ಸುಮಲತಾ ಅಬ್ಬರಕ್ಕೆ ಬಿತ್ತು ಬ್ರೇಕ್: ಇದು ಯಾರ ಕೈವಾಡ?
Recommended Video
ಮಂಡ್ಯದಲ್ಲಿ ಸಮಲತಾ ಅಂಬರೀಶ್ ಅವರನ್ನು ಸೋಲಿಸಲೇ ಬೇಕೆಂದು ಕುಮಾರಸ್ವಾಮಿ ತಂಡ ಪಣ ತೊಟ್ಟಿದ್ದರೆ, ಯಶ್ ಮತ್ತು ದರ್ಶನ್ ಸುಮಲತಾ ಅವರನ್ನು ಗೆಲ್ಲಿಸಲೇ ಬೇಕೆಂದು ಹಠತೊಟ್ಟು ಪ್ರಚಾರದ ಮಾಡುತ್ತಿದ್ದಾರೆ.
ಸುಮಲತಾ ವಿರುದ್ಧ ಮಾತಿನ ಬಾಣಗಳು ಹರಿದು ಬರುತ್ತಿದ್ದರು ತಲೆಕೆಡಿಸಿಕೊಳ್ಳದೆ ಧೈರ್ಯವಾಗಿಯೇ ಎಲ್ಲವನ್ನು ಎದುರಿಸುತ್ತಾ ಸುಮಲತಾ ಮತಯಾಚನೆಯಲ್ಲಿ ತೊಡಗಿಕೊಂಡಿದ್ದಾರೆ. ಸುಮಲತಾ ಅವರನ್ನು ಮಣಿಸಲು ವಿರೋಧಿ ಬಣ ಸಾಕಷ್ಟು ಕಸರತ್ತು ಮಾಡುತ್ತಿದೆ.
ಸುಮಲತಾ ಅವರು ಸಾಮಾಜಿಕಾ ಜಾಲತಾಣವನ್ನು ಪ್ರಚಾರಕ್ಕಾಗಿ ಚೆನ್ನಾಗಿ ಬಳಸಿಕೊಳ್ಳುತ್ತಿದ್ದರು. ರಾಜಕೀಯ ವಿಚಾರವಾಗಿ ಪ್ರತೀ ದಿನದ ಬೆಳವಣಿಗೆಗಳನ್ನು 'ಸುಮಲತಾ ಅಂಬರೀಶ್' ಎನ್ನುವ ಅಧಿಕೃತ ಫೇಸ್ ಬುಕ್ ಪೇಜ್ ನಲ್ಲಿ ಶೇರ್ ಮಾಡುತ್ತಿದ್ದರು. ಆದ್ರೀಗ ಸುಮಲತಾ ಅವರ ಪ್ರಮುಖ ಅಸ್ತ್ರವಾಗಿದ್ದ ಫೇಸ್ ಬುಕ್ ಖಾತೆಯನ್ನು ಬ್ಲಾಕ್ ಮಾಡುವ ಮೂಲಕ ಪ್ರಚಾರದ ಅಬ್ಬರಕ್ಕೆ ಬ್ರೇಕ್ ಹಾಕಲಾಗಿದೆ. ಸುಮಲತಾ ಅವರ ಫೇಸ್ ಬುಕ್ ಬ್ಲಾಕ್ ಮಾಡಿರುವ ಬಗ್ಗೆ ಮಾಹಿತಿ ಇಲ್ಲವಾದರು, ಅಂಬರೀಶ್ ಪತ್ನಿ ನೇರವಾಗಿ ಎದುರಾಳಿಗಳ ಕಡೆ ಬೆರಳು ತೋರಿಸುತ್ತಿದ್ದಾರೆ.

ಈ ಬಗ್ಗೆ ಸ್ವತಃ ಸುಮಲತಾ ಅಂಬರೀಶ್ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ. " ನನ್ನ ಫೇಸ್ ಬುಕ್ ಪೇಜ್ ನ ವರ್ಜಿನಲ್ ಕುತಂತ್ರದ ಭಾಗವಾಗಿ ಬ್ಲಾಕ್ ಮಾಡಿಸಿದ್ದಾರೆ. ಇರಲಿ ಎಲ್ಲವನ್ನು ಎದುರಿಸಲು ನಾನು ತಯಾರಾಗಿದ್ದೀನೆ. ತಕ್ಷಣವೆ ನಾನು ಹೊಸ ಪೇಜ್ ಆರಂಭಿಸಿದ್ದೇನೆ" ಎಂದು ಹೇಳಿ ಫೇಸ್ ಬುಕ್ ಪೇಜ್ ಬ್ಲಾಕ್ ಆಗುತ್ತಿದಂತೆ ಹೊಸ ಪೇಜ್ ತೆರೆದಿದ್ದಾರೆ.
ಸುಮಲತಾ ಅಂಬರೀಶ್ ಹೆಸರಲ್ಲಿಯೇ ಹೊಸ ಪೇಸ್ ಬುಕ್ ಖಾತೆಯನ್ನು ಓಪನ್ ಮಾಡಿದ್ದಾರೆ. ಹೊಸ ಪೇಜ್ ನಲ್ಲೀಗ ಪ್ರಚಾರ ಮತ್ತು ರಾಜಕೀಯ ವಿಚಾರದ ಬೆಳವಣಿಗೆಗಳನ್ನು ಶೇರ್ ಮಾಡುತ್ತಿದ್ದಾರೆ. ಸದ್ಯ ಬ್ಲಾಕ್ ಆಗಿರುವ ಪೇಜ್ ನಲ್ಲಿ ನಟರಾದ ದರ್ಶನ್ ಮತ್ತು ಯಶ್ ಅವರ ಜಾಥದ ಬಗ್ಗೆ ಹೆಚ್ಚು ವೀಡಿಯೊ ಮತ್ತು ಫೋಟೋಗಳನ್ನು ಶೇರ್ ಮಾಡಿದ್ದರು. ಈಗ ಹೊಸ ಪೇಜ್ ನಲ್ಲಿ ಸುಮಲತಾ ಅವರಿಗೆ ಸಂಬಂಧಿಸಿದ ಎಲ್ಲಾ ಅಪ್ ಡೇಟ್ಸ್ ಸಿಗುತ್ತಿದೆ.


Click it and Unblock the Notifications











