»   » ಸುಲಗ್ನಾ ಸಾವಧಾನ, ನಡೆಯಿತು ಸುದೀಪನ ಕಲ್ಯಾಣ

ಸುಲಗ್ನಾ ಸಾವಧಾನ, ನಡೆಯಿತು ಸುದೀಪನ ಕಲ್ಯಾಣ

Posted By: Super
Subscribe to Filmibeat Kannada

ಸ್ಪರ್ಶ", 'ಹುಚ್ಚ " ಖ್ಯಾತಿಯ ಉದಯೋನ್ಮಖ ನಾಯಕ ನಟ ಸುದೀಪ್‌ ಈಗ ಚತುರ್ಭುಜರಾಗಿದ್ದಾರೆ. ಸುದೀಪ್‌ ಕೈಹಿಡಿದ ಹುಡುಗಿ ಪ್ರಿಯಾ. ಅ.19ರ ಶುಕ್ರವಾರ ಸುದೀಪ್‌ ವಿವಾಹ ಬೆಂಗಳೂರಿನಲ್ಲಿ ವಿಜೃಂಭಣೆಯಿಂದ ನೆರವೇರಿತು.

ಕನ್ನಡದ ಮೇರುನಟ ಡಾ.ರಾಜ್‌ಕುಮಾರ್‌, ಕ್ರೇಜಿಸ್ಟಾರ್‌ ರವಿಚಂದ್ರನ್‌ ಸೇರಿದಂತೆ ಕನ್ನಡ ಚಿತ್ರರಂಗದ ಹಲವು ಗಣ್ಯರು ನವ ದಂಪತಿಗಳಿಗೆ ಶುಭಕೋರಿದರು. ಅಂದಹಾಗೆ ಸುದೀಪ್‌ಗೂ ಶುಕ್ರವಾರಕ್ಕೂ ಬಿಡದ ನಂಟಿದೆ. ಸುದೀಪ್‌ ಹಾಗೂ ಪ್ರಿಯಾ ವಿವಾಹ ನಿಶ್ಚಿತಾರ್ಥ ಆದದ್ದು ಜನವರಿ 19ರ ಶುಕ್ರವಾರ. ಮದುವೆ ಆದದ್ದು ಅಕ್ಟೋಬರ್‌19ರ ಶುಕ್ರವಾರ ಅಂದಹಾಗೆ ಅವರ ಹೊಸ ಚಿತ್ರ ವಾಲಿ ಬಿಡುಗಡೆ ಆಗಿದ್ದೂ ಅ.19ರ ಶುಕ್ರವಾರವೇ.

ಅಂದರೆ ಸುದೀಪ್‌ಗೆ ಶುಭ ಶುಕ್ರವಾರದ ಬಗ್ಗೆ ಅಪಾರ ನಂಬಿಕೆ ಇರಬೇಕು. ಶುಕ್ರವಾರದ ಶುಭಗಳಿಗೆಯಲ್ಲಿ ಸತಿ-ಪತಿಗಳಾದ ಈ ಇಬ್ಬರ ಮುಂಬಾಳು ಹಸನಾಗಿರಲಿ ಎಂದು ಹಾರೈಸೋಣ.
ವಾರ್ತಾ ಸಂಚಯ

English summary
Kannada film actor Sudeep weds Priya on October 19, 2001

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada