»   » 'ಮೇಘ ಅಲಿಯಾಸ್ ಮ್ಯಾಗಿ' ಚಿತ್ರದಲ್ಲಿ ಸುಕೃತಾ ಗಂಡುಬೀರಿ ಹೆಣ್ಣು

'ಮೇಘ ಅಲಿಯಾಸ್ ಮ್ಯಾಗಿ' ಚಿತ್ರದಲ್ಲಿ ಸುಕೃತಾ ಗಂಡುಬೀರಿ ಹೆಣ್ಣು

Posted By:
Subscribe to Filmibeat Kannada

'ಕಿರಗೂರಿನ ಗಯ್ಯಾಳಿ', 'ಜಟ್ಟ' ಹೀಗೆ ತಮ್ಮ ಮೊದಲ ಚಿತ್ರಗಳಿಂದಲೂ ವಿಶೇಷ ಪಾತ್ರಗಳ ಮೂಲಕ ಗಮನ ಸೆಳೆದಿರುವ ನಟಿ ಸುಕೃತಾ ವಾಗ್ಲೆ, ಸದ್ಯ ಮತ್ತೆರಡು ಚಿತ್ರಗಳಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರೋಹಿತ್ ಪದಕಿ ನಿರ್ದೇಶನದ 'ದಯವಿಟ್ಟು ಗಮನಿಸಿ' ಚಿತ್ರದಲ್ಲಿ ಡಾಕ್ಯುಮೆಂಟರಿ ಮೇಕರ್ ಆಗಿ ಬಣ್ಣಹಚ್ಚಿದ್ದರೇ, 'ಮೇಘ ಅಲಿಯಾಸ್ ಮ್ಯಾಗಿ' ಚಿತ್ರದಲ್ಲಿ ಟಾಮ್ ಬಾಯ್ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ.

ವಿಶಾಲ್ ಪುಟ್ಟಣ್ಣ ನಿರ್ದೇಶನ ಮಾಡುತ್ತಿರುವ 'ಮೇಘ ಅಲಿಯಾಸ್ ಮ್ಯಾಗಿ' ಚಿತ್ರದ ಟೀಸರ್ ಈಗ ಬಿಡುಗಡೆಯಾಗಿದೆ. ಇದೊಂದು ನಾಯಕಿ ಪ್ರಧಾನ ಚಿತ್ರವಾಗಿದ್ದು, ಸಸ್ಪೆನ್ಸ್ ಥ್ರಿಲ್ಲರ್ ಸಬ್ಜೆಕ್ಟ್ ನಿಂದ ಕೂಡಿದೆಯಂತೆ.

Sukrutha Wagle Starrer Magha Alias Maagi Movie Teaser

ಚಿತ್ರದಲ್ಲಿ ಸುಕೃತಾ ಎರಡು ವಿಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದು, ಶಾರ್ಟ್ ಹೇರ್ ಸ್ಟೈಲ್ ನಲ್ಲಿ, ಹುಡುಗರ ರೀತಿಯಲ್ಲಿ ಬಟ್ಟೆ ತೊಟ್ಟು, ಒಳ್ಳೆ ಗಂಡುಬೀರಿ ತರಹ ಮಿಂಚಲಿದ್ದಾರಂತೆ. ಇದಕ್ಕೆ ಈ ಸಣ್ಣ ಟೀಸರ್ ಸಾಕ್ಷಿಯಾಗಿದೆ. ಹೀಗಾಗಿ, ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.

ಇನ್ನು ಸುಕೃತಾ ಈ ಚಿತ್ರದಲ್ಲಿ ನೆಗಿಟೀವ್ ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷ. ಇನ್ನು ಈ ಚಿತ್ರವನ್ನ ವಿನಯ್ ಕುಮಾರ್ ನಿರ್ಮಾಣ ಮಾಡುತ್ತಿದ್ದು, ಡ್ಯಾನ್ಸಿಂಗ್ ಸ್ಟಾರ್ ಖ್ಯಾತಿಯ ತೇಜುಗೌಡ ನಾಯಕನಾಗಿ ಸುಕೃತಾಗೆ ಸಾತ್ ಕೊಡುತ್ತಿದ್ದಾರೆ. ಉಳಿದಂತೆ ನೀತು ಬಾಲ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದು, ಅತಿಶ್ಯ ಜೈನ್ ಸಂಗೀತ ಸಂಯೋಜನೆ ಇದೆ.

English summary
Kannada Actress Sukrutha Wagle Starrer Kannada Movie Magha Alias Maagi Teaser Release. The Movie Directed by Vishal Puttanna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada