»   » ಅವರ ಪಾಡಿಗೆ ಅವರ ಬಿಡಿ

ಅವರ ಪಾಡಿಗೆ ಅವರ ಬಿಡಿ

Subscribe to Filmibeat Kannada

ಮಾನ್ಯರೇ,

ನೀವು ಸುಧಾರಾಣಿ ಮರು ಮದುವೆ ಬಗ್ಗೆ ಮಾಡಿರುವ ರಿಸರ್ಚ್‌ ಆ್ಯಂಡ್‌ ಡೆವಲಪ್‌ಮೆಂಟ್‌ ನೋಡಿದರೆ ನಿಜಕ್ಕೂ ಮುಜಗರ ಆಗುತ್ತೆ. ಮೊದಲಿಗೆ ಮದುವೆ ಎನ್ನುವುದು ಅವರ ವೈಯಕ್ತಿಕ ವಿಚಾರ. ಮದುವೆ ಜನ್ಮ ಜನ್ಮಗಳ ಅನುಬಂಧ, ಬಾಳಿನ ಮುಖ್ಯ ಘಟ್ಟ ಅನ್ನುವುದು ಹೇಗೆ ನಿಜವೋ ಹಾಗೆ ಇದು ಎಲ್ಲರಿಗೂ ಅನ್ವಯಿಸುವುದಿಲ್ಲ ಎನ್ನುವುದು ಸತ್ಯ.

ಸುಧಾರಾಣಿ ಯಾವ ತಪ್ಪನ್ನೂ ಮಾಡಿಲ್ಲ. ಅಪ್ಪ ಅಮ್ಮ ನೋಡಿದ ಹುಡುಗನನ್ನೇ ಮದುವೆಯಾಗಿ ಯುಎಸ್‌ಗೆ ಹೋದರು. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ, ಸುಧಾರಾಣಿಗೆ ತನ್ನ ಪತಿಯ ವ್ಯಕ್ತಿತ್ವ ಗೊತ್ತಿಲ್ಲದಿರುವುದು. ಇಬ್ಬರದು ಡಿಫ್ರೆಂಟ್‌ ವರ್ಲ್ಡ್‌ ಇರಬಹುದು. ಸಂಸ್ಕೃತಿಯ ಫೈಟ್‌ ಇರಬಹುದು. ಇಲ್ಲ ಸಾವಿರ ಕಾರಣ ಇರಬಹುದು. ಸುಧಾರಾಣಿ ಸಹಿಸಲಾಗದೆ ಕೊನೆಗೆ ನಮ್ಮ ನಾಡಿಗೆ ಬಂದಿರುವುದು ಎಲ್ಲ ನಾರಿಯರಿಗೆ ಆದರ್ಶ. ಅನೇಕ ನಾರಿಯರು ಭಾರತಕ್ಕೆ ಬರಲಾಗದೆ ಅಲ್ಲಿ ಇರಲಾಗದೆ ಪಡುತ್ತಿರುವ ಪಾಡು ನಿಜಕ್ಕೂ ಕಣ್ಣೀರು ತರಿಸುತ್ತದೆ.

ಒಬ್ಬ ಡಾಕ್ಟರ್‌, ಇಂಜಿನಿಯರ್‌ ಜೊತೆ (ಸಹಜವಾಗಿ ಅಮೆರಿಕ ನಿವಾಸಿ ) ಮದುವೆ ಮಾಡಿದರೆ ಸಾಕು, ಹುಡುಗಿ ಸುಖವಾಗಿ ಇರುತ್ತಾಳೆ ಎನ್ನುವುದು ಭ್ರಮೆ ಅಷ್ಟೆ. ಐನಸ್ಟೀನ್‌, ಸ್ಟೀಫನ್‌ ಹಾಕಿನ್ಸ್‌ , ಎಂ.ವಿ. ಮುಂತಾದ ಮಹಾನ್ಪುರುಷರ ಹೆಂಡತಿಯರು ಮರು ಮದುವೆಯಾದರು.

ಪ್ರತಿಯಾಬ್ಬರಿಗೂ ತಮ್ಮ ಜೀವನ ರೂಪಿಸುವ ಹಕ್ಕಿದೆ. ಮೊದಲಿಗೆ ಕೆಲವರು ಎಡವಬಹುದು. ಆದರೆ ಅವರಿಗೆ ಇನ್ನೊಂದು ಅವಕಾಶ ಕೊಡದೇ ಇರುವುದು ಖಂಡನೀಯ. ಅವರವರನ್ನು ಅವರ ಪಾಡಿಗೆ ಬಿಡಿ.

ನಿಮ್ಮ

Qsax

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada