For Quick Alerts
  ALLOW NOTIFICATIONS  
  For Daily Alerts

  ನಟಿ ಸುಧಾರಾಣಿ ಇನ್ನುಮುಂದೆ ಡಾಕ್ಟರ್ ಸುಧಾರಾಣಿ!

  |

  ಅತ್ಯಂತ ಕಿರಿಯ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಸುಧಾರಾಣಿ, ಕನ್ನಡ ಚಿತ್ರರಂಗದಲ್ಲಿ ಬಹುದೂರ ಸಾಗಿ ಬಂದಿದ್ದಾರೆ. ಸುಧಾರಾಣಿಯವರ ಈ ಸಾಧನೆ ಗುರುತಿಸಿ ನಟಿಗೆ ಡಾಕ್ಟರೇಟ್ ಪದವಿ ನೀಡಲಾಗಿದೆ.

  ನಟಿ ಸುಧಾರಾಣಿ ಚಿತ್ರರಂಗಕ್ಕೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಇಂಡಿಯನ್ ಎಂಪೈರ್ ವಿಶ್ವವಿದ್ಯಾಲಯವು ಯೂನಿವರ್ಸಲ್ ಡೆವೆಲೆಪ್‌ಮೆಂಟ್‌ ಕೌನ್ಸಿಲ್‌ನಿಂದ ಗೌರವ ಡಾಕ್ಟರೇಟ್ ವಿತರಿಸಲಾಗಿದೆ. ಈ ಸಂತಸದ ವಿಷಯವನ್ನು ಸುಧಾರಾಣಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  ನಟಿ ಸುಧಾರಾಣಿ ಸತತ 35 ವರ್ಷಗಳಿಂದಲೂ ಚಿತ್ರರಂಗದಲ್ಲಿದ್ದಾರೆ. ಶಿವರಾಜ್ ಕುಮಾರ್ ಜೊತೆಗೆ 'ಆನಂದ್' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದಾಗ ಸುಧಾರಾಣಿ ವಯಸ್ಸು ಕೇವಲ 12 ವರ್ಷ. 'ಆನಂದ್' ಸಿನಿಮಾ ಶಿವರಾಜ್ ಕುಮಾರ್‌ ಅವರಿಗೂ ಮೊದಲ ಸಿನಿಮಾ. 'ಆನಂದ್‌' ಸಿನಿಮಾದಲ್ಲಿ ನಟಿಸುವುದಕ್ಕೂ ಮೊದಲು ಸುಧಾರಾಣಿ ಕೆಲವು ಸಿನಿಮಾಗಳಲ್ಲಿ ಬಾಲನಟಿಯಾಗಿಯೂ ನಟಿಸಿದ್ದರು. ಅಂದಿನಿಂದ ಈವರೆಗು ಹಲವಾರು ಸಿನಿಮಾಗಳಲ್ಲಿ ಸುಧಾರಾಣಿ ನಟಿಸಿದ್ದಾರೆ. ಕನ್ನಡ ಮಾತ್ರವೇ ಅಲ್ಲದೆ ಪರಭಾಷೆ ಸಿನಿಮಾಗಳಲ್ಲಿಯೂ ಸುಧಾರಾಣಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

  'ಆನಂದ್' ಸಿನಿಮಾ ಹಿಟ್ ಆದ ಬಳಿಕ ಶಿವರಾಜ್ ಕುಮಾರ್ ಜೊತೆಗೆ 'ಮನಮೆಚ್ಚಿದ ಹುಡುಗಿ', 'ಸಮರ', 'ರಣರಂಗ', 'ಆಸೆಗೊಬ್ಬ ಮೀಸೆಗೊಬ್ಬ' ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದರು. ಆ ಬಳಿಕ ನಟ ರಮೇಶ್‌ ಜೊತೆಗೂ ಜನಪ್ರಿಯ ಜೋಡಿ ಎನಿಸಿಕೊಂಡ ಸುಧಾರಾಣಿ ಅವರೊಟ್ಟಿಗೂ ಸುಮಾರು ಎಂಟು ಸಿನಿಮಾಗಳಲ್ಲಿ ನಟಿಸಿದರು. ತಮಿಳಿನಲ್ಲಿ ಶಾಲಿ ಹೆಸರಿನಲ್ಲಿ ಸುಮಾರು 10 ಸಿನಿಮಾಗಳಲ್ಲಿ ಸುಧಾರಾಣಿ ನಟಿಸಿದ್ದಾರೆ.

  ನೂರಾರು ಸಿನಿಮಾಗಳಲ್ಲಿ ಈವರೆಗೆ ನಟಿಸಿರುವ ಸುಧಾರಾಣಿ ಈಗಲೂ ನಟನೆಯನ್ನು ಮುಂದುವರೆಸಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ಜೊನೆಯ ಸಿನಿಮಾ 'ಯುವರತ್ನ' ದಲ್ಲಿ ಪ್ರೊಫೆಸರ್ ಆಗಿ ಸುಧಾರಾಣಿ ನಟಿಸಿದ್ದರು. ಇದೀಗ ಬಿಡುಗಡೆಗೆ ಸಜ್ಜಾಗಿರುವ 'ಅವತಾರ ಪುರುಷ' ಸಿನಿಮಾದಲ್ಲಿಯೂ ಸುಧಾರಾಣಿ ನಟಿಸಿದ್ದಾರೆ. ಈಗ ಪ್ರಧಾನ ಪೋಷಕ ಪಾತ್ರಗಳಿಗೆ ಸುಧಾರಾಣಿ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದಾರೆ.

  ತಮಗೆ ಗೌರವ ಡಾಕ್ಟರೇಟ್ ಲಭಿಸಿರುವ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸುಧಾರಾಣಿ, ''ಇಂಡಿಯನ್ ಎಂಪೈರ್ ವಿಶ್ವವಿದ್ಯಾಲಯವು ಯೂನಿವರ್ಸಲ್ ಡೆವೆಲೆಪ್‌ಮೆಂಟ್‌ ಕೌನ್ಸಿಲ್‌ ಸಹಯೋಗದೊಂದಿಗೆ, ನಾನು ಕಲಾಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆ ಗುರುತಿಸಿ ಗೌರವ ಡಾಕ್ಟರೇಟ್ ನೀಡಿದೆ. ಇದು ನನಗೆ ಬಹಳ ಗೌರವದ ವಿಷಯ. ಇದನ್ನು ನನ್ನ ಕುಟುಂಬ (ಅಭಿಮಾನಿಗಳು)ದೊಂದಿಗೆ ಹಂಚಿಕೊಳ್ಳಲು ನನಗೆ ಹೆಮ್ಮೆ ಎನಿಸುತ್ತದೆ'' ಎಂದು ಬರೆದುಕೊಂಡಿದ್ದಾರೆ.

  ಸುಧಾರಾಣಿ, ಶ್ರುತಿ ಹಾಗೂ ಇನ್ನಿತರೆ ಕೆಲವು ಹಿರಿಯ ನಟಿಯರು ಒಟ್ಟಾಗಿ ಸಾಮಾಜಿಕವಾಗಿ ಬಹಳ ಸಕ್ರಿಯರಾಗಿದ್ದಾರೆ. ಹಿರಿಯ ನಟಿಯರ ಮನೆಗೆ ಹೋಗಿ ಅವರನ್ನು ಮಾತನಾಡಿಸಿ, ಅವರೊಟ್ಟಿಗೆ ಕೆಲ ಕ್ಷಣ ಕಳೆದು ಅವರಿಗೆ ಜೀವನ ಸ್ಪೂರ್ತಿ ತುಂಬುವ ಕಾರ್ಯವನ್ನು ಈ ತಂಡ ಮಾಡುತ್ತಿದೆ.

  English summary
  Actress Sudha Rani felicitated with honorary doctorate by Universal Development Council in association with Indian Empire University considering her service in the field of Art.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X