ಅದು ಅವರ ವ್ಯೆಯಕ್ತಿಕ ಆಯ್ಕೆ, ಮುನಿಸಿಕೊಂಡ ಮಗನ ಬಗ್ಗೆ ಸುಮಲತಾ ಅಂಬರೀಶ್ ಪ್ರತಿಕ್ರಿಯೆ..!

ಸಾಮಾಜಿಕ ಜಾಲತಾಣದ ಮನುಷ್ಯನನ್ನು ಹೆಚ್ಚು ಕಂಟ್ರೋಲ್ ಮಾಡುತ್ತಿರುವ ಮಾಧ್ಯಮ. ಇದು ಎಷ್ಟರ ಮಟ್ಟಿಗೆ ಮನುಷ್ಯನಿಗೆ ದಾರಿ ತೋರಿಸುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ದಾರಿಯನ್ನೂ ಕೂಡ ತಪ್ಪಿಸುತ್ತೆ. ಇದಕ್ಕೆ ಸುಮಲತಾ ಅಂಬರೀಶ್ ಇಂದು ಬರೆದುಕೊಂಡ ಸಾಲುಗಳು ಅತ್ಯುತ್ತಮ ಉದಾಹರಣೆ.

ಹೌದು, ಕಾಗೆ ಕೂರುವುದಕ್ಕೂ, ಕೊಂಬೆ ಮುರಿಯುವುದಕ್ಕೂ ಸರಿಹೋಯ್ತು ಎನ್ನುವಂತೆ ಇಂದು ದರ್ಶನ್ ಅಳಿದು ಉಳಿದ ತನ್ನ ಆರು ಆಪ್ತ ಹಿಂಬಾಲಕರನ್ನು ಅನ್ ಫಾಲೋ ಮಾಡಿದ ಬೆನ್ನಲ್ಲೇ ಸುಮಲತಾ ಆಸ್ಕರ್ ಅವಾರ್ಡ್‌ನ ಪ್ರಸ್ತಾಪಿಸಿದರು. ಬೆಸ್ಟ್ ಆಸ್ಕರ್ ಅವಾರ್ಡ್ ಯಾರಿಗೆ ಹೋಗುತ್ತೆ ಅಂದರೆ ಯಾರು ಸತ್ಯವನ್ನ ತಿರುಚುತ್ತಾರೆ, ಪಶ್ಚಾತಾಪ ಇಲ್ಲದೆ ಬೇರೆಯವರಿಗೆ ನೋವು ಮಾಡುತ್ತಾರೆ, ತಪ್ಪನ್ನು ಬೇರೆಯವರ ಮೇಲೆ ಹಾಕುತ್ತಾರೆ. ಆದರೂ ಅವರು ತಮ್ಮನ್ನು ತಾವು ಹೀರೋ ಎಂದುಕೊಳ್ಳುತ್ತಾರೆ ಎಂದೆಲ್ಲ ಬರೆದುಕೊಂಡಿದ್ದರು.

Sumalatha Ambareesh clarifies cryptic tweet sparking rift rumors with Darshan

ಸುಮಲತಾ ಅವರ ಈ ಬರಹ ನೋಡಿ ದರ್ಶನ್ ಮತ್ತು ಸುಮಲತಾ ಅವರ ತಾಯಿ ಮತ್ತು ಮಗನ ಸಂಬಂಧದಲ್ಲಿ ಬಿರುಕು ಮೂಡಿದೆ ಎಂದು ಮಾತನಾಡಲು ಶುರು ಮಾಡಿದರು. ಪರೋಕ್ಷವಾಗಿ ದರ್ಶನ್ ಅವರ ಬಗ್ಗೆಯೇ ಸುಮಲತಾ ಮಾತನಾಡಿದ್ದಾರೆ ಎಂದು ಚರ್ಚೆಗೆ ನಾಂದಿಯನ್ನು ಹಾಡಿದರು. ಈ ವಿಚಾರದ ಕುರಿತು ಇಂದು ಬೆಳ್ಳಗ್ಗೆಯಿಂದ ಮಧ್ಯಾಹ್ನದವರೆಗೆ ಹಾಗಂತೆ ಹೀಗಂತೆ ಎಂದು ಅನೇಕರು ಕಾಲಹರಣವನ್ನು ಮಾಡಿದರು. ಇದೆಲ್ಲದಕ್ಕೂ ಈಗ ಸುಮಲತಾ ಫುಲ್ ಸ್ಟಾಪ್ ಹಾಕಿದ್ದಾರೆ. ನಾನು ಹೇಳಿದ್ದೇ ಬೇರೆ ನೀವು ಅರ್ಥ ಮಾಡಿಕೊಂಡಿದ್ದೇ ಬೇರೆ ಎಂದು ಹೇಳಿದ್ಧಾರೆ.

ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸ್ಪಷ್ಟೀಕರಣವನ್ನು ನೀಡಿರುವ ಸುಮಲತಾ 'ನನ್ನ ಹಿಂದಿನ ಒಂದು ಪೋಸ್ಟ್‌ ಕುರಿತು ಅನಗತ್ಯವಾದ ವಿವಾದ ಸೃಷ್ಟಿಯಾಗಿರುವುದರಿಂದ ಈ ಸ್ಪಷ್ಟನೆ ನೀಡಲು ನಾನು ಇಚ್ಛಿಸುತ್ತೇನೆ. ನನ್ನ ಪೋಸ್ಟ್‌ ಯಾರನ್ನಾದರೂ ಗುರಿಯಾಗಿಸಿ ಮಾಡಲಾದದ್ದಲ್ಲ; ಅದು ಸರಳವಾಗಿ ಹಂಚಿಕೊಂಡ ವಿಷಯ ಮಾತ್ರ' ಎಂದು ಹೇಳಿದ್ದಾರೆ.

ಮುಂದುವರೆದು 'ಯಾರು ನನ್ನನ್ನು ಫಾಲೋ ಮಾಡುತ್ತಾರೆ ಅಥವಾ ಅನ್‌ಫಾಲೋ ಮಾಡುತ್ತಾರೆ ಎಂಬುದನ್ನು ಗಮನಿಸುವ ಅಭ್ಯಾಸ ಹೊಂದಿಲ್ಲ. ಮಾಧ್ಯಮಗಳಲ್ಲಿ ಈ ವಿಷಯದ ಬಗ್ಗೆ ಸುದ್ದಿಗಳು ಬಂದ ಬಳಿಕವೇ ನನಗೂ ಈ ಬೆಳವಣಿಗೆ ತಿಳಿದಿದ್ದು' ಎಂದಿರುವ ಸುಮಲತಾ 'ನಿಜಕ್ಕೂ, ದರ್ಶನ್ ಅವರು ಇನ್‌ಸ್ಟಾಗ್ರಾಂ ಮತ್ತು ಟ್ವಿಟರ್‌ನಲ್ಲಿ ಯಾರನ್ನೂ ಫಾಲೋ ಮಾಡುತ್ತಿಲ್ಲ. ಇದು ಅವರ ವೈಯಕ್ತಿಕ ಆಯ್ಕೆ, ಮತ್ತು ಅದನ್ನು ಎಲ್ಲರೂ ಗೌರವಿಸಬೇಕು. ಇದನ್ನು ಬೇರೆ ರೀತಿಯಲ್ಲಿ ಅರ್ಥೈಸುವುದು ಅಗತ್ಯವಿಲ್ಲ' ಎಂದು ಹೇಳಿದ್ದಾರೆ.

'ತಾಯಿ-ಮಗನ ಸಂಬಂಧದಲ್ಲಿ ಅನಗತ್ಯವಾದ ವಿವಾದಗಳನ್ನು ಸೃಷ್ಟಿಸಬೇಡಿ ಎಂದು ಎಲ್ಲರಲ್ಲಿ ಮನವಿ ಮಾಡುತ್ತೇನೆ. ನನ್ನ ಪೋಸ್ಟ್‌ ಯಾರನ್ನೂ ಉದ್ದೇಶಿಸಿಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ. ನಾನು ನನ್ನ ಕುಟುಂಬ ಹಾಗೂ ಆಪ್ತರ ವಿಚಾರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಎಳೆದು ತರುವ ಅಭ್ಯಾಸವನ್ನು ಎಂದಿಗೂ ಹೊಂದಿಲ್ಲ' ಎಂದು ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಅನೇಕ ಮಾಧ್ಯಮಗಳಿಗೆ ಕೂಡ ಪ್ರತಿಕ್ರಿಯೆಯನ್ನು ನೀಡಿರುವ ಸುಮಲತಾ ಅಂಬರೀಶ್, ನಾನು ಯಾರನ್ನೋ ಗುರಿಯಾಗಿಸಿ ಆ ಪೋಸ್ಟ್ ಹಾಕಿರಲಿಲ್ಲ. ನಾನು ಮಾಡಿದ್ದ ಪೋಸ್ಟ್​ಗೂ ಮತ್ತು ದರ್ಶನ್​ಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಇದೊಂದು ಸಿಲ್ಲಿ ವಿಚಾರ ಎನ್ನುವುದು ನನ್ನ ಭಾವನೆ, ನಮ್ಮ ಪ್ರೀತಿ ಮತ್ತು ವಿಶ್ವಾಸದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಎಂದಿರುವ ಸುಮಲತಾ, ನನ್ನ ಜೀವನದಲ್ಲಿ ಋಣಾತ್ಮಕ ಚಿಂತನೆಗಳಿಗೆ ಜಾಗವಿಲ್ಲ ಎಂದು ಹೇಳಿದ್ದಾರೆ. ನನ್ನ ಬಗ್ಗೆ ಕೆಟ್ಟದಾಗಿ ಮಾತಾಡಿದವರಿಗೂ ಕೂಡ ನಾನು ಒಳ್ಳೆಯದನ್ನೇ ಬಯಸುತ್ತೇನೆ, ನಮ್ಮ ಮನೆಯಲ್ಲಿ ದರ್ಶನ್ ಇಲ್ಲದೆ ಯಾವ ಕಾರ್ಯಕ್ರಮ ನಡೆಯಲ್ಲ ಎಂದು ಹೇಳಿದ್ದಾರೆ. ನಾನು ಏನು ಎನ್ನುವುದು ದರ್ಶನ್‌ಗೆ ಗೊತ್ತು, ದರ್ಶನ್ ಏನು ಎನ್ನುವುದು ನನಗೆ ಗೊತ್ತು ಅಷ್ಟೇ ಸಾಕು ಜೈಲಿಂದ ಹೊರ ಬಂದ ಮೇಲೆ ದರ್ಶನ್‌ನ ಭೇಟಿ ಮಾಡಲು ಸಾಧ್ಯವಾಗಿಲ್ಲ ಎಂದು ಕೂಡ ಸುಮಲತಾ ಅಂಬರೀಶ್ ಹೇಳಿದ್ಧಾರೆ. ಇಷ್ಟೇ ಅಲ್ಲ ಕೊನೆ ಉಸಿರು ಇರುವವರೆಗೂ ದರ್ಶನ್ ನನ್ನ ಮಗ ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ಧಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X