»   » ಮೌಂಟ್ ಎವೆರೆಸ್ಟ್ ಸುತ್ತಿ ಬಂದ್ರು ಕಿಚ್ಚ ಸುದೀಪನ ಮಡದಿ

ಮೌಂಟ್ ಎವೆರೆಸ್ಟ್ ಸುತ್ತಿ ಬಂದ್ರು ಕಿಚ್ಚ ಸುದೀಪನ ಮಡದಿ

Posted By:
Subscribe to Filmibeat Kannada

ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದ ಮಲ್ಟಿ ಟ್ಯಾಲೆಂಟೆಡ್ ನಟ. ಅಭಿನಯ, ನಿರ್ದೇಶನ, ನಿರೂಪಣೆ ಜೊತೆಯಲ್ಲಿ ಸುಮದುರವಾಗಿ ಹಾಡುವ ಸಾಮರ್ಥ್ಯ ಹೊಂದಿರುವ ಕಲಾವಿದ. ಇಷ್ಟೆಲ್ಲಾ ಪ್ರತಿಭೆ ಇರುವ ನಾಯಕನ ಹೆಂಡತಿ ಕೂಡ ಅವ್ರಂತೆಯೇ. ಮನೆಯನ್ನ ನಿಭಾಯಿಸುವುದರ ಜೊತೆಯಲ್ಲಿ ಇವೆಂಟ್ ಕಂಪನಿ ಹಾಗೂ ನಿರ್ಮಾಣ ಸಂಸ್ಥೆಯನ್ನೂ ನೋಡಿಕೊಳ್ಳುತ್ತಿದ್ದಾರೆ ಪ್ರಿಯಾ ಸುದೀಪ್.

ಇವುಗಳ ಮಧ್ಯೆ ತಮ್ಮ ಆಸೆಯನ್ನ ಬಚ್ಚಿಡದೆ ಪ್ರಿಯಾ ಸುದೀಪ್ ಇತ್ತೀಚಿಗಷ್ಟೇ ಮೌಂಟ್ ಎವೆರೆಸ್ಟ್ ಪರ್ವತವನ್ನ ಸುತ್ತಿ ಬಂದಿದ್ದಾರೆ. ವಿಶೇಷ ಅಂದರೆ ಪ್ರಿಯಾ ಸುದೀಪ್ ಜೊತೆಯಲ್ಲಿ ಮಗಳು ಸ್ವಾನಿ ಕೂಡ ಮೌಂಟ್ ಎವೆರೆಸ್ಟ್ ನೋಡಿಕೊಂಡು ಬಂದಿದ್ದಾರೆ.

Sudeep's wife Priya Sudeep recently looked Mount Everest from a plane.

ವಿಮಾನದಲ್ಲಿ ಮೌಂಟ್ ಎವರೆಸ್ಟ್ ಒಂದು ಸುತ್ತು ಹಾಕಿರುವ ಅಮ್ಮ ಮಗಳು ಅಲ್ಲಿಂದ ಬಂದ ನಂತ್ರ ಅದರ ಅನುಭವವನ್ನ ಹಂಚಿಕೊಂಡಿದ್ದಾರೆ. ಪೋಟೋ ಜೊತೆಗೆ "ಹದ್ದಿನ ರೀತಿಯಲ್ಲಿ ಪರ್ವತವನ್ನ ಸುತ್ತಿದ ಹಾಗೆ ಅನುಭವ ಆಯ್ತು. ಭವ್ಯವಾದ ಮೌಂಟ್ ಎವೆರೆಸ್ಟ್ ನೋಡಿದ ಅನುಭವ ಎಂದಿಗೂ ಮರೆಯಲಾಗದು" ಎಂದು ಟ್ವಿಟ್ ಮಾಡಿದ್ದಾರೆ.

Sudeep's wife Priya Sudeep recently looked Mount Everest from a plane.

ಪ್ರಿಯಾ ಸುದೀಪ್ ಸದಾ ಯಾವುದಾದರೂ ಕೆಲಸಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಳ್ಳುತ್ತಾರೆ. ಸುದೀಪ್ ಅವರಂತೆ ಗಾರ್ಡನಿಂಗ್ ನಲ್ಲಿ ಇಂಟ್ರೆಸ್ಟ್ ಇದ್ದು ತಮ್ಮ ಮನೆಯಲ್ಲೇ ಟೆರೆಸ್ ಗಾರ್ಡನ್ ನಲ್ಲಿ ತರಕಾರಿ ಸೊಪ್ಪನ್ನ ಬೆಳೆಯುತ್ತಾರೆ.

Sudeep's wife Priya Sudeep recently looked Mount Everest from a plane.
English summary
Kannada actor Kiccha Sudeep's wife Priya Sudeep and daughter Sanvi have recently looked at Mount Everest from a plane. Priya Sudeep wrote about this on twitter

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X