ಹಿರಿಯ ನಟಿಯರು ಸರ್ಜಾಗೆ ಸಾಥ್, ಕಿರಿಯ ನಟಿಯರು ಶ್ರುತಿಗೆ ಸಪೋರ್ಟ್
ಶ್ರುತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ನಡುವಿನ ಮೀಟೂ ವಾರ್ ಈಗ ಹಲವು ಆಯಾಮಗಳಲ್ಲಿ ಚರ್ಚೆಯಾಗುತ್ತಿದೆ. ಇದು ಕೇವಲ ಪ್ರಚಾರದ ಗಿಮಿಕ್ ಅಂತ ಕೆಲವರು ಹೇಳ್ತಿದ್ರೆ, ಧರ್ಮದ ಕಾರಣ ಷಡ್ಯಂತ್ರ ಮಾಡಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಇನ್ನು ಕೆಲವರು ಹಳೇ ದ್ವೇಷದ ಹಿನ್ನೆಲೆ ಶ್ರುತಿ ಮತ್ತು ನಟ ಚೇತನ್ ಪ್ಲಾನ್ ಮಾಡಿ ಮಾಡ್ತಿದ್ದಾರೆ ಎಂದು ಕೂಡ ಬಿಂಬಿಸುತ್ತಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲೇ ಪರ-ವಿರೋಧ ವ್ಯಕ್ತವಾಗಿದೆ.
ಅರ್ಜುನ್ ಸರ್ಜಾ ಪರವಾಗಿ ಹಿರಿಯ ನಟಿಯರು ಬೆಂಬಲ ಕೊಡ್ತಿದ್ರೆ, ಶ್ರುತಿ ಹರಿಹರನ್ ಬೆಂಬಲಕ್ಕೆ ಈಗಿನ ನಟಿಯರು ಸಪೋರ್ಟ್ ಮಾಡ್ತಿದ್ದಾರೆ. ಈ ಮೂಲಕ ಇದು ಸ್ಯಾಂಡಲ್ ವುಡ್ ಗೆ ಮಾರಕವಾಗುವಂತೆ ಕಾಣುತ್ತಿದೆ. ಅಷ್ಟಕ್ಕೂ, ಸರ್ಜಾಗೆ ಯಾವ ಹೀರೋಯಿನ್ಸ್ ಬೆಂಬಲ ಕೊಡ್ತಿದ್ದಾರೆ, ಶ್ರುತಿಗೆ ಯಾವ ನಟಿಯರು ಸಾಥ್ ನೀಡ್ತಿದ್ದಾರೆ. ಮುಂದೆ ಓದಿ....

ಶ್ರುತಿ ಪರ ನಿಂತ ಸಂಯುಕ್ತಾ, ನೀತೂ, ಮೇಘನಾ
ಶ್ರುತಿ ಹರಿಹರನ್ ಅವರು ಅರ್ಜುನ್ ಸರ್ಜಾ ಮೇಲೆ ಅರೋಪ ಮಾಡಿದ ನಂತರ ಆಕೆಯ ಬೆಂಬಲಕ್ಕೆ ನಟಿ ಸಂಯುಕ್ತಾ ಹೆಗ್ಡೆ, ನೀತು ಶೆಟ್ಟಿ, ಮೇಘನಾ ಗಾಂವ್ಕರ್, ಸೋನು ಗೌಡ ಸೇರಿದಂತೆ ಹಲವರು ಬೆಂಬಲ ಸೂಚಿಸಿದ್ದಾರೆ. ಶ್ರುತಿ ಹೋರಾಟಕ್ಕೆ ನಾವು ಜೊತೆಯಲ್ಲಿದ್ದೇವೆ ಎಂದು ಟ್ವೀಟ್ ಮಾಡಿ ಸಪೋರ್ಟ್ ಮಾಡಿದ್ದಾರೆ.

ಸರ್ಜಾ ಪರ ಸುಧಾರಣೆ ಬ್ಯಾಟಿಂಗ್
ಮತ್ತೊಂದೆಡೆ ಅರ್ಜುನ್ ಸರ್ಜಾ ಅವರ ಪರವಾಗಿ ಅವರ ಸಮಕಾಲಿನ ನಟಿಯರು ಬೆಂಬಲ ಸೂಚಿಸಿದ್ದಾರೆ. ನಟಿ ಸುಧಾರಾಣಿ ಈ ಬಗ್ಗೆ ಮಾತನಾಡಿದ್ದು, '' ವೈಯಕ್ತಿಕವಾಗಿ ಅರ್ಜುನ್ ಅವರನ್ನ ನಾನು ಚೆನ್ನಾಗಿ ಬಲ್ಲೆ, ನನಗೆ ಯಾವುದೇ ಕೆಟ್ಟ ಅನುಭವ ಆಗಿಲ್ಲ. ಅರ್ಜುನ್ ಸರ್ಜಾ ಕುಟುಂಬದ ಜೊತೆಯೂ ನನ್ನ ಬಾಂಧವ್ಯ ಉತ್ತಮವಾಗಿದೆ. ಈ ಘಟನೆಗೆ ಬಗ್ಗೆ ನಮ್ಮ ಇಂಡಸ್ಟ್ರಿಯ ಹಿರಿಯರು ಇದ್ದಾರೆ. ಏನೂ ನಡೆದಿದೆ ಏನೂ ನಡೆದಿಲ್ಲ ಎಂದು ವಿಚಾರಣೆ ಮಾಡ್ತಾರೆ' ಎಂದು ಅಭಿಪ್ರಾಯ ಹಂಚಿಕೊಂಡರು.

ತಾರಾ ಕೂಡ ಸರ್ಜಾ ಜೊತೆ ನಿಂತರು
'ಅರ್ಜುನ್ ಸರ್ಜಾ ಅವರ ಜೊತೆಗೆ ನಾನು 'ಪ್ರೇಮಾಗ್ನಿ' ಸಿನಿಮಾದಲ್ಲಿ ನಟಿಸಿದ್ದೇನೆ. ಅವರು ಏನು ಎನ್ನುವುದು ನನಗೆ ಚೆನ್ನಾಗಿ ಗೊತ್ತು. ಅವರು ತುಂಬ ಒಳ್ಳೆಯ, ಸಭ್ಯ ಮನುಷ್ಯ. ನನಗೆ ಶ್ರುತಿ ಹರಿಹರನ್ ಬಗ್ಗೆ ಗೊತ್ತಿಲ್ಲ. ಅವರ ಜತೆ ಯಾವುದೇ ಸಿನಿಮಾದಲ್ಲಿ ನಟಿಸಿಯೂ ಇಲ್ಲ. ಮೀ ಟೂ ಒಂದು ಒಳ್ಳೆಯ ಅಭಿಯಾನ. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಈ ಅಭಿಯಾನ ಬೇರೆ ರೀತಿ ಬಳಕೆ ಆಗಬಾರದು' ಎಂದು ತಾರಾ ತಿಳಿಸಿದ್ದಾರೆ.

ಬಿ-ಸರೋಜಾ ದೇವಿ ಬೆಂಬಲ
'30 ವರ್ಷಗಳಿಂದ ಅರ್ಜುನ್ ಸರ್ಜಾ ಅವರು ನನಗೆ ಗೊತ್ತಿದೆ. ಸರ್ಜಾ ಫ್ಯಾಮಿಲಿ ಕೆಟ್ಟ ಫ್ಯಾಮಿಲಿ ಅಲ್ಲ. ನಾವೆಲ್ಲ ತುಂಬಾ ವರ್ಷಗಳಿಂದ ಆತ್ಮೀಯರು. ಅರ್ಜುನ್ ಸರ್ಜಾ ಸ್ವಭಾವ ಆ ರೀತಿ ಅಲ್ಲ. ಅವರು ಹೆಣ್ಣು ಮಕ್ಕಳಿಗೆ ಗೌರವ ನೀಡುತ್ತಾರೆ. ಈ ವಿಷಯವನ್ನು ನಾನು ನಂಬುವುದಿಲ್ಲ, ಶ್ರುತಿ ಹರಿಹರನ್ ಯಾರೂ ಅಂತಾನೆ ನನಗೆ ಗೊತ್ತಿಲ್ಲ. ಈ ರೀತಿ ಆರೋಪ ಸರಿಯಲ್ಲ.'' ಎಂದು ಹೇಳಿದ್ದಾರೆ.


Click it and Unblock the Notifications











