twitter
    For Quick Alerts
    ALLOW NOTIFICATIONS  
    For Daily Alerts

    ಇನ್ಫೋಸಿಸ್‌ ನಾರಾಯಣ ಮೂರ್ತಿ ಪತ್ನಿ ಸುಧಾಮೂರ್ತಿ ಅವರ ‘ಡಾಲರ್‌ ಸೊಸೆ’

    By Super
    |

    ಈಕೆ ಏಳು ಕಾದಂಬರಿ ಬರೆದಿದ್ದಾರೆ. ಸಣ್ಣ ಕತೆಗಳ ಒಂದು ಸಂಕಲನ ಪ್ರಕಟವಾಗಿದೆ. ಮೂರು ಪ್ರವಾಸ ಕಥನಗಳನ್ನೂ ರಚಿಸಿದ್ದಾರೆ. ಹೀಗಿದ್ದೂ ಇನ್ಫೋಸಿಸ್‌ ನಾರಾಯಣ ಮೂರ್ತಿ ಅವರ ಅರ್ಧಾಂಗಿಯಾಗೇ ಫೇಮಸ್ಸು. ಈಕೆ ಸಾಹಿತಿಯಾಗಿ ಹೆಚ್ಚು ಸದ್ದು ಮಾಡಿಲ್ಲ. ಆದರೆ ಇನ್ಫೋಸಿಸ್‌ ಪ್ರತಿಷ್ಠಾನದ ಮೂಲಕ ಕೊಡುಗೈಯೆಂದು ಕರ್ನಾಟಕದಾದ್ಯಂತ ಗುರ್ತಿಸಿಕೊಂಡಿದ್ದಾರೆ. ಇಂಥಾ ಬಯೋಡೇಟಾ ಇರುವ ಸುಧಾ ಮೂರ್ತಿ ಇದೀಗ ಹಿಂದಿ ಕಿರುತೆರೆಗೆ ಪರಿಚಿತವಾಗಲಿದ್ದಾರೆ.

    ಅವರಿಗೆ ನಟನೆಯ ಅವಕಾಶವೇನೂ ಸಿಕ್ಕಿಲ್ಲ. 'ಡಾಲರ್‌ ಸೊಸೆ" ಎಂಬ ಅವರ ಕನ್ನಡದ ಕಾದಂಬರಿ ರಿkುೕ ಟೀವಿಯಲ್ಲಿ ಧಾರಾವಾಹಿಯಾಗಿ ಮೂಡಲಿದೆ. ಅಜೈ ಸಿನ್ಹಾ ಎಂಬುವರು ಕಾದಂಬರಿಯ ಹಕ್ಕು ಪಡೆದಿದ್ದು, 'ಡಾಲರ್‌ ಬಹು" ಎಂಬ ಹೆಸರಲ್ಲಿ ಧಾರಾವಾಹಿ ಪ್ರಸಾರವಾಗಲಿದೆ. ಟೈಮ್ಸ್‌ಆಫ್‌ ಇಂಡಿಯಾ ಡಾಟ್‌ ಕಾಂ ಈ ವಿಷಯವನ್ನು ಹೆಕ್ಕಿ ತೆಗೆದಿದೆ.

    ಸಾಹಿತಿ ಸುಧಾ ಹೀಗೆನ್ನುತ್ತಾರೆ- ನಾನು ಡಾಲರ್‌ ಸೊಸೆ ಬರೆದದ್ದು 7 ವರ್ಷಗಳ ಹಿಂದೆ. ಆಗ ಒಂದು ಡಾಲರಿನ ಬೆಲೆ 24 ರುಪಾಯಿ. ಈಗ ಒಂದು ಡಾಲರ್‌ ಬೆಲೆ 47 ರುಪಾಯಿ ಆಗಿದೆ. ನಾನು ಗಂಭೀರ ಸ್ವರೂಪದ ಹಾಗೂ ಹೊಸ ಹರವಿನ ಅನೇಕ ಪುಸ್ತಕಗಳನ್ನು ಬರೆದಿದ್ದರೂ, ಡಾಲರ್‌ ಸೊಸೆ ಜನಪ್ರಿಯವಾಯಿತು. ಮೈಸೂರು ವಿಶ್ವ ವಿದ್ಯಾಲಯ ಇದನ್ನು ಪಠ್ಯ ಪುಸ್ತಕವಾಗಿಯೂ ಅಳವಡಿಸಿತು. ತಮಿಳು, ಮರಾಠಿ ಹಾಗೂ ಹಿಂದಿ ಭಾಷೆಗಳಿಗೂ ಈ ಕಾದಂಬರಿ ತರ್ಜುಮೆಯಾಗಿದೆ. ರಿkುೕ ಟಿವಿಯವರು ಬಂದು ಅದನ್ನು ಸೀರಿಯಲ್‌ ಮಾಡ್ತೀವಿ ಅಂದಾಗ ಆಶ್ಚರ್ಯ, ಸಂತೋಷ ಎರಡೂ ಆಯಿತು. ಮೂಲ ಕಾದಂಬರಿಯನ್ನು ಧಾರಾವಾಹಿಗೆ ತರುವಾಗ ಕೊಂಚ ಬದಲಾವಣೆಗಳಾಗಲಿವೆ.

    ಡಾಲರ್‌ ಸೊಸೆಯ ಕಥೆ ಏನು?
    ಇಬ್ಬರು ಸೊಸೆಯರು- ಒಬ್ಬಾಕೆ ಅಮೆರಿಕೆಯಲ್ಲಿದ್ದಾಳೆ. ಮತ್ತೊಬ್ಬಳು ಭಾರತದಲ್ಲೇ ಇದ್ದಾಳೆ. ಈ ಇಬ್ಬರೂ ಸೊಸೆಯರಿಗೆ ಒಬ್ಬಳೇ ಅತ್ತೆ. ಈ ಅತ್ತೆ ಇಬ್ಬರೂ ಸೊಸೆಯರ ನಡುವೆ ಹೇಗೆ ಗೆರೆ ಎಳೆಯುತ್ತಾಳೆ ಎಂಬುದು ಕಥೆಯ ಎಳೆ. ಅಂದಮೇಲೆ, ಸಹಜವಾಗೇ ಇದು ಮನೆ ಮನೆ ಕಥೆಗಳಲ್ಲಿ ಯಾವುದೋ ಒಂದು ಆಗಿರಲೇ ಬೇಕಲ್ಲವೇ?

    ಕಾದಂಬರಿಯನ್ನು ಸಿನ್ಹಾ ಗಂಭೀರವಾಗಿ ಓದಿದಾಗ, ಅದರಲ್ಲಿನ ಸೆಳಕುಗಳು ಅವರನ್ನು ಹಿಡಿದಿಟ್ಟಿವೆ. ಒಂದು ಸೋಪ್‌ ಹುದುಗಿಸಿಟ್ಟುಕೊಳ್ಳಬಲ್ಲ ಎಲ್ಲಾ ಗುಣಗಳೂ ಅವರಿಗೆ ಇದರಲ್ಲಿ ಕಂಡಿವೆ. ಸೀರಿಯಲ್‌ ಮಾಡೇ ತೀರುವೆ ಎಂದು, ಸುಧಾ ಒಪ್ಪಿಗೆ ಕೇಳಿದ್ದಾರೆ. ಇವೆಲ್ಲಾ ಈಗ ಫ್ಯಾಷ್‌ಬ್ಯಾಕ್‌.

    ಸಿನ್ಹಾ ಈಗಾಗಲೇ ಧಾರಾವಾಹಿಯ 8 ಕಂತುಗಳನ್ನು ಚಿತ್ರಿಸಿದ್ದಾರೆ. ಯೋಜನೆಯ ಅರ್ಧದ ಚಿತ್ರೀಕರಣ ಅಮೆರಿಕೆಯಲ್ಲೇ ನಡೆಯಬೇಕು. ಹೈದರಾಬಾದಿನ ಸಾಹಿತಿಯಾಬ್ಬರಿಗೆ ಧಾರಾವಾಹಿಯ ಸ್ಕಿೃಪ್ಟನ್ನು ಸಿನ್ಹಾ ಕಳುಹಿಸಿಕೊಟ್ಟಿದ್ದು, ಅವರ ಸಲಹೆಗೂ ಕಾಯುತ್ತಿದ್ದಾರೆ. ಈ ಧಾರಾವಾಹಿ ಮನೆಮಾತಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುತ್ತಾರೆ ಸಿನ್ಹ.

    ಸುಧಾ ಮೂರ್ತಿ ಅವರೊಳಗಿನ ಸಾಹಿತಿ ಹಾಗೂ ಮೇಷ್ಟ್ರು ಮಾತಾಡೋದು ಹೀಗೆ....
    ಕಾಲೇಜಿನ ದಿನಗಳಲ್ಲೇ ನಾನು ಬರೀತಿದ್ದೆ. ಮದುವೆ ಆದ ಮೇಲೆ ಅದು ಜಾಸ್ತಿ ಆಯಿತು. ಯಜಮಾನರ ಕೆಲಸ ಟೂರ್‌ ಸುತ್ತೋದು. ಹೀಗಾಗಿ ಅವರಿಲ್ಲದ ಸಮಯ ಕಳೆಯೋದು ಹೇಗೆ? ಬರವಣಿಗೆಯೇ ನನ್ನ ಫ್ರೆಂಡ್‌ ಆಯಿತು. ನಾನು ಮೊದಮೊದಲು ಬರೆದ ಕೆಲವು ಪುಸ್ತಕಗಳನ್ನು ಯಜಮಾನರು ಓದಿದ್ದಾರೆ.

    ಆದರೆ ಕ್ರೆೃಸ್ಟ್‌ ಕಾಲೇಜಿನ ವಿದ್ಯಾರ್ಥಿಗಳೇ ನನ್ನ ಬಿಗ್ಗೆಸ್ಟ್‌ ಫ್ಯಾನ್ಸ್‌. ಅವರು ಪುಸ್ತಕಗಳನ್ನು ಓದಿ, ಅವುಗಳ ಬಗ್ಗೆ ಮಾತನಾಡುತ್ತಾರೆ. ಅಲ್ಲಿ ಕೆಲವರು ನನ್ನ ವಿದ್ಯಾರ್ಥಿಗಳು. ಕಂಪ್ಯೂಟರ್‌ ಸೈನ್ಸ್‌ ಮತ್ತು ಬಿಜಿನೆಸ್‌ ಮ್ಯಾನೇಜ್‌ಮೆಂಟ್‌ ಪಾಠ ಮಾಡ್ತೀನಿ. ಪಾಠ ಹೇಳೋದು ಒಂದು ರೀತಿ ನನಗೆ, ನನ್ನ ಹಾಗೂ ಗಂಡನ ಮನೆಯವರ ಹಿನ್ನೆಲೆಯ ಬಳುವಳಿ. ಇದು ನನ್ನ ನೆಚ್ಚಿನ ವಿಷಯವೂ ಹೌದು. ಜೊತೆಗೆ ಹಿಂದಿ ಸಿನಿಮಾಗಳನ್ನು ನೋಡೋದು ನನ್ನ ಹವ್ಯಾಸವಾಗಿಬಿಟ್ಟಿದೆ. ಅದರಲ್ಲೂ ಒಳ್ಳೆ ಸಿನಿಮಾಗಳನ್ನಂತೂ ಬಿಡುಗಡೆಯಾದ ಮೊದಲ ದಿನದ ಮೊದಲ ಷೋನಲ್ಲೇ ನೋಡುತ್ತೇನೆ. ಮೊನ್ನೆ ವಿದ್ಯಾರ್ಥಿಗಳು ಲಗಾನ್‌ ಸಿನಿಮಾ ಬಿಡುಗಡೆಯಾದಾಗ, ಮೊದಲ ದಿನದ ಮೊದಲ ಷೋಗೇ ನನ್ನನ್ನು ಕರೆದೊಯ್ದಿದ್ದರು. ವಿದ್ಯಾರ್ಥಿಗಳು ಕಟ್ಟಿಕೊಟ್ಟಿರುವ ಕೆಲವು ಮಧುರ ಕ್ಷಣಗಳು ಸದಾ ಮುದುಕೊಡುವಂಥವು.

    ಡಾಲರ್‌ ವ್ಯವಹಾರಗಳಿಂದ ಮಾಹಿತಿ ತಂತ್ರಜ್ಞಾನದಲ್ಲಿ ಸದ್ದು ಮಾಡುತ್ತಿರುವ ನಾರಾಯಣ ಮೂರ್ತಿ ಅವರ ಧರ್ಮಪತ್ನಿ ರಿkುೕ ಟೀವಿ ಮೂಲಕ ಡಾಲರ್‌ ಒಡತಿ ಎಂದು ಹೆಸರು ಗಳಿಸಿದರೂ ಅಚ್ಚರಿಯಿಲ್ಲ.

    English summary
    Sudha Murhtys Kannada novel Dollar Sose will be a hindi serial of Zee Tv
    Tuesday, July 9, 2013, 13:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X