ಅಂಬರೀಶ್ ಇಲ್ಲದ ಪ್ರೇಮಿಗಳ ದಿನ : ನಾಲ್ಕು ಸಾಲು ಬರೆದ ಸುಮಲತಾ
ಇಂದು ಪ್ರೇಮಿಗಳ ದಿನ. ಎಲ್ಲರೂ ತಮ್ಮ ಪ್ರೀತಿ ಪಾತ್ರರ ಜೊತೆಗೆ ಈ ದಿನವನ್ನು ಕಳೆಯುತ್ತಿದ್ದಾರೆ. ಆದರೆ, ಪ್ರೀತಿ ಎನ್ನುವುದು ಯಾವಾಗಲೂ ಜೊತೆಯಲ್ಲಿ ಇರುವುದಷ್ಟೇ ಅಲ್ಲ. ಆ ವ್ಯಕ್ತಿ ನಮ್ಮನ್ನು ಬಿಟ್ಟು ಹೋದಾಗಲೂ ಸದಾ ಇರಬೇಕು.
ನಟಿ ಸುಮಲತಾ ಅಂಬರೀಶ್ ಪ್ರೇಮಿಗಳ ದಿನದ ವಿಶೇಷವಾಗಿ ಶುಭಾಶಯವನ್ನು ತಿಳಿಸಿದ್ದಾರೆ. ನಿಜವಾದ ಪ್ರೀತಿ ಎಂದರೆ ಏನು ಎನ್ನುವುದನ್ನು ತಮ್ಮ ಸಾಲುಗಳ ಮೂಲಕ ವ್ಯಕ್ತಪಡಿಸಿದ್ದಾರೆ.
''ಪ್ರೀತಿ ಎಂದಿಗೂ ಕೊನೆ ಆಗುವುದಿಲ್ಲ. ಜೀವನ ಪರಿಯಂತ ಅವರು ನನ್ನ ಮತ್ತು ಅಭಿಯನ್ನು ಕಾಪಾಡುತ್ತಾರೆ. ನಮ್ಮ ಮಗನನ್ನು ಆಶೀರ್ವಾದ ಮಾಡಿ. ಅಭಿಷೇಕ್ ನಟನೆಯ 'ಅಮರ್' ಟೀಸರ್ ಇಂದು ಬಿಡುಗಡೆಯಾಗುತ್ತಿದೆ. ಪ್ರೀತಿ ಏನು ಎಂದು ತಿಳಿದವರಿಗೆಲ್ಲ Happy valentine day.'' ಎಂದು ಸುಮಲತಾ ಟ್ವೀಟ್ ಮಾಡಿದ್ದಾರೆ.

ಪ್ರೇಮಿಗಳ ದಿನವನ್ನು ಪ್ರತಿ ವರ್ಷ ಅಂಬರೀಶ್ ಹಾಗೂ ಸುಮಲತಾ ಇಬ್ಬರು ಆಚರಣೆ ಮಾಡುತ್ತಿದ್ದರು. ಆದರೆ, ಈ ವರ್ಷ ಅಂಬರೀಶ್ ಅವರೇ ಇಲ್ಲದಂತೆ ಆಗಿದೆ. ಏನೇ ಆಗಿದ್ದರೂ ಅಂಬರೀಶ್ ಅವರ ಮೇಲೆ ಸುಮಲತಾ ಇಟ್ಟಿರುವ ಪ್ರೀತಿ ಮಾತ್ರ ಹಾಗೇಯೆ ಇರುತ್ತದೆ.
ಅಂಬರೀಶ್ ಪುತ್ರ ಅಭಿಷೇಕ್ ನಟನೆ 'ಅಮರ್' ಚಿತ್ರದ ಮೊದಲ ಟೀಸರ್ ಇಂದು ಬಿಡುಗಡೆಯಾಗುತ್ತಿದೆ.


Click it and Unblock the Notifications











