»   » ಬಲಗಾಲಿಟ್ಟು ಒಳಗೆ ಬಾರಮ್ಮ ಮಗಳೆ....

ಬಲಗಾಲಿಟ್ಟು ಒಳಗೆ ಬಾರಮ್ಮ ಮಗಳೆ....

Subscribe to Filmibeat Kannada

ಆಲಕ್ಕೆ ಹೂವಿಲ್ಲ, ಸಾಲಕ್ಕೆ ಕೊನೆಯಿಲ್ಲ
ಜಾಲಿಯ ಮರವು ನೆರಳಲ್ಲ ಮಗಳೆ,
ತವರೀನ ಮನೆಯು ಸ್ಥಿರವಲ್ಲ.

ಸುಧಾರಾಣಿ ಮರುಮದುವೆ ಸುದಿ ್ದ ಓದಿದ ಕೂಡಲೇ ಇಂಟರ್‌ನೆಟ್‌ ವಾಚಕ ವೃಂದದ ಪ್ರತಿಕ್ರಿಯೆಗಳು ನಮ್ಮ ಮೇಲ್‌ ಬಾಕ್ಸ್‌ನಲ್ಲಿ ಓತಪ್ರೋತವಾಗಿ ಬಂದು ಬೀಳುತ್ತಿವೆ. ದಾಂಪತ್ಯ ಜೀವನದ ಪಾವಿತ್ರ್ಯವನ್ನು ಒತ್ತಿ ಹೇಳುವುದರ ಜತೆಯಲ್ಲೇ , ಕೂಡಿ ಬಾಳಲಾಗದಿದ್ದ ಮೇಲೆ ಒಂದೇ ಮಂಚದ ಮೇಲೆ ಮಲಗೇಳುವುದು ನಿರರ್ಥಕ ಎಂಬಂತಹ ಪ್ರಶ್ನೆಗಳನ್ನು ಕೇಳಿ ಎಸೆದ ಮೇಲ್‌ಗಳು ನಮ್ಮ ಬುಟ್ಟಿಯಲ್ಲಿ ಇವತ್ತು ಕುಳಿತಿವೆ. ಸುಧಾರಾಣಿ ಮಾಡಿದ್ದೇ ಸರಿ ಎಂದು ಮಲ್ಲೇಶ್ವರಂನ ಗುರುರಾಜಾ ರಾವ್‌ ಸಮರ್ಥಿಸಿಕೊಂಡರೆ, ಹಿಂದು ಮುಂದು ನೋಡದೆ ಅಮೆರಿಕ ವರನ ಕೈ ಹಿಡಿಯಬಾರದಿತ್ತು ಎಂದು ವ್ಯಥೆಪಡುವ ರೀತಿಯ ರಿಯಾಕ್ಷನ್‌ ವೆಲ್ಲಿಂಗ್‌ಟನ್‌ನ ನಳಿನಿ ಪ್ರಭಾಕರ್‌ ಅವರಿಂದ ಬಂದಿದೆ. ಆದದ್ದೆಲ್ಲ ಒಳಿತೇ ಆಯಿತು, ಮುಂದಾದರೂ ನೆಟ್ಟಗಿರಲಿ ಸುಧಾ ಸಂಸಾರ, ಎಂದು ಕಿವಿ ಮಾತು ಹೇಳುತ್ತಿದ್ದಾರೆ ಬ್ರೂನಿಯ ಪರಪ್ಪ ಜೇವರ್ಗಿ.

ಈ ಎಲ್ಲ ಪ್ರತಿಕ್ರಿಯೆಗಳಿಗಿಂತ ನಮಗಿವತ್ತು ಮುಖ್ಯವಾಗುತ್ತಿರುವುದು ಶೇಷಾದ್ರಿಪುರಂ ಬೆಂಗಳೂರಿನಿಂದ ಬಂದ ಸ್ಮಿತಾ ಅವರ ಮೇಲ್‌.

ಸುಧಾರಾಣಿ ಮರುಮದುವೆ ಸುದ್ದಿ ಓದಿದೆ. ಇಂಟರ್‌ನೆಟ್‌ನಲ್ಲಿ ಓದಿದ್ದಕ್ಕೋ ಏನೋ ನಮ್ಮ ಮನೆಮಂದಿಯೆಲ್ಲ ಚಣಕಾಲ ಬೆರಗಾದೆವು. ಆದರೆ ನಿಜ ಹೇಳುತ್ತೇನೆ, ನಿಮಗೆ ನಿಜ ಏನಂತ ಗೊತ್ತಿಲ್ಲ. ಅಸಲು ಸಮಾಚಾರ ಏನೆಂದರೆ ನಮ್ಮ ಮೆಚ್ಚಿನ ಸುಧಾರಾಣಿ ಅವರನ್ನು ಮದುವೆ ಆದವರ ಹೆಸರು ಗೋವರ್ಧನ್‌ ಅಂತ . ನೀವು ಬರೆದಿರುವ ಹಾಗೆ ಅವರು ಸಾಫ್ಟ್‌ವೇರ್‌ ಇಂಜಿನಿಯರ್‌ ಅಲ್ಲ , ಚಾರ್ಟರ್ಡ್‌ ಅಕೌಂಟೆಂಟ್‌. ಕುಮಾರಪಾರ್ಕ್‌ ವೆಸ್ಟ್‌ನಲ್ಲಿ ಆಫೀಸು, ಬಸವೇಶ್ವರನಗರದಲ್ಲಿ ಮನೆ. ಮಾರುತಿ ಎಸ್ಟೀಮ್‌ ಕಾರ್‌ನಲ್ಲಿ ಒಟ್ಟಾಗಿ ಹೋಗುತ್ತಿದ್ದರೆ ಜೋಡಿ ಚೆನ್ನಾಗಿ ಕಾಣುತ್ತದೆ. ನಾವೆಲ್ಲ ಸುಮಾರು ಆರು ತಿಂಗಳಿಂದ ಕಣ್ಣಾರೆ ನೋಡಿದ್ದೇವೆ. ಈ ಜೋಡಿ ಹೀಗೇ ನಗುನಗುತಿರಲಿ ಎಂದು ಆಶಿಸುತ್ತೇವೆ. ಅದಕ್ಕೆ ಮುನ್ನ...

ನಮಗೆಲ್ಲ ಮುಖ್ಯವಾಗುವ ಸಂಗತಿಯೆಂದರೆ ಸುಧಾರಾಣಿ ಆಗಿರಬಹುದು ಇನ್ಯಾರೇ ಆಗಿರಬಹುದು, ಕಲಾವಿದರು ಚೆನ್ನಾಗಿರಬೇಕು, ಒಳ್ಳೊಳ್ಳೆ ಪಾತ್ರಗಳಲ್ಲಿ ಅಭಿನಯಿಸಬೇಕು. ಕನ್ನಡಿಗರಿಗೆ ಒಳ್ಳೆ ಮನರಂಜನೆ ಕೊಡಬೇಕು. ಮೊದಲೇ ಕನ್ನಡದಲ್ಲಿ ಒಳ್ಳೆ ನಟಿಯರಿಲ್ಲ ಎಂಬ ಕೊರತೆ, ಕೂಗು ಸುಧಾರಾಣಿ ಕರ್ನಾಟಕದಲ್ಲೇ ನೆಲೆಸುವುದರ ಮೂಲಕ ಅಷ್ಟರಮಟ್ಟಿಗೆ ಕಡಿಮೆ ಆಗಬೇಕು.

ವಾರ್ತಾ ಸಂಚಯ
ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada