»   » ಇಡೀ ಸ್ಯಾಂಡಲ್‌ವುಡ್‌ ಕಣ್ಣು ಪ್ರೇಮಾ, ಶಿಲ್ಪ ಶ್ರೀನಿವಾಸ್‌ ಮೇಲೆ ನೆಟ್ಟಿದ್ದಾಗ ಮೊನ್ನೆ ಮಲ್ಲೇಶ್ವರಂನ ತಮ್ಮ ತವರು ಮನೆಯಲ್ಲಿ ಸುಧಾರಾಣಿ ಮಾವಿನ ಸೊಪ್ಪಿನ ತೋರಣ ಕಟ್ಟುತ್ತಿದ್ದರು , ಏನೀ ಸಂಭ್ರಮ ?

ಇಡೀ ಸ್ಯಾಂಡಲ್‌ವುಡ್‌ ಕಣ್ಣು ಪ್ರೇಮಾ, ಶಿಲ್ಪ ಶ್ರೀನಿವಾಸ್‌ ಮೇಲೆ ನೆಟ್ಟಿದ್ದಾಗ ಮೊನ್ನೆ ಮಲ್ಲೇಶ್ವರಂನ ತಮ್ಮ ತವರು ಮನೆಯಲ್ಲಿ ಸುಧಾರಾಣಿ ಮಾವಿನ ಸೊಪ್ಪಿನ ತೋರಣ ಕಟ್ಟುತ್ತಿದ್ದರು , ಏನೀ ಸಂಭ್ರಮ ?

Subscribe to Filmibeat Kannada

*ವಿಶಾಖ ಎನ್‌.

ಬದುಕು ಜಟಕಾಬಂಡಿ ವಿಧಿಯದರ ಸಾಹೇಬ ಕುದುರೆ ನೀನ್‌ ಅವನು ಪೇಳ್ದಂತೆ ಪಯಣಿಗರು ಅಂತ ಡಿ.ವಿ.ಗುಂಡಪ್ಪ ಅರ್ಧ ಶತಮಾನದ ಹಿಂದೆಯೇ ಹೇಳಿದ್ದು ಇವತ್ತಿನ ಸಿನಿಮಾ ಮಂದಿಗೂ ಅನ್ವಯಿಸುತ್ತದೆ. ಮೊನ್ನೆಯ ಬುಧವಾರವನ್ನು ಉದಾಹರಣೆಯಾಗಿ ತೆಗೆದುಕೊಂಡಲ್ಲಿ ... ತಾರಾ ಹಾಗೂ ಭಾವನಾ ನೆಲಮಂಗಲದ ಸಮಾರಂಭವೊಂದರ ವೇದಿಕೆ ಮೇಲೆ ಕುಂತು ನಗುತ್ತಿದ್ದರು. ಶಿಲ್ಪಾ ಶ್ರೀನಿವಾಸ್‌ ಕೀರಲಾಟದಿಂದ ಬಸವಳಿದಿದ್ದ ಪ್ರೇಮಾ ಬೆವರುತ್ತಲೇ ಇದ್ದರು. ಅದೇ ವೇಳೆಗೆ ಮಲ್ಲೇಶ್ವರಂನ ತಮ್ಮ ತವರು ಮನೆಯಲ್ಲಿ ಸುಧಾರಾಣಿ ಕಿಲಕಿಲನೆ ಓಡಾಡುತ್ತಿದ್ದರು, ಮಾರನೆಯ ದಿನ ತಮ್ಮ ಮುದ್ದು ಮಗಳ ನಾಮಕರಣಕ್ಕಾಗಿ.

ಸುಧಾರಾಣಿ ಜಾಡು ಅದು ಹೇಗೋ ನಮಗೆ ಸಿಕ್ಕಿ ಹೋಗಿದೆ. ಅವರ ಸದ್ದು ಗದ್ದಲ ಇದೀಗ ಸ್ಯಾಂಡಲ್‌ವುಡ್‌ನಿಂದ ಭಾರೀ ದೂರ. ಗುರುವಾರ ಅವರ ಮಗಳ ನಾಮಕರಣದಲ್ಲಿ ಸಿನಿಮಾ ನಕ್ಷತ್ರಗಳು ಮಿನುಗಲಿಲ್ಲ. ಕಾರಣ ಸ್ಪಷ್ಟ, ಸುಧಾರಾಣಿ ಯಾರನ್ನೂ ಕರೆದಿರಲಿಲ್ಲ. ಮನೆ ಮಟ್ಟಿನ ಸರಳ ಸಮಾರಂಭ ಅದು. ಮಲ್ಲೇಶ್ವರಂನ ಅವರ ತವರು ಮನೆಯ ಸುತ್ತಮುತ್ತಲ ಅಂಗಡಿಯವರಿಗೆ ಗೊತ್ತಿರುವ ವಿಷಯ ಗಾಂಧಿನಗರದ ಸಿನಿಮಾ ದುಕಾನುದಾರರಿಗೆ ಗೊತ್ತೇ ಇರಲಿಲ್ಲ !


ಮರು ಮದುವೆ ಸುಧಾರಾಣಿ ಅವರನ್ನು ಸಾಕಷ್ಟು ಬದಲಾಯಿಸಿದೆ. ಅವರೀಗ ಪಕ್ಕಾ ಗೃಹಿಣಿ. ತನ್ನ ಗಂಡನ ಮನೆಯಲ್ಲಿ ಒಗೆದು, ಇಸ್ತ್ರಿಯಾಗಿ ಬಂದ ಬಟ್ಟೆಯನ್ನು ಕಪಾಟಿನಲ್ಲಿಡುವುದು ಖುದ್ದು ಸುಧಾರಾಣಿಯೇ. ಮನೆಯ ಕೆಲಸಗಳಲ್ಲಿ ಭಾರೀ ಆಸ್ಥೆ. ಈ ಹಿಂದೆ ಮನೆಯ ಸಮಾರಂಭದಲ್ಲೇ ಅತಿಥಿಯಂತೆ ಇರುತ್ತಿದ್ದ ಸುಧಾ ಇದೀಗ ಹೋಂ ಮೇಕರ್‌. ಸ್ಯಾಂಡಲ್‌ವುಡ್ಡಿನಲ್ಲಿ ಮಿಡಿ- ಮಿನಿ ತೊಟ್ಟ ಕಾಲೇಜು ಹುಡುಗಿಯರು ಪರಾಂಬರಿಸುತ್ತಿರುವಾಗ ನಾನ್ಯಾಕೆ ಮಧ್ಯ ಅಂತ ಸುಧಾ ಸುಮ್ಮನಿರಬಹುದೇ? ಅವರಿಂದ ಯಾವುದಕ್ಕೂ ಸರಿಯಾದ ಉತ್ತರ ಸಿಗುವುದೇ ಇಲ್ಲ. ಅವರಾಯಿತು, ಅವರ ಸಂಸಾರವಾಯಿತು.

ಅಂದಹಾಗೆ, ಸುಧಾರಾಣಿ ಮಗಳ ಹೆಸರು ನಿಧಿ !

What do you think about this article ?

ಸುಧಾ ಜೀವನ ಪಯಣ....
ತೊಟ್ಟಿಲು ತೂಗಿದಳಾರಾಣಿ
ಸುಧಾರಾಣಿ ಮರುಮದುವೆ
ಮರಳಿ ಬಂದಳು ಸೀತೆ , ನಿಜವಾಯಿತು ನಿರೀಕ್ಷೆ
ಪ್ರತಿಯಾಂದು ಮದುವೆಯೂ ಭರವಸೆಯ ವ್ಯವಸಾಯ

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada