»   » ಸುಧಾರಾಣಿ ಇದನ್ನು ತಿಳಿದುಕೊಂಡರೆ ಒಳಿತು

ಸುಧಾರಾಣಿ ಇದನ್ನು ತಿಳಿದುಕೊಂಡರೆ ಒಳಿತು

Posted By:
Subscribe to Filmibeat Kannada

*ಸ್ವಾ-ಮಿ ಬಾಳೆ

ಸುಧಾರಾಣಿ ಅಮೆರಿಕಾದಿಂದ ವಾಪಾಸು ಬಂದಿರುವ ಸುದ್ದಿ ಕೇಳಿದ ನಮ್ಮ ಓದುಗರೊಬ್ಬರು ತಮ್ಮ ಅಭಿಪ್ರಾಯ ಬರೆದಿದ್ದಾರೆ.

ಅಮೆರಿಕಾ ಡಾಕ್ಟರ್‌ಗಳು ಮತ್ತು ಇಂಜಿನಿಯರ್‌ಗಳಿಗೆ ಮಾತ್ರ ಸರಿ ಹೊಂದುವ ನಾಡು. ಡಾಕ್ಟರ್‌ ಒಬ್ಬರನ್ನು ಮದುವೆಯಾಗಿ ಗೃಹಿಣಿಯಾಗಿರುವ ಮಹಿಳೆಗೆ ಅಮೆರಿಕಾ ನರಕವಾಗಿರುತ್ತದೆ. ಯಾಕೆಂದರೆ ರಾತ್ರಿ ಹಗಲು ಎನ್ನದೆ ಗಂಡ ತನ್ನ ವೃತ್ತಿಯಲ್ಲಿ ವ್ಯಸ್ತನಾಗಿರುವಾಗ ಗೃಹಿಣಿ ಒಂಟಿಯಾಗಿರುತ್ತಾಳೆ. ಆಕೆ ಮನೆಯಿಂದ ಒಬ್ಬಳೇ ಎಲ್ಲಿಯೂ ಹೋಗುವಂತಿಲ್ಲ. ಜೊತೆಗೆ ಅಮೆರಿಕಾದ ಫೀಯೋನಿಕ್ಸ್‌ನಂತಹ ಪ್ರದೇಶದಲ್ಲಿ ಭಾರತೀಯ ಕುಟುಂಬಗಳು ಅತ್ಯಂತ ಕಡಿಮೆಯಾಗಿದ್ದು ಮಾತುಕತೆಗೆ, ಓಡಾಟಕ್ಕೆ ಭಾರತೀಯ ಸಹಚರರಾರೂ ಇರುವುದಿಲ್ಲ . ಭಾರತೀಯ ಮೂಲದ ಹುಡುಗಿಗೆ ಆ ಊರು ಬ-ಯ-ಲು ಬಂದೀ-ಖಾ--ನೆ-ಯಾ-ಗಿ-ರು-ತ್ತ-ದೆ.

ಸುಧಾರಾಣಿ ತನ್ನ ಸ್ವಾರ್ಥಕ್ಕಾಗಿ ಗಂಡನ ಭವಿಷ್ಯವನ್ನು ಹಾಳು ಮಾಡುವುದು ಒಳಿತಲ್ಲ. ನ್ಯೂಯಾರ್ಕ್‌, ನ್ಯೂ ಜೆರ್ಸಿ, ಲಾಸ್‌ ಎಂಜಲೀಸ್‌ನಂತಹ ಪ್ರದೇಶಗಳಲ್ಲಿ ಭಾರತೀಯರ ಸಂಖ್ಯೆ ಹೆಚ್ಚಾಗಿದೆ. ಅಂತಹ ಪ್ರದೇಶಗಳಿಗೆ ತೆರಳುವುದರಿಂದ ಸಂಜಯ್‌ ಶಾಸ್ತ್ರಿಯವರ ಬಾಳಿ-ನ-ಲ್ಲಿ ಸದಾ ಬೆಳ-ಕು ಇರು-ತ್ತ-ದೆ ಎಂಬುದು ನನ್ನ ಅನಿಸಿಕೆ.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada