'ವೃತ್ರ' ಚಿತ್ರದಲ್ಲಿ ಸುಧಾರಾಣಿ ಪಾತ್ರವೇನು.?
Recommended Video

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, 'ವೃತ್ರ' ಸಿನಿಮಾದಲ್ಲಿ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಅಭಿನಯಿಸಬೇಕಿತ್ತು. ಆದ್ರೆ, ಕಾರಣಾಂತರಗಳಿಂದ 'ವೃತ್ರ' ಚಿತ್ರದಿಂದ ರಶ್ಮಿಕಾ ಮಂದಣ್ಣ ಹೊರನಡೆದರು. ರಶ್ಮಿಕಾ ಮಂದಣ್ಣ ಬಿಟ್ಟು ಹೋದ ಜಾಗಕ್ಕೆ ನಿತ್ಯಾ ಶ್ರೀ ಎಂಟ್ರಿಕೊಟ್ಟರು.
'ವೃತ್ರ' ಚಿತ್ರದಲ್ಲಿ ತನಿಖಾ ಅಧಿಕಾರಿ ಪಾತ್ರದಲ್ಲಿ ನಿತ್ಯಾ ಶ್ರೀ ನಟಿಸುತ್ತಿದ್ದಾರೆ. ಇದೀಗ 'ವೃತ್ರ' ಚಿತ್ರಕ್ಕೆ ಸುಧಾರಾಣಿ ಕೂಡ ಎಂಟ್ರಿಕೊಟ್ಟಿದ್ದಾರೆ. 'ಭರ್ಜರಿ', 'ಲೈಫ್ ಜೊತೆ ಒಂದ್ ಸೆಲ್ಫಿ' ಚಿತ್ರಗಳಲ್ಲಿ ಅಭಿನಯಿಸಿದ್ದ ನಟಿ ಸುಧಾರಾಣಿ ಇದೀಗ 'ವೃತ್ರ' ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
'ವೃತ್ರ' ಚಿತ್ರದಲ್ಲಿ ಸುಧಾರಾಣಿ ಅವರ ಪಾತ್ರವೇನು ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಆದ್ರೆ, ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರ ನಿರ್ವಹಿಸುತ್ತಿರುವುದು ಮಾತ್ರ ಪಕ್ಕಾ.

ಅಂದ್ಹಾಗೆ, 'ವೃತ್ರ' ಚಿತ್ರಕ್ಕೆ ಗೌತಮ್ ಅಯ್ಯರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಆದಿತ್ಯ ವೆಂಕಟೇಶ್ ಛಾಯಾಗ್ರಹಣ ಚಿತ್ರಕ್ಕೆ ಇರಲಿದೆ. 'ವೃತ್ರ' ಮಹಿಳಾ ಪ್ರಧಾನ ಚಿತ್ರವಾಗಿದ್ದು, ಶೀರ್ಷಿಕೆಯಿಂದಲೇ ಕುತೂಹಲ ಕೆರಳಿಸಿದೆ.


Click it and Unblock the Notifications











