KGF 2 Sulthan Song: ಕೆಜಿಎಫ್ 2, 3ನೇ ಹಾಡಿಗೆ ಮುಹೂರ್ತ ಫಿಕ್ಸ್!
ನಟ ಯಶ್ ಅಭಿನಯದ 'ಕೆಜಿಎಫ್ 2' ಚಿತ್ರದ ರಿಲೀಸ್‌ಗೆ ಹತ್ತಿರ ಆಗಿದೆ. ಚಿತ್ರದ ಟ್ರೈಲರ್, ಟೀಸರ್, ಹಾಡುಗಳು ಒಂದೊಂದು, ಒಂದೊಂದು ರೀತಿಯಲ್ಲಿ ದಾಖಲೆ ಬರೆಯುತ್ತಿವೆ. 'ಕೆಜಿಎಫ್ 2' ಚಿತ್ರ ಯಾವ ವಿಚಾರದಲ್ಲಿ ದಾಖಲೆ ಬರೆದಿಲ್ಲ ಎನ್ನುವುದನ್ನು ಹುಡುಕಿದರು ಸಿಗುವುದಿಲ್ಲ ಅನಿಸುತ್ತದೆ. ಅಷ್ಟರ ಮಟ್ಟಿಗೆ ಎಲ್ಲಾ ವಿಚಾರಗಳಲ್ಲೂ ದಾಖಲೆ ಮಾಡುತ್ತಿದೆ ಚಿತ್ರ.
'ಕೆಜಿಎಫ್ 2' ಪ್ಯಾನ್ ಇಂಡಿಯಾ ಸಿನಿಮಾ. ಹಾಗಾಗಿ ಭಾರತದಾದ್ಯಂತ ಚಿತ್ರದ ಸದ್ದು ಮಾಡುತ್ತಾ ಇದೆ. ಈಗಾಗಲೇ 'ಕೆಜಿಎಫ್ 2' ಚಿತ್ರದ ಎರಡು ಹಾಡುಗಳು ರಿಲೀಸ್ ಆಗಿವೆ. ಒಂದೊಂದು ಹಾಡು ಒಂದೊಂದು ನಿಟ್ಟಿನಲ್ಲಿ ದಾಖಲೆ ಮಾಡಿವೆ. ಈಗ ಮತ್ತೊಂದು ಹಾಡು ರಿಲೀಸ್‌ಗೆ ರೆಡಿಯಾಗಿದೆ. ಚಿತ್ರದಲ್ಲಿ ರಾಕಿ ಭಾಯ್ ಬಗ್ಗೆ ಹೇಳಲು ಸುಲ್ತಾನ್ ಹಾಡು ರಿಲೀಸ್ ಆಗುತ್ತಿದೆ.
ಏಪ್ರಿಲ್ 14ಕ್ಕೆ ಕೆಜಿಎಫ್ 2 ಚಿತ್ರ ರಿಲೀಸ್ ಆಗುತ್ತಾ ಇದೆ. ಒಂದು ದಿನ ಮುಂಚಿತವಾಗಿ ಏಪ್ರಿಲ್ 13ಕ್ಕೆ ಸುಲ್ತಾನ್ ಹಾಡು ರಿಲೀಸ್ ಆಗುತ್ತಾ ಇದೆ. ಈ ಹಾಡಿನ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಈ ಹಿಂದೆ ರಿಲೀಸ್ ಆದ ತೂಫಾನ್ ಹಾಡು ಒಂದು ಪುಟ್ಟ ಕಥೆಯಂತೆ ಇತ್ತು. ಧೈರ್ಯ ಇಲ್ಲದ ಬಡಪಾಯಿಗಳಿಗೆ ರಾಕಿ ಭಾಯ್ ಶಕ್ತಿಯಾಗಿ ನಿಂತ ಬಗ್ಗೆ ಕಥೆ ಹೇಳುವ ಹಾಡಿದು. ಹಾಗಾಗಿ ಹಾಡಿನ ಆರಂಭದಲ್ಲಿ ಒಂದಷ್ಟು ಡೈಲಾಗ್‌ಗಳು ಬರುತ್ತವೆ. 'ನಮಗೆ ಧೈರ್ಯ ಇರಲಿಲ್ಲ, ಶಕ್ತಿ ಇರಲಿಲ್ಲ, ನಂಬಿಕೆ ಇರಲಿಲ್ಲ. ಆದರೆ ತುಂಬಾ ವರ್ಷ ಆದ್ಮೇಲೆ ಸಾವನ್ನು ನಾವು ತುಳಿದೆವು, ಅವನು ಕತ್ತಿ ಬೀಸಿದ ರಭಸಕ್ಕೆ ಒಂದು ಗಾಳಿ ಹುಟ್ಟಿ ಕೊಳ್ತು. ಆ ಗಾಳಿ ನರಳಾಡುತ್ತಿರೋ ಪ್ರತಿಯೊಬ್ಬರಿಗೂ ಉಸಿರು ಕೊಟ್ತು. ನಿಮಗೆ ಒಂದು ಸಲಹೆ ಕೊಡ್ತೀನಿ ನೀವೂ ಮಾತ್ರ ಅವನಿಗೆ ಅಡ್ಡ ನಿಲ್ಲೋಕೆ ಹೋಗ್ಬೇಡಿ' ಎನ್ನುವ ಡೈಲಾಗ್‌ಗಳು ಇವೆ. ಇದು ಕೆಜಿಎಫ್ ಮೊದಲ ಭಾಗದಲ್ಲಿ ಏನಾಯ್ತು ಎನ್ನುವ ಕಥೆ.
Recommended Video

'ಕೆಜಿಎಫ್ 2' ಚಿತ್ರದ ಎರಡನೆ ಹಾಡು ತಾಯಿಯ ಕುರಿತಾಗಿ ಇದೆ. ರಾಕಿ ಭಾಯ್ ತಾಯಿ ತನ್ನ ಮಗನಿಗಾಗಿ ಹಾಡುವ ಹಾಡು ಇದಾಗಿದ್ದು. ನನ್ನ ಮಗ ಹೇಗೆ ಬೆಳೆಯಬೇಕು. ನನ್ನ ಮಗ ಹೇಗಿರಬೇಕು ಎಂದು ಮಹಾತ್ವಕಾಂಕ್ಷೆ ಇರುವ ತಾಯಿಯೊಬ್ಬಳು ಹೇಳುವ ಹಾಡು ಇದಾಗಿದೆ. ಇನ್ನು ಈಗ ಬರಲಿರುವ ಸುಲ್ತಾನ್ ಹಾಡು ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದೆ.


Click it and Unblock the Notifications











