಮ್ಯಾಕ್ಸ್' ಸಿನಿಮಾ ಕೂಡ ತಡವಾಗುತ್ತಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ. ಇದೀಗ ಸಿನಿಮಾ ಬಿಡುಗಡೆಗೆ ಚಿತ್ರತಂಡ ಮುಂದಾಗಿದೆ. ಶೂಟಿಂಗ್ ಜೊತೆ ಜೊತೆಗೆ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ವರ್ಕ್ ಮುಗಿಸುವ ಬಂದಿದ್ದು ಆದಷ್ಟು ಬೇಗ ಚಿತ್ರವನ್ನು ಪ್ರೇಕ್ಷಕರಿಗೆ ತೋರಿಸುವ ಪ್ರಯತ್ನದಲ್ಲಿದೆ.

ಸುದೀಪ್ ಹಾಗೂ ಗಣೇಶ್ ಬರೀ ಕನ್ನಡ ಚಿತ್ರರಂಗದ ಕಲಾವಿದರು ಮಾತ್ರವಲ್ಲ. ಇಬ್ಬರೂ ದೂರದ ಸಂಬಂಧಿಗಳು. ಹಾಗಾಗಿ ಇಬ್ಬರ ಸಿನಿಮಾಗಳ ನಡುವೆ ಬಾಕ್ಸಾಫೀಸ್ ಕ್ಲ್ಯಾಶ್ ನಡೆಯಲ್ಲ ಎನ್ನುವುದು ಕೆಲವರ ಲೆಕ್ಕಾಚಾರ. ಆದರೂ ರಜೆ ಇದ್ದಾಗ ಎರಡೂ ಸಿನಿಮಾ ಚೆನ್ನಾಗಿದ್ದರೆ ಎರಡನ್ನು ಜನ ನೋಡುತ್ತಾರೆ ಎನ್ನುವ ಲೆಕ್ಕಚಾರವೂ ಕೆಲವರಲ್ಲಿದೆ. ಅದೇ ಕಾರಣಕ್ಕೆ ಆಗಸ್ಟ್ 15ಕ್ಕೆ ಎರಡೂ ಸಿನಿಮಾಗಳು ತೆರೆಗೆ ಬಂದರೂ ಅಚ್ಚರಿಪಡಬೇಕಿಲ್ಲ.

ಅಧಿಕೃತವಾಗಿ 'ಮ್ಯಾಕ್ಸ್' ಸಿನಿಮಾ ರಿಲೀಸ್ ಡೇಟ್ ಘೋಷಣೆ ಆಗಿಲ್ಲ. ಸೆಪ್ಟೆಂಬರ್ 2ಕ್ಕೆ ಕಿಚ್ಚ ಸುದೀಪ್ ಹುಟ್ಟುಹಬ್ಬ. ಹಾಗಾಗಿ ಆಗಸ್ಟ್ ಕೊನೆ ವಾರದಲ್ಲಿ 'ಮ್ಯಾಕ್ಸ್' ಸಿನಿಮಾ ತೆರೆಗಪ್ಪಳಿಸುವ ಸಾಧ್ಯತೆಯೂ ಇದೆ. ಚಿತ್ರರಂಗಕ್ಕೆ ಸಂಕಷ್ಟದಲ್ಲಿದೆ. ಹಾಗಾಗಿ ಯಾವುದೇ ಬಾಕ್ಸಾಫೀಸ್ ಕ್ಲ್ಯಾಶ್ ಬೇಡ ಎನ್ನುವ ಕೂಗು ಚಿತ್ರರಂಗದಲ್ಲಿ ಕೇಳಿಬರ್ತಿದೆ.

More from Filmibeat

English summary
Kichcha Sudeep and Ganesh to clash at the box-office?
Read more about: filmibeat original sudeep ganesh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X