ತೆಲುಗಿನಲ್ಲಿ 'ಸೀತೆ'ಯಾದ ಕನ್ನಡದ 'ಗಯ್ಯಾಳಿ' ಹುಡುಗಿ ಸುಕೃತಾ

ಜಟ್ಟ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟಿದ್ದ ಸುಕೃತಾ ವಾಗ್ಲೆ ಕಿರಗೂರಿನ ಗಯ್ಯಾಳಿಗಳು ಚಿತ್ರದ ಮೂಲಕ ಜನರ ಗಮನ ಸೆಳೆದರು. ಹಳ್ಳಿ ಹೆಂಗಸಿನ ಪಾತ್ರದಲ್ಲಿ ಬಣ್ಣ ಹಚ್ಚಿ, ನೈಜ ಅಭಿನಯದ ಮೂಲಕ ಮೋಡಿ ಮಾಡಿದ್ದ ಸುಕೃತಾ ಈಗ ತೆಲುಗಿನಲ್ಲಿ ಸೀತೆಯಾಗಿದ್ದಾರೆ.

ತೆಲುಗಿನ 'ರಾಮ ಚೆಕ್ಕನಿ ಸೀತಾ' ಚಿತ್ರದಲ್ಲಿ ನಟಿಸುವ ಮೂಲಕ ಸುಕೃತಾ ವಾಗ್ಲೆ ಟಾಲಿವುಡ್ ಪ್ರವೇಶ ಮಾಡಿದ್ದಾರೆ. ಸುಕೃತಾ ಮೊದಲ ತೆಲುಗು ಚಿತ್ರದ ಟ್ರೈಲರ್ ಈಗ ಬಿಡುಗಡೆಯಾಗಿದ್ದು, ಇಂಟರೆಸ್ಟಿಂಗ್ ಆಗಿ ಮೂಡಿ ಬಂದಿದೆ.

ಇಂದ್ರ ಈ ಚಿತ್ರದ ನಾಯಕನಾಗಿದ್ದು, ಸುಕೃತಾ ನಾಯಕಿಯಾಗಿ ನಟಿಸಿದ್ದಾರೆ. ರಾಹುಲ್ ಸಿಪ್ಲಿಗುಂಜ, ಪ್ರಿಯದರ್ಶಿ ಕೂಡ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Sukrutha Wagle Telugu Movie Trailer Released

ಶ್ರೀಹರ್ಷ ಮಂದಾ ಅವರು ರೋಮ್ಯಾಂಟಿಕ್ ಲವ್ ಕಮ್ ಕಾಮಿಡಿ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಕೇಶವ ಕಿರಣ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಸದ್ಯ ಟ್ರೈಲರ್ ಮೂಲಕ ಕುತೂಹಲ ಹುಟ್ಟುಹಾಕಿರುವ ರಾಮ ಚೆಕ್ಕನಿ ಸೀತಾ ಬಿಡುಗಡೆಯ ಬಗ್ಗೆ ಮಾಹಿತಿ ನೀಡಿಲ್ಲ. ಕನ್ನಡದಲ್ಲಿ ಕೊನೆಯದಾಗಿ ಮೇಘ ಅಲಿಯಾಸ್ ಮ್ಯಾಗಿ ಚಿತ್ರದಲ್ಲಿ ನಟಿಸಿದ್ದರು. ಆ ಬಳಿಕ ಮತ್ತೆ ಸ್ಯಾಂಡಲ್ ವುಡ್ ಪರದೆ ಮೇಲೆ ಕಾಣಿಸಿರಲಿಲ್ಲ. ಈಗ ಟಾಲಿವುಡ್ ಚಿತ್ರದ ಮೂಲಕ ಪ್ರೇಕ್ಷಕರೆದುರು ಬರಲಿದ್ದಾರೆ ಕನ್ನಡದ ಹುಡುಗಿ.

More from Filmibeat

English summary
Kannada actress Sukrutha Wagle starrer first telugu movie rama chakkani seetha trailer has released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X