For Quick Alerts
  ALLOW NOTIFICATIONS  
  For Daily Alerts

  ಮೊದಲನೇ ಇನ್ನಿಂಗ್ಸ್‌ನಲ್ಲಿ ಹಿಟ್‌ ವಿಕೆಟ್‌ ಮಾಡಿಕೊಂಡ ಸುಧಾಗೆ ಸೆಕೆಂಡ್‌ ಇನ್ನಿಂಗ್ಸ್‌ನಲ್ಲಿ ಜಯ ದಕ್ಕಿದೆ. ಚಂದನದ ಚಿಗುರು ಕಂಪ ಬೀರುತ್ತಿದೆ. ಬಸವೇಶ್ವರನಗರ, ಮಲ್ಲೇಶ್ವರದಲ್ಲಿ ನಗೆ ಹೊನಲಾಗಿದೆ.

  By Staff
  |

  *ವಿಶಾಖ ಎನ್‌.

  ಸುಧಾರಾಣಿ ಅಮ್ಮ ಆಗಿದ್ದಾರೆ. ಸೆಪ್ಟೆಂಬರ್‌ 21ರ ಶುಕ್ರವಾರ ಮಂಜುನಾಥ ಎಂಬ ಖಾಸಗಿ ನರ್ಸಿಂಗ್‌ ಹೋಂನಲ್ಲಿ ಹೆಣ್ಣುಮಗುವಿಗೆ ಜನ್ಮ ಕೊಟ್ಟಿದ್ದಾರೆ. ಗೋವರ್ಧನ ಹಾಗೂ ಸುಧಾ ದಾಂಪತ್ಯಕ್ಕೆ ಇದೀಗ ಸಂಪೂರ್ಣ ಅರ್ಥ ಸಿಕ್ಕಿದೆ.

  ವರ್ಷದ ಹಿಂದೆ ಸುಧಾ ಮರುಮದುವೆ ವಿಷಯ ಸಾಕಷ್ಟು ಸದ್ದು ಮಾಡಿತ್ತು. ಅಮೆರಿಕಾದ ಅರಿವಳಿಕೆ ತಜ್ಞ ಡಾ.ಶಾಸ್ತ್ರಿ ಅವರೊಟ್ಟಿಗೆ ಬಾಳಿದ ನಾಲ್ಕು ವರ್ಷಗಳ ಬದುಕು ಏಕಾಏಕಿ ಮುರಿದು ಬಿದ್ದದ್ದು ಯಾಕೆ ಅನ್ನುವುದು ಮಾತ್ರ ಇವತ್ತಿಗೂ ಸಸ್ಪೆನ್ಸ್‌. ಮಲ್ಲೇಶ್ವರದಲ್ಲೇ ತವರು ಮನೆ ಇದ್ದರೂ ಸುಧಾ ಮರುಮದುವೆಯ ನಂತರ ಬಸವೇಶ್ವರನಗರದ ಸೊಸೆಯಾಗಿಯೇ ಉಳಿದಿದ್ದಾರೆ; ಗಂಡನ ಮನೆಯಲ್ಲೇ. ಅತ್ತೆ ಕೂಡ ಒಟ್ಟಿಗಿದ್ದಾರೆ. ಇದೀಗ ಅವರದು ತುಂಬು ಸಂಸಾರ. ತಾಯಾದ ಸಾರ್ಥಕತೆ. ಅಷ್ಟೇನೂ ಎಲೈಟ್‌ ಅಲ್ಲದ ಖಾಸಗಿ ನರ್ಸಿಂಗ್‌ ಹೋಂನಲ್ಲಿ ಸುಧಾ- ಮಗು ನಗುತ್ತಿರುವುದನ್ನು ಕಣ್ಣಾರೆ ಕಂಡ ಅವರ ಬಂಧು ಈ ವಿಷಯ ಸ್ಪಷ್ಟಪಡಿಸಿದ್ದಾರೆ.

  ನೊಂದ ಎರಡು ಹೃದಯಗಳು. ಸಂಸಾರ ಬಂಧನದಿಂದ ಒಮ್ಮೆ ತಾವೇ ಮುಕ್ತರಾದವರು. ಒಬ್ಬರಿಗೊಬ್ಬರಾದರು. ಒಂದಾದರು. ಮತ್ತೆ ಸಂಸಾರದ ನೊಗ ಹೊತ್ತರು. ವರ್ಷ ಕಾಲದಲ್ಲೇ ಮನೆಗೊಂದು ಮಗು ಕೊಟ್ಟರು. ಶಂಕರ ಮಠದ ಮುಂದಿನ ಸುಧಾ- ಗೋವರ್ಧನ್‌ ಮನೆಯಲ್ಲಿ ಇದೀಗ ಮಗುವಿನದೇ ಸುದ್ದಿ. ಮಲ್ಲೇಶ್ವರ- ಬಸವೇಶ್ವರನಗರ ಎರಡೂ ಕಡೆ ಜೂನಿಯರ್‌ ಸುಧಾ ಕಲರವ.

  ಅಮೆರಿಕಾದ ಜಂಜಡ ಬದುಕಿನಿಂದ ಮುರಿಟಿದ್ದ ಸುಧಾ ಚಂದನದ ಚಿಗುರು ಚಿತ್ರದ ತಮ್ಮ ಪಾತ್ರದಲ್ಲಿ ಪ್ರತಿಪಾದಿಸಿದ್ದೂ ವೈಯಕ್ತಿಕ ನಿಲುವನ್ನೇ. ಅಬ್ದುಲ್‌ ರೆಹಮಾನ್‌ ಪಾಷಾ ಸುಧಾ ಮನವನ್ನೇ ಆ ಪಾತ್ರದಲ್ಲಿ ಬಿಂಬಿಸಿದ್ದರು. ಅದಾದ ನಂತರ ಚಿತ್ರರಂಗದಿಂದ ಸುಧಾರಾಣಿ ಮರೆಯಾದದ್ದು ಯಾಕೆ ಎನ್ನುವ ಪ್ರಶ್ನೆ ಎಲ್ಲೂ ಕೇಳಿಬರಲಿಲ್ಲ. ಸ್ಯಾಂಡಲ್‌ವುಡ್‌ ಕೂಡ ಸುಧಾರಾಣಿಯನ್ನು ಮರೆತೇಬಿಟ್ಟಿದೆ. ಸುಧಾ ಬಸುರಿಯಾದ ಬಗೆಗೂ ಎಲ್ಲೂ ವರದಿಯಾಗಲಿಲ್ಲ. ಪ್ರಾಯಶಃ ವಿವಾದ- ವಿಚ್ಛೇದನ ಸೆಳೆಯುವಷ್ಟು ಇಂಥಾ ವಿಷಯಗಳು ಮಾಧ್ಯಮಗಳನ್ನು ಆಕರ್ಷಿಸುವುದಿಲ್ಲ.

  ಮೊದಲನೇ ಇನ್ನಿಂಗ್ಸ್‌ನಲ್ಲಿ ಹಿಟ್‌ ವಿಕೆಟ್‌ ಮಾಡಿಕೊಂಡ ಸುಧಾ ಸೆಕೆಂಡ್‌ ಇನ್ನಿಂಗ್ಸ್‌ನಲ್ಲಿ ಜಯ ದಕ್ಕಿಸಿಕೊಂಡಿದ್ದಾರೆ. ಕಲ್ಲರಳಿ ಹೂವಾಗಿದೆ. ಚಂದನದ ಚಿಗುರು ಕಂಪ ಬೀರುತ್ತಿದೆ. ಜೀವನದಲ್ಲಿ ಎರಡು ಜೀವಗಳು ಕಂಡುಕೊಂಡ ಒಲವಿನ ದಾರಿ ಸರಿದಾರಿಯಾಗಿದೆ. ಸುಧಾ ಬಾಣಂತನ ಮುಗಿಸಿಕೊಂಡು ಮತ್ತೆ ಸಿನಿಮಾಗೆ ಮರಳಲಿ. ಆಮದು ಬಿಚ್ಚಮ್ಮರ ಸಂಪ್ರದಾಯ ಬೇರೂರರದಂತೆ ಮಾಡಲಿ. ಕಂಗ್ರಾಟ್ಸ್‌ ಸುಧಾ.

  What do you think about this article ?

  ಸುಧಾ ಜೀವನ ಪಯಣ....
  ಸುಧಾರಾಣಿ ಮರುಮದುವೆ
  ಮರಳಿ ಬಂದಳು ಸೀತೆ , ನಿಜವಾಯಿತು ನಿರೀಕ್ಷೆ
  ಪ್ರತಿಯಾಂದು ಮದುವೆಯೂ ಭರವಸೆಯ ವ್ಯವಸಾಯ

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X