Don't Miss!
- News BREAKING: ಬೆಂಗಳೂರಿನಲ್ಲಿ ರೈಲಿಗೆ ಸಿಲುಕಿ ಮೂವರು ಸಾವು
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Automobiles ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- Finance Bengaluru Suburban Rail Project: ದೊಡ್ಡಜಾಲದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕ, ವಿವರ
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದರ್ಶನ್ 'ಬಾಸ್' ಎಂದು ಬಾಯ್ತುಂಬ ಕರೆದ ಸುಮಲತಾ
Recommended Video
ಕಳೆದ ಒಂದು ವಾರದಿಂದ ನಡೆಯುತ್ತಿರುವ ಬಾಸ್ ಬಿರುದಿನ ವಿವಾದದ ಅದ್ಯಾಕೋ ತಣ್ಣಗೆ ಆಗುವ ಹಾಗೆ ಕಾಣುತ್ತಿಲ್ಲ. ದರ್ಶನ್ ಅಭಿಮಾನಿಗಳು ಸಾಕಷ್ಟು ವರ್ಷಗಳಿಂದ ದರ್ಶನ್ ಅವರನ್ನು ಬಾಸ್ ಎಂದು ಕರೆಯುತ್ತಾ ಬರುತ್ತಿದ್ದೇವೆ. ಆದ್ದರಿಂದ ಆ ಬಿರುದನ್ನು ಎಂದಿಗೂ ಬಿಟ್ಟುಕೊಡಲು ತಯಾರಿಲ್ಲ ಎಂದು ಪಣತೊಟ್ಟಿದ್ದಾರೆ.
ಇತ್ತ ಶಿವರಾಜ್ ಕುಮಾರ್ ಅಭಿಮಾನಿಗಳಾಗಲಿ ನಿರ್ದೇಶಕ ದುನಿಯಾ ಸೂರಿ ಆಗಲಿ ಈ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೇ ಸುಮ್ಮನಾಗಿದ್ದಾರೆ. ಇವೆಲ್ಲಾ ವಿವಾದಗಳ ಮಧ್ಯೆ ನಟಿ ಸುಮಲತಾ ಅಂಬರೀಶ್ ದರ್ಶನ್ ಅವರನ್ನು ಬಾಸ್ ಎಂದು ಬಾಯ್ತುಂಬ ಕರೆದಿದ್ದಾರೆ.
ಡಿ ಬಾಸ್ ಹೊಂದಿರುವ ಪರಿಸರ ಕಾಳಜಿಗೆ ಶಹಭಾಸ್ ಎನ್ನಲೇಬೇಕು
ಅಷ್ಟಕ್ಕೂ ದರ್ಶನ್ ಅವರನ್ನು ಸುಮಲತಾ ಬಾಸ್ ಎಂದು ಕರೆದದ್ದೂ ಏಕೆ ಅನ್ನುವುದು ಸ್ಪೆಷಲ್. ನಟ ದರ್ಶನ್ ತಮ್ಮ ಫಾರ್ಮ್ ಹೌಸ್ ನಲ್ಲಿ 1800ಕ್ಕೂ ಹೆಚ್ಚು ವಿವಿಧ ಜಾತಿಯ ಹಾಗೂ ಅಪರೂಪ ತಳಿಯ ಸಸ್ಯಗಳನ್ನ ನೆಡೆಸಲು ನಿರ್ಧಾರ ಮಾಡಿದ್ದಾರೆ ಈ ವಿಚಾರ ತಿಳಿದ ಸುಮಲತಾ ಅದಕ್ಕೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.
ಅದೇ ವಿಚಾರದ ಬಗ್ಗೆ ಟ್ವೀಟ್ ಮಾಡಿರುವ ಸುಮಲತಾ ಅಂಬರೀಶ್ "ಇದೊಂದು ಉತ್ತಮ ಉದಾಹರಣೆ ದರ್ಶನ್ ಸಾವಿರಾರು ಅಭಿಮಾನಿಗಳಿಗೆ ಬಾಸ್ ಆಗಲು" ಎಂದಿದ್ದಾರೆ. ಟ್ವೀಟ್ ನೋಡಿರುವ ಅಭಿಮಾನಿಗಳು ತಮ್ಮ ಸಂತಸವನ್ನು ವ್ಯಕ್ತ ಪಡಿಸಿದ್ದಾರೆ.