ಹೆತ್ತವರಿಗೆ ಗೌರವ ತಂದ 'ಸರಿಗಮಪ' ಸ್ಪರ್ಧಿ ಸುಹಾನಾ ಸೈಯದ್
Recommended Video

ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದ ಸೀಸನ್ 13ರ ಬಹುತೇಕ ಸ್ಪರ್ಧಿಗಳು ವೀಕ್ಷಕರ ಗಮನ ಸೆಳೆದಿದ್ದರು. ಈ ಪೈಕಿ ಸಾಗರದ ಹುಡುಗಿ ಸುಹಾನಾ ಸೈಯದ್ ಕೂಡ ಒಬ್ಬರು. ತನ್ನ ಸುಮದುರವಾದ ಹಾಡುಗಾರಿಕೆ ಮೂಲಕ ದೊಡ್ಡ ಜನಪ್ರಿಯತೆ ಪಡೆದಿದ್ದ ಇವರು ಈಗ ವಿಧ್ಯಾಭ್ಯಾಸದಲ್ಲಿಯೂ ಮುಂದೆ ಬಂದಿದ್ದಾರೆ.
ಸುಹಾನಾ ಸೈಯದ್ ಈಗ ಎಂ ಬಿ ಎ ಪದವೀದರೆ ಆಗಿದ್ದಾರೆ. ಬೆಂಗಳೂರಿನ ದಯಾನಂದ ಸಾಗರ ಕಾಲೇಜಿನಲ್ಲಿ ಓದುತ್ತಿದ್ದ ಇವರು ಎರಡು ವರ್ಷವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಈ ಸಿಹಿ ಸುದ್ದಿಯನ್ನು ತಮ್ಮ ಇನ್ಟಾಗ್ರಾಮ್ ಹಾಗೂ ಫೇಸ್ ಬುಕ್ ಖಾತೆಯಲ್ಲಿ ಸುಹಾನಾ ಹಂಚಿಕೊಂಡಿದ್ದಾರೆ.

''ನಾನು ಎಂ ಬಿ ಎ ಪದವೀದರೆ ಆದೆ. ಈ ಹಂತಕ್ಕೆ ಬರಲು ತುಂಬ ಕಷ್ಟ ಪಟ್ಟಿದ್ದೇನೆ. ವಿಧ್ಯಾಭ್ಯಾಸ ಹಾಗೂ ಸಂಗೀತವನ್ನು ಬ್ಯಾಲೆನ್ಸ್ ಮಾಡುವುದು ತುಂಬ ಕಷ್ಟ ಆಗುತ್ತಿತ್ತು. ಸರಿಗಮಪ ಕಾರ್ಯಕ್ರಮ ಇರುವಾಗಲೇ ಪರೀಕ್ಷೆ, ಇಂಟರ್ನಲ್ ಇತ್ತು. ಇವುಗಳ ಜೊತೆಗೆ ಕೆಲವೊಂದು ಜನರು ಬಹಳ ಅವಮಾನ ಮಾಡಿದ್ದರು. 'ಇವರೆಲ್ಲ ಓದೋರೆನ್ರೀ, ಬರೀ ಶೋಕಿ ಮಾಡುವವರು' ಎಂದಿದ್ದರು. ಇವುಗಳ ನಡುವೆ ನಾನು ಗೆದ್ದೆ. ನನ್ನ ಜೊತೆ ಇದ್ದ ಹೆತ್ತವರಿಗೆ, ಸ್ನೇಹಿತರಿಗೆ ಥ್ಯಾಂಕ್ಯು.'' ಎಂದು ಸುಹಾನಾ ಹೇಳಿಕೊಂಡಿದ್ದಾರೆ.

ಸರಿಗಮಪ ಕಾರ್ಯಕ್ರಮ ಮೂಲಕ ಫೇಮಸ್ ಆಗಿದ್ದ, ಸುಹಾನಾ ಕೆಲ ತಿಂಗಳುಗಳ ಹಿಂದೆ 'ಸ್ಪೇಟ್ ಮೆಂಟ್' ಎಂಬ ಸಿನಿಮಾದಲ್ಲಿ 'ವಂದೇ ಮಾತರಂ' ಎಂಬ ಹಾಡಿನ್ನು ಹಾಡಿದ್ದರು


Click it and Unblock the Notifications











