For Quick Alerts
  ALLOW NOTIFICATIONS  
  For Daily Alerts

  ಸುದೀಪ್ ಸವಾಲನ್ನ ಸ್ವೀಕರಿಸಿದ ಪತ್ನಿ ಪ್ರಿಯಾ ಪಾಸ್

  By Bharath Kumar
  |
  ಮಾಣಿಕ್ಯನ ಮಾತು ಎಂದು ಮೀರಲ್ಲ ಪ್ರಿಯ ಸುದೀಪ್ | Filmibeat Kannada

  ಭಾರತದಲ್ಲಿ ಫಿಟ್ನೆಸ್ ಚಾಲೆಂಜ್ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ. ಕೇಂದ್ರ ಸಚಿವಾಲಯದಿಂದ ಆರಂಭವಾದ ಈ ಫಿಟ್ನೆಸ್, ಬಾಲಿವುಡ್ ಸುತ್ತಾಡಿ ಈಗ ಸ್ಯಾಂಡಲ್ ವುಡ್ ನಲ್ಲಿ ಟ್ರೆಂಡಿಂಗ್ ಆಗಿದೆ.

  ಇತ್ತೀಚಿಗಷ್ಟೆ ಕಿಚ್ಚ ಸುದೀಪ್ ಕ್ರಿಕೆಟರ್ ವಿನಯ್ ಕುಮಾರ್ ಹಾಕಿದ್ದ ಚಾಲೆಂಜ್ ಸ್ವೀಕರಿಸಿ ವ್ಯಾಯಾಮ ಮಾಡಿ ಪಾಸ್ ಆಗಿದ್ದರು. ನಂತರ ರಾಕಿಂಗ್ ಸ್ಟಾರ್ ಯಶ್, ಸುದೀಪ್ ಪತ್ನಿ ಪ್ರಿಯಾ, ಶಿವಣ್ಣ, ಬಾಲಿವುಡ್ ನಟರಿಬ್ಬರಿಗೆ ಸವಾಲೆಸಿದಿದ್ದರು.

  ಕಿಚ್ಚ ಸುದೀಪ್ ಹಾಕಿದ್ದ ಚಾಲೆಂಜ್ ಗೆ ಟ್ವಿಸ್ಟ್ ಕೊಟ್ಟ ಯಶ್ಕಿಚ್ಚ ಸುದೀಪ್ ಹಾಕಿದ್ದ ಚಾಲೆಂಜ್ ಗೆ ಟ್ವಿಸ್ಟ್ ಕೊಟ್ಟ ಯಶ್

  ಕಿಚ್ಚ ಈ ಸವಾಲನ್ನ ಪತ್ನಿ ಪ್ರಿಯಾ ಮತ್ತು ರಾಕಿಂಗ್ ಸ್ಟಾರ್ ಯಶ್ ಸ್ವೀಕರಿಸಿದ್ದಾರೆ. ಪ್ರಿಯಾ ಅವರು ಸುದೀಪ್ ನೀಡಿದ ಚಾಲೆಂಜ್ ಗೆ ಪ್ರತಿಕ್ರಿಯೆಸಿದ್ದು, ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಶೇರ್ ಮಾಡಿದ್ದಾರೆ.

  ಅಷ್ಟೇ ಅಲ್ಲದೇ ಸುದೀಪ್ ಹಾಕಿದ ಚಾಲೆಂಜ್ ನಲ್ಲಿ ಗೆದ್ದ ಪ್ರಿಯಾ ಕನ್ನಡ ನಟಿ ಶ್ರುತಿ ಹರಿಹರನ್, ಆಮಿ ಜಾಕ್ಸನ್, ಸುಜಾತ ಸಂಜೀವ್ ಅವರಿಗೆ ಚಾಲೆಂಜ್ ಹಾಕಿದ್ದಾರೆ.

  ಅಂದ್ಹಾಗೆ, ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್ 'ಹಮ್ ಫಿಟ್ ತೋ ಇಂಡಿಯಾ ಫಿಟ್' (HumFitToIndiaFit) ಎಂಬ ಹ್ಯಾಷ್ ಟ್ಯಾಗ್ ನಲ್ಲಿ ಫಿಟ್ನೆಸ್ ಕುರಿತು ಹೊಸದೊಂದು ಅಭಿಯಾನ ಆರಂಭಿಸಿದ್ದರು. ನಂತರ ಕ್ರಿಕೆಟಿಗ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ, ಹೃತಿಕ್ ರೋಷನ್, ಶಿಲ್ಪಾ ಶೆಟ್ಟಿ, ನಾಗಾರ್ಜುನ ಸೇರಿದಂತೆ ಹಲವರು ಈ ಸಾವಲು ಸ್ವೀಕರಿಸಿ ಜಾಗೃತಿ ಮೂಡಿಸಿದ್ದಾರೆ.

  ಯಶ್ ಹಾಗೂ ಶಿವರಾಜ್ ಕುಮಾರ್ ಗೆ ಚಾಲೆಂಜ್ ಹಾಕಿದ ಕಿಚ್ಚಯಶ್ ಹಾಗೂ ಶಿವರಾಜ್ ಕುಮಾರ್ ಗೆ ಚಾಲೆಂಜ್ ಹಾಕಿದ ಕಿಚ್ಚ

  ಇನ್ನು ಕನ್ನಡದ ಹಲವು ತಾರೆಯರು ಈ ಫಿಟ್ನೆಸ್ ಅಭಿಯಾನಕ್ಕೆ ಸಾಥ್ ನೀಡಿದ್ದು, ಸುದೀಪ್, ನಟಿ ಸಂಯುಕ್ತಾ ಹೊರನಾಡು, ಲೂಸಿಯಾ ಪವನ್ ಕುಮಾರ್ ಹಾಗೂ ರಾಧಿಕಾ ಚೇತನ್ ವಿಡಿಯೋ ಮಾಡಿದ್ದಾರೆ.

  English summary
  Kannada actor Sudeep's Wife Priya accepted hum fit toh india fit challenge from Sudeep. Actress Samyukta Hornadu, Pavan Kumar, Radhika chetan Posted Fitness Video For 'hum fit toh india fit campaign'

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X