For Quick Alerts
  ALLOW NOTIFICATIONS  
  For Daily Alerts

  ಸುನೀಲ್ ರಾವ್-ಶ್ರೇಯಾ ಕಲ್ಯಾಣದಲ್ಲಿ ಕಾಣಿಸಿಕೊಂಡ ಸ್ಟಾರ್ ಗಳು

  By Pavithra
  |
  ಸುನೀಲ್ ರಾವ್ ಮದುವೆಗೆ ಬಂದ ಸೆಲೆಬ್ರಿಟಿಗಳು ಇವರೇ...!! | Filmibeat Kannada

  'ಎಕ್ಸ್‌ಕ್ಯೂಸ್-ಮಿ' ಹಾಗೂ 'ಲೂಸ್ ಕನೆಕ್ಷನ್' ಮೂಲಕ ಮನೆ ಮಾತಾಗಿರುವ ನಟ ಸುನೀಲ್ ರಾವ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವೃತ್ತಿಯಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿರುವ ಶ್ರೇಯಾ ಐಯ್ಯರ್ ಅವರ ಜೊತೆ ನಟ ಸುನೀಲ್ ರಾವ್ ಸಪ್ತಪದಿ ತುಳಿದಿದ್ದಾರೆ .

  ಶ್ರೇಯಾ ಸುನೀಲ್ ಅಭಿನಯದ ವೆಬ್ ಸೀರಿಸ್ ಗೆ ಡಿಸೈನರ್ ಆಗಿ ಕೆಲಸ ಮಾಡಿದ್ದು ಸದ್ಯ 'ಟಕ್ಕರ್' ಚಿತ್ರಕ್ಕೂ ಇವರೇ ವಸ್ತ್ರ ವಿನ್ಯಾಸಕಿ. ಲೂಸ್ ಕನೆಕ್ಷನ್ ವೆಬ್ ಸೀರಿಸ್ ಚಿತ್ರೀಕರಣದ ಸಮಯದಲ್ಲಿ ಸುನೀಲ್ ಹಾಗೂ ಶ್ರೇಯಾ ಪರಸ್ಪರ ಪರಿಚಯವಾಗಿದ್ದರು. ಪರಿಚಯ ಪ್ರೀತಿಗೆ ತಿರುಗಿ ಈಗ ಇಬ್ಬರು ಮನೆಯವರ ಒಪ್ಪಿಗೆಯಿಂದ ದಂಪತಿಗಳಾಗಿದ್ದಾರೆ.

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎಕ್ಸ್‌ಕ್ಯೂಸ್ ಮಿ ಸುನೀಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎಕ್ಸ್‌ಕ್ಯೂಸ್ ಮಿ ಸುನೀಲ್

  ತುಂಬಾ ಅದ್ದೂರಿಯಾಗಿ ಮದುವೆ ಆಗದಿದ್ದರೂ ಹಿಂದೂ ಸಂಪ್ರದಾಯದಂತೆ ಇಬ್ಬರು ಸತಿ-ಪತಿಗಳಾಗಿದ್ದಾರೆ. ಸಿನಿಮಾ ಕಲಾವಿದ ಹಾಗೂ ಗಾಯಕ ಆಗಿರುವ ಸುನೀಲ್ ರಾವ್ ಅವರ ಮದುವೆಯಲ್ಲಿ ಸಾಕಷ್ಟು ಸಿನಿಮಾ ಕಲಾವಿದರು ಭಾಗಿ ಆಗಿದ್ದರು. ಹಾಗಾದ್ರೆ ಯಾರೆಲ್ಲಾ ಮದುವೆಯಲ್ಲಿದ್ದರು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

  ಸುಧಾರಾಣಿ ಹಾಗೂ ಹೇಮಾ ಪಂಚಮುಖಿ

  ಸುಧಾರಾಣಿ ಹಾಗೂ ಹೇಮಾ ಪಂಚಮುಖಿ

  ನಟಿ ಸುಧಾರಾಣಿ ಹಾಗೂ ನಟಿ ಮತ್ತು ನೃತ್ಯಗಾರ್ತಿ ಹೇಮಾ ಪಂಚಮುಖಿ ಸುನೀಲ್ ಹಾಗೂ ಶ್ರೇಯಾ ಮದುವೆಯಲ್ಲಿ ಭಾಗಿಯಾಗಿದ್ದರು. ಸಂಪ್ರದಾಯ ಬದ್ದವಾಗಿ ನಡೆದ ವಿವಾಹಕ್ಕೆ ಬಂದು ವಧು-ವರರಿಗೆ ಶುಭಕೋರಿದರು.

  In Pics: ಸುನೀಲ್ ರಾವ್-ಶ್ರೇಯಾ ಕಲ್ಯಾಣದಲ್ಲಿ ಕಾಣಿಸಿಕೊಂಡ ಸ್ಟಾರ್ ಗಳು

  ಸುನೀಲ್ ಮದುವೆಯಲ್ಲಿ ಲೂಸ್ ಕನೆಕ್ಷನ್

  ಸುನೀಲ್ ಮದುವೆಯಲ್ಲಿ ಲೂಸ್ ಕನೆಕ್ಷನ್

  'ಲೂಸ್ ಕನೆಕ್ಷನ್' ವೆಬ್ ಸೀರಿಸ್ ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ನಟಿ ಅನುಪಮ ಗೌಡ ಹಾಗೂ ನಿರ್ದೇಶಕ ರಘುಶಾಸ್ತ್ರಿ ಸುನೀಲ್ ಹಾಗೂ ಶ್ರೇಯಾ ಮದುವೆಯಲ್ಲಿ ಕಾಣಿಸಿಕೊಂಡರು.

  ಗಾಯಕ-ಗಾಯಕಿಯರು

  ಗಾಯಕ-ಗಾಯಕಿಯರು

  ಸುನೀಲ್ ರಾವ್ ನಟ ಹಾಗೂ ಗಾಯಕರು ಆಗಿರುವುದರಿಂದ ಅನೇಕ ಯುವ ಗಾಯಕರ-ಗಾಯಕಿಯರು ಮದುವೆಗೆ ಬಂದಿದ್ದರು. ಚಿನ್ಮಯ್, ಸಿಂಚನ್ ದೀಕ್ಷಿತ್, ಡಾ ಶಮಿತಾ ಮಲ್ನಾಡ್ ನಿರ್ದೇಶಕ ಮಯೂರ ರಾಘವೇಂದ್ರ ಇನ್ನು ಅನೇಕರು ವಿವಾಹದಲ್ಲಿ ಸಂಭ್ರಮಿಸಿದ್ರು.

  ತಮ್ಮನಿಗೆ ಶುಭ ಕೋರಿದ ಅಕ್ಕ

  ತಮ್ಮನಿಗೆ ಶುಭ ಕೋರಿದ ಅಕ್ಕ

  ಸುನೀಲ್ ರಾವ್ ಅವರ ಅಕ್ಕ ಸೌಮ್ಯ ರಾವ್ ಮುಂಬೈ ನಲ್ಲಿ ಪ್ರಖ್ಯಾತಿ ಗಳಿಸಿರುವ ಗಾಯಕಿ. ತಮ್ಮನ ಮದುವೆಗೆ ಬಂದು ಸುನೀಲ್ ಹಾಗೂ ಶ್ರೇಯಾ ಇಬ್ಬರಿಗೂ ಶುಭಕೋರಿದ್ದಾರೆ.

  English summary
  Kannada artists Sudharani, Hemanchamukhi and many more were involved in Sunil Rao's marriage. Sunil Rao and Shreya Iyer married today in JP Nagar

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X