ರಚಿತಾ ರಾಮ್ ಗೆ ಆಫರ್ ನೀಡಿದ ನಟಿ ಸುಹಾಸಿನಿ

Recommended Video

Suhasini liked Rachita Ram character in 'Ayushman Bhava' movie. | Oneindia kannada

ನಟಿ ರಚಿತಾ ರಾಮ್ 'ಆಯುಷ್ಮಾನ್ ಭವ' ಸಿನಿಮಾದ ಪಾತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದಾರೆ. ಅವರೇ ಹೇಳುವಂತೆ 'ಬುಲ್ ಬುಲ್' ಸಿನಿಮಾದ ನಂತರ ಇದೇ ಸಿನಿಮಾಗೆ ಈ ಮಟ್ಟದ ಪ್ರಶಂಸೆ ಅವರಿಗೆ ಸಿಕ್ಕಿದೆ.

ನಟಿ ಸುಹಾಸಿನಿ 'ಆಯುಷ್ಮಾನ್ ಭವ' ಸಿನಿಮಾದಲ್ಲಿ ಮ್ಯೂಸಿಕ್ ಟೀಚರ್ ಪಾತ್ರದಲ್ಲಿ ನಟಿಸಿದ್ದಾರೆ. ಸುಹಾಸಿನಿ ಅವರಿಗೆ ಪ್ರಮುಖವಾಗಿ ರಚಿತಾ ರಾಮ್ ಪಾತ್ರ, ಅದನ್ನು ನಿರ್ವಹಿಸಿದ ರೀತಿ ಇಷ್ಟವಾಗಿದೆಯಂತೆ. ಸಿನಿಮಾ ನೋಡಿ ರಚಿತಾಗೆ ಮೆಚ್ಚುಗೆ ಸೂಚಿಸಿದ ಅವರು ಒಂದು ಆಫರ್ ನೀಡಿದ್ದಾರೆ.

ನೀನು ತಮಿಳಿನಲ್ಲಿಯೂ ಸಿನಿಮಾ ಮಾಡು ಎಂದು ರಚಿತಾಗೆ ಸುಹಾಸಿನಿ ಹೇಳಿದ್ದಾರೆ. ರಚಿತಾ ಪ್ರತಿಭೆ ಕಂಡ ಸುಹಾಸಿನಿ ಕಾಲಿವುಡ್ ನಲ್ಲಿಯೂ ನಟಿಸಬೇಕು ಎಂದು ಸಲಹೆ ನೀಡಿದ್ದಾರೆ. ಸುಹಾಸಿನಿ ಪತಿ ಮಣಿರತ್ನಂ ಅವರೇ ದೊಡ್ಡ ನಿರ್ದೇಶಕರಾಗಿದ್ದು, ಅವರ ಸಿನಿಮಾದಲ್ಲಿಯೇ ರಚಿತಾ ಅವಕಾಶ ಪಡೆದರು, ಪಡೆಯಬಹುದು.

Suhasini Liked Rachita Ram Character In Ayushman Bhava Movie

''ಈಗಲೇ ಇಷ್ಟೊಂದು ಒಳ್ಳೆಯ ಪಾತ್ರ ನಿನಗೆ ಸಿಕ್ಕಿದೆ. ನನಗೆ ತುಂಬ ಖುಷಿ ಆಗುತ್ತಿದೆ'' ಎಂದು ಚಿತ್ರೀಕರಣದ ವೇಳೆಯೇ ಸುಹಾಸಿನಿ ಹೇಳಿದ್ದರಂತೆ.

'ಆಯುಷ್ಮಾನ್ ಭವ' ಸಿನಿಮಾದಲ್ಲಿ ರಚಿತಾ ರಾಮ್ ಹುಚ್ಚಿ ಪಾತ್ರ ಮಾಡಿದ್ದರು. ಲಕ್ಷ್ಮಿ ಎಂಬ ಅವರ ಪಾತ್ರಕ್ಕೆ ಎರಡು ಶೇಡ್ ಇದ್ದು, ಎರಡು ರೀತಿಯ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸಿದ್ದಾರೆ.

More from Filmibeat

English summary
Actress Suhasini character liked Rachita Ram character in Ayushman Bhava movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X